ದಕ್ಷಿಣ ಕನ್ನಡದ ಪ್ರಥಮ ‘ಮಲತ್ಯಾಜ್ಯ ನಿರ್ವಹಣಾ ಘಟಕ’ಕ್ಕೆ ಜೀವಕಳೆ

| ಬಂಟ್ವಾಳದ 51 ಗ್ರಾ.ಪಂ.ಗಳ ತ್ಯಾಜ್ಯ ಸಂಸ್ಕರಣೆ | ಗೋಳ್ತಮಜಲು ಗ್ರಾಮದ ಚಿಮಿಣಿಗುರಿಯಲ್ಲಿ ಕಾರ್ಯ

ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಬಹುಗ್ರಾಮ ಮಲತ್ಯಾಜ್ಯ ನಿರ್ವಹಣಾ ಘಟಕಕ್ಕೆ (ಎಫ್.ಎಸ್.ಟಿ.ಪಿ.) ಎದುರಾಗಿದ್ದ ತಾಂತ್ರಿಕ ಮತ್ತು ವಾಹನ ಕೊರತೆ ತೊಡಕುಗಳು ಬಗೆಹರಿದಿವೆ. ಗೋಳ್ತಮಜಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಮಿಣಿಗುರಿಯಲ್ಲಿ ಫೆಬ್ರವರಿ, 2023 ರಂದು ಆರಂಭಗೊಂಡಿದ್ದ ಈ ಮಾದರಿ ಘಟಕವು ಸಕ್ಕಿಂಗ್ ಯಂತ್ರದ ಅಭಾವ ಸಹಿತ ಕೆಲವೊಂದು ಸಮಸ್ಯೆಗಳಿಂದ ಸ್ಥಗಿತಗೊಂಡಿತ್ತು. ಇದೀಗ ತಾಲೂಕಿನ ಎಲ್ಲಾ 51 ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಂತೆ ಪುನಃ ಕಾರ್ಯಾಚರಣೆ ಆರಂಭಿಸುವ ಮೂಲಕ ಜಿಲ್ಲೆಯ ಗ್ರಾಮೀಣ ನೈರ್ಮಲ್ಯ ವಿಚಾರಕ್ಕೆ ಸಂಬಂಧಿಸಿ ಉತ್ತಮ ಪ್ರಗತಿಯಾಗಿದೆ.

64 ಲಕ್ಷ ವೆಚ್ಚದ ಸ್ವಚ್ಛ ಭಾರತ್ ಮಿಷನ್ ಯೋಜನೆ

ಜಾಹೀರಾತು

ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಅಡಿಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಈ ಘಟಕವು 64 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.

ವಾರಕ್ಕೆ 18 ಸಾವಿರ ಲೀಟರ್ ಸಂಸ್ಕರಣಾ ಸಾಮರ್ಥ್ಯ ಇದಕ್ಕಿದೆ. ಆರಂಭದಲ್ಲಿ 25 ಪಂಚಾಯಿತಿಗಳಿಗೆ ಸೀಮಿತವಾಗಿದ್ದಾಗ ನಿರೀಕ್ಷಿತ ಪ್ರಮಾಣದಲ್ಲಿ ತ್ಯಾಜ್ಯ ಬರುತ್ತಿರಲಿಲ್ಲ. ಪ್ರಸ್ತುತ ಬಂಟ್ವಾಳ ತಾಲೂಕಿನ ಸಂಪೂರ್ಣ 51 ಗ್ರಾಮ ಪಂಚಾಯಿತಿಗಳನ್ನು ಈ ಘಟಕಕ್ಕೆ ಸಂಯೋಜಿಸಲಾಗಿದೆ.

ಸೇವಾ ಶುಲ್ಕ ಹೇಗಿದೆ: ಮನೆ ಹಾಗೂ ವಾಣಿಜ್ಯ ಸಂಕೀರ್ಣಗಳ ಶೌಚಾಲಯ ಗುಂಡಿ (ಸೆಪ್ಟಿಕ್ ಟ್ಯಾಂಕ್) ಭರ್ತಿಯಾದಾಗ ತೆರವುಗೊಳಿಸಲು ಬಂಟ್ವಾಳ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಸಕ್ಕಿಂಗ್ ಯಂತ್ರವನ್ನು ಕಾರ್ಯಾಚರಣೆಗೆ ಇಳಿಸಿದೆ. ತಾ.ಪಂ. ಸಕ್ಕಿಂಗ್ ಯಂತ್ರಕ್ಕೆ ನಿಗದಿತ ಶುಲ್ಕ 3,000 ರೂ ಜೊತೆಗೆ ಪ್ರತಿ ಕಿಲೋಮೀಟರ್‌ಗೆ 50 ರೂಗಳಂತೆ ಸಾಗಣೆ ವೆಚ್ಚ ವಿಧಿಸಲಾಗುತ್ತದೆ. ಪ್ರಸ್ತುತ ಕಾಯಂ ಸಿಬ್ಬಂದಿ ಇಲ್ಲದ ಕಾರಣ ಹೊರಗಿನ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದ್ದು, ಅವರ ವೆಚ್ಚವನ್ನು ಹೆಚ್ಚುವರಿಯಾಗಿ ಪಡೆಯಲಾಗುತ್ತದೆ. ಪ್ರಸ್ತುತ ಚಾಲ್ತಿಯಲ್ಲಿರುವ ದರಗಳನ್ನು ಸುಮಾರು 9 ವರ್ಷಗಳ ಹಿಂದೆ ನಿಗದಿಪಡಿಸಲಾಗಿದ್ದು, ನಿರ್ವಹಣಾ ವೆಚ್ಚಕ್ಕೆ ತಕ್ಕಂತೆ ಮುಂದಿನ ದಿನಗಳಲ್ಲಿ ದರ ಪರಿಷ್ಕರಣೆಯಾಗುವ ಸಾಧ್ಯತೆ ಇದೆ.

===

VNR GOLD

ಗೊಬ್ಬರ ಉತ್ಪಾದನೆ

ರಾಜ್ಯದ 16 ಆಯ್ದ ಸ್ಥಳಗಳಲ್ಲಿ ಎಫ್.ಎಸ್.ಟಿ.ಪಿ. ಘಟಕಗಳನ್ನು ಅನುಷ್ಠಾನಗೊಳಿಸಿದಾಗ ದ.ಕ. ಜಿಲ್ಲೆಯಿಂದ ಗೋಳ್ತಮಜಲು ಮತ್ತು ಉಜಿರೆಯನ್ನು ಆಯ್ಕೆ ಮಾಡಲಾಗಿತ್ತು. ಉಜಿರೆಯಲ್ಲಿ ಯೋಜನೆ ಯಶಸ್ವಿಯಾಗಿದ್ದರೂ, ಗೋಳ್ತಮಜಲಿನಲ್ಲಿ ಕೆಲವು ತಾಂತ್ರಿಕ ಅಡೆತಡೆಗಳು ಎದುರಾಗಿದ್ದವು. ಇದೀಗ ಸಮಸ್ಯೆಗಳು ಬಗೆಹರಿದಿವೆ. ಸಂಸ್ಕರಣೆಯ ನಂತರ ಹೊರಬರುವ ತ್ಯಾಜ್ಯವನ್ನು ಸುರಕ್ಷಿತ ಕಾಂಪೋಸ್ಟ್ ಗೊಬ್ಬರವಾಗಿ ಪರಿವರ್ತಿಸಿ ಕೃಷಿ ಬಳಕೆಗೆ ನೀಡಲು ವ್ಯವಸ್ಥೆ ಮಾಡಲಾಗಿದೆ.

===

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7 ಬಹುಗ್ರಾಮ ಘಟಕಗಳು

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗ್ರಾಮೀಣ ನೈರ್ಮಲ್ಯ ಕಾಪಾಡಲು ಒಟ್ಟು 7 ಬಹುಗ್ರಾಮ ಮಲತ್ಯಾಜ್ಯ ನಿರ್ವಹಣಾ ಘಟಕಗಳು ವಿವಿಧ ಹಂತಗಳಲ್ಲಿ ಕಾರ್ಯಾಚರಿಸುತ್ತಿವೆ:

  1. ಗೋಳ್ತಮಜಲು (ಬಂಟ್ವಾಳ)
  2. ಉಜಿರೆ (ಬೆಳ್ತಂಗಡಿ)
  3. ಚಾರ್ಮಾಡಿ (ಬೆಳ್ತಂಗಡಿ)
  4. ಅಲಂಕಾರು (ಕಡಬ)
  5. ಕೊಳ್ತಿಗೆ (ಪುತ್ತೂರು)
  6. ಪಂಜ (ಸುಳ್ಯ)
  7. ನರಿಂಗಾನ (ಉಳ್ಳಾಲ)

(ಕ್ವೋಟ್)

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ದಕ್ಷಿಣ ಕನ್ನಡದ ಪ್ರಥಮ ‘ಮಲತ್ಯಾಜ್ಯ ನಿರ್ವಹಣಾ ಘಟಕ’ಕ್ಕೆ ಜೀವಕಳೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*