ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕದಲ್ಲಿ ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ.) ವತಿಯಿಂದ ಆಯೋಜಿಸಲಾಗುವ 49ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವದ ಮಾಹಿತಿ ಇಲ್ಲಿದೆ.

ಬಂಟ್ವಾಳ: ಕಲ್ಲಡ್ಕದ ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ.) ಕಲ್ಲಡ್ಕ ಹಾಗೂ ಶ್ರೀ ಶಾರದಾ ಪೂಜಾ ಉತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ 49ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವವು ದಿನಾಂಕ 17-10-2026ನೇ ಶನಿವಾರದಿಂದ 20-10-2026ನೇ ಮಂಗಳವಾರದ ವರೆಗೆ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.

ಕಾರ್ಯಕ್ರಮಗಳು ಹೀಗಿವೆ
ಪ್ರತಿಷ್ಠೆ ಹಾಗೂ ಧ್ವಜಾರೋಹಣ: ಅಕ್ಟೋಬರ್ 17ರಂದು ಬೆಳಿಗ್ಗೆ ಗಂಟೆ 7:30ಕ್ಕೆ ಗಣಹೋಮ ಹಾಗೂ ವೇದಮೂರ್ತಿ ಪಳನೀರು ಶ್ರೀಪತಿ ಭಟ್ ಅವರ ನೇತೃತ್ವದಲ್ಲಿ ಶ್ರೀ ಶಾರದಾ ದೇವಿ ಪ್ರತಿಷ್ಠೆ ನಡೆಯಲಿದೆ. ಬಳಿಕ ಬೆಳಿಗ್ಗೆ 8:30ಕ್ಕೆ ಗೀತ್ ಕುಮಾರ್ ಹೊಸಕಟ್ಟ ಇವರಿಂದ ಧ್ವಜಾರೋಹಣ ನೆರವೇರಲಿದೆ.
ಧಾರ್ಮಿಕ ಸಭೆಗಳು ಮತ್ತು ಉಪನ್ಯಾಸಗಳು: ಉತ್ಸವದ ಪ್ರತಿದಿನ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು, ಭಜನಾ ಸಂಕೀರ್ತನೆಗಳು ಮತ್ತು ಸಾಂಸ್ಕೃತಿಕ ವೈಭವಗಳು ಜರುಗಲಿವೆ. ಅಕ್ಟೋಬರ್ 18ರಂದು ಜರಗಲಿರುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಸರ್ಕಾರದ ಬಾಲಭವನದ ಮಾಜಿ ಅಧ್ಯಕ್ಷೆ ಸುಲೋಚನಾ ಜಿ. ಕೆ. ಭಟ್ ವಹಿಸಲಿದ್ದು, ಮಂಗಳೂರು ಎಸ್‌ಐಟಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಭಾಗ ಮುಖ್ಯಸ್ಥರಾದ ರವೀಶ್ ಪಡುಮಲೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಸಾಂಸ್ಕೃತಿಕ ಹಾಗೂ ಕಲಾ ವೈವಿಧ್ಯ: ಉತ್ಸವದ ದಿನಗಳಲ್ಲಿ ಭರತನಾಟ್ಯ, ನೃತ್ಯ ವೈವಿಧ್ಯ, ಭಕ್ತಿಗೀತೆ ಸ್ಪರ್ಧೆ ಹಾಗೂ ತುಳು ಹಾಸ್ಯಮಯ ನಾಟಕಗಳಾದ ‘ಯಾನೊರಿ ಬರೋಲಿಯಾ!?’ ಮತ್ತು ‘ಒಂತೆ ಲೇಟಾಂಡಾ ಆಂಡಲ!’ ಪ್ರದರ್ಶನಗೊಳ್ಳಲಿವೆ.
ವಿಶೇಷ ಪೂಜೆಗಳು ಮತ್ತು ಸಮಾರೋಪ: ಅಕ್ಟೋಬರ್ 19ರಂದು ಸಾಮೂಹಿಕ ಅಕ್ಷರಾಭ್ಯಾಸ ನಡೆಯಲಿದ್ದು, ಅಕ್ಟೋಬರ್ 20ರ ಮಂಗಳವಾರದಂದು ಆಯುಧ ಪೂಜೆ ಮತ್ತು ಸಂಜೆ ಗಂಟೆ 6:00ಕ್ಕೆ ಶ್ರೀ ಶಾರದಾ ಮಾತೆಯ ಭವ್ಯ ಶೋಭಾಯಾತ್ರೆಯು ಶ್ರೀ ಶಾರದಾ ಮಂಟಪದಿಂದ ಹೊರಟು ಕಲ್ಲಡ್ಕ ರಾಜರಸ್ತೆಯ ಮೂಲಕ ಸಾಗಿ ಕೊಳಕೀರು ನದಿ ತಟದಲ್ಲಿ ಜಲಸ್ತಂಭನಗೊಳ್ಳಲಿದೆ.
ಅನ್ನಸಂತರ್ಪಣೆ: ಉತ್ಸವದ ಪ್ರತಿದಿನ ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಸೇವೆ ನಡೆಯಲಿದೆ.

ಕಳೆದ ಐದು ದಶಕಗಳಿಂದ ಸಮಾಜಮುಖಿ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಈ ಪ್ರತಿಷ್ಠಾನದ ಸುವರ್ಣ ಮಹೋತ್ಸವದ ಸಂಭ್ರಮದ ಹತ್ತಿರದಲ್ಲಿದ್ದು, ಧರ್ಮಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಶಾರದಾ ಸೇವಾ ಪ್ರತಿಷ್ಠಾನ ಅಧ್ಯಕ್ಷ ಯತೀನ್ ಕುಮಾರ್ ಪಂಚವಟಿ ಮ್ತು ಕಾರ್ಯದರ್ಶಿ ವಜ್ರನಾಥ ಕಲ್ಲಡ್ಕ ಮತ್ತು ಶ್ರೀ ಶಾರದಾ ಪೂಜಾ ಉತ್ಸವ ಸಮಿತಿ ಅಧ್ಯಕ್ಷ ಗಣೇಶ್ ಶೆಟ್ಟಿ ಕುಕ್ಕಮಜಲು ಮತ್ತು ಪ್ರಧಾನ ಕಾರ್ಯದರ್ಶಿ ರಾಜೇಶ್ ಕಲ್ಲಡ್ಕಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Be the first to comment on "ಕಲ್ಲಡ್ಕದಲ್ಲಿ 49ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ: ಅಕ್ಟೋಬರ್ 17ರಿಂದ 20ರವರೆಗೆ ವಿಜೃಂಭಣೆಯ ಆಚರಣೆ"