
ಬಿ.ಸಿ.ರೋಡ್ನ ಬ್ರಹ್ಮರಕೂಟ್ಲು ಟೋಲ್ಗೇಟ್ ಅನ್ನು ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಿ ಟೋಲ್ ತೆರವು ಹೋರಾಟ ಸಮಿತಿ ಹಾಗೂ ವಿವಿಧ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರದಿಂದ ಹಗಲು-ರಾತ್ರಿ ಧರಣಿ ಸತ್ಯಾಗ್ರಹ ಆರಂಭಗೊಂಡಿದೆ. ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಹಲವು ಪ್ರಮುಖರು ಸಾಥ್ ನೀಡಿದ್ದಾರೆ.

ಟೋಲ್ ಸಂಗ್ರಹ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಆರಂಭವಾಗಿರುವ ಈ ಧರಣಿಯು ಬುಧವಾರ ಬೆಳಗ್ಗೆಯವರೆಗೆ ಮುಂದುವರಿಯಲಿದೆ. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ಈ ಹಿಂದೆ ಟೋಲ್ ಮುಂಭಾಗ ಒಂದು ದಿನದ ಧರಣಿ, ಹೊಸ ಟೋಲ್ ನಿರ್ಮಾಣ ಸ್ಥಳದ ಜನರಿಗೆ ಜಾಗೃತಿ ಮತ್ತು ಬಿ.ಸಿ.ರೋಡ್ನಿಂದ ಬ್ರಹ್ಮರಕೂಟ್ಲು ಟೋಲ್ಗೇಟ್ವರೆಗೆ ಪಾದಯಾತ್ರೆ ನಡೆಸಲಾಗಿದ್ದು, ಇದು ಹೋರಾಟದ ನಾಲ್ಕನೇ ಹಂತವಾಗಿದೆ.

ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಬಿ. ರಮಾನಾಥ ರೈ, ಟೋಲ್ ಅವಧಿ ಮುಕ್ತಾಯಗೊಂಡಿದ್ದರೂ ಸುಂಕ ವಸೂಲಿ ಮುಂದುವರಿಸಿರುವುದು ಹಾಗೂ ನೆರೆ ವಿಮೋಚನಾ ರಸ್ತೆಯಲ್ಲೇ ಟೋಲ್ ಸ್ಥಾಪಿಸಿರುವುದು ಖಂಡನೀಯ ಎಂದು ಟೀಕಿಸಿದರು.
ಪ್ರಮುಖರ ಉಪಸ್ಥಿತಿ: ಈ ಪ್ರತಿಭಟನೆಯಲ್ಲಿ ಪ್ರಮುಖರಾದ ಮಿಥುನ್ ರೈ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಮೋಹನ ಶೆಟ್ಟಿ ಪಂಜಿಕಲ್ಲು, ಬಿ. ಶೇಖರ್, ಸುರೇಶ್ ಕುಮಾರ್ ಬಂಟ್ವಾಳ, ಜಯಶೀಲ ಅಡ್ಯಂತಾಯ, ಮಾಯಿಲಪ್ಪ ಸಾಲಿಯಾನ್, ಜೋಸ್ಮಿನ್ ಡಿಸೋಜ, ಪಿ. ರಾಮಕೃಷ್ಣ ಆಳ್ವ, ಮನೋಹರ ನೇರಂಬೋಳು, ಮಹಮ್ಮದ್ ಶರೀಫ್, ಮಮತಾ ಡಿ.ಎಸ್. ಗಟ್ಟಿ, ಪಿಯೂಸ್ ಎಲ್ ರೋಡ್ರಿಗಸ್ ಬೇಬಿ ಕುಂದರ್, ಪದ್ಮಶೇಖರ ಜೈನ್, ಲುಕ್ಮಾನ್ ಬಂಟ್ವಾಳ, ಜಯಂತಿ ವಿ ಪೂಜಾರಿ, ಲವೀನಾ ವಿಲ್ಮಾ ಮೊರಾಸ್, ಶಾಲೆಟ್ ಪಿಂಟೊ, ಪದ್ಮನಾಭ ರೈ, ಉಮೇಶ್ ಬೋಳಂತೂರು, ಸಿದ್ದೀಕ್ ಗುಡ್ಡೆಯಂಗಡಿ, ಅಬ್ಬಾಸ್ ಆಲಿ, ಸುದೀಪ್ ಕುಮಾರ್ ಶೆಟ್ಟಿ, ಪ್ರವೀಣ್ ಬಂಟ್ವಾಳ, ಮೊಹಮ್ಮದ್ ನಂದಾವರ, ಸಿರಾಜ್ ಮದಕ ಸೇರಿದಂತೆ ಅನೇಕ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


Be the first to comment on "ಬ್ರಹ್ಮರಕೂಟ್ಲು ಟೋಲ್ ತೆರವಿಗೆ ಆಗ್ರಹಿಸಿ ಹಗಲು-ರಾತ್ರಿ ಧರಣಿ ಸತ್ಯಾಗ್ರಹ"