
ಬಂಟ್ವಾಳ: ಬಿ.ಸಿ.ರೋಡಿನ ಪೊಲೀಸ್ ಲೈನ್ ನಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನದಲ್ಲಿ ಅ.11ನೇ ಭಾನುವಾರದಿಂದ ಅ.21ನೇ ಬುಧವಾರದವರೆಗೆ ಶರನ್ನವರಾತ್ರಿ ಪ್ರಯುಕ್ತ ಕೀಕಾಂಗೋಡು ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ನವರಾತ್ರಿ ಮಹೋತ್ಸವ ಮತ್ತು ಚಂಡಿಕಾಹೋಮ ಹಾಗೂ ಇತರ ಸೇವೆಗಳು ನಡೆಯಲಿವೆ ಎಂದು ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ತಿಳಿಸಿದ್ದಾರೆ.

ಬಂಟ್ವಾಳ ಬಿ.ಸಿ. ರೋಡಿನ ಶ್ರೀ ಅನ್ನಪೂರ್ಣೇಶ್ವರೀ ನಾಗದೇವರ ದೇವಸ್ಥಾನದಲ್ಲಿ ನಡೆಯಲಿರುವ ಶರನ್ನವರಾತ್ರಿ ಮಹೋತ್ಸವದ ದೈನಂದಿನ ಧಾರ್ಮಿಕ ಕಾರ್ಯಕ್ರಮಗಳ ವಿವರ:
- ಬೆಳಿಗ್ಗೆ ಗಂಟೆ 8:00ಕ್ಕೆ: ಪ್ರಾರ್ಥನೆ ಹಾಗೂ ಗಣಪತಿ ಹೋಮ
- ಬೆಳಿಗ್ಗೆ ಗಂಟೆ 8:30ಕ್ಕೆ: ಪ್ರಾರ್ಥನೆ ಮತ್ತು ಚಂಡಿಕಾಹೋಮ
- ಬೆಳಿಗ್ಗೆ ಗಂಟೆ 10:30ಕ್ಕೆ: ನಾಗಾರಾಧನೆ
- ಬೆಳಿಗ್ಗೆ ಗಂಟೆ 11:30ಕ್ಕೆ: ಚಂಡಿಕಾಹೋಮದ ಪೂರ್ಣಾಹುತಿ
- ಮಧ್ಯಾಹ್ನ ಗಂಟೆ 12:30ಕ್ಕೆ: ಮಹಾಪೂಜೆ ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮ
- ಮಧ್ಯಾಹ್ನ ಗಂಟೆ 1:00ರಿಂದ: ಸಾರ್ವಜನಿಕ ಅನ್ನಸಂತರ್ಪಣೆ
- ಸಂಜೆ ಗಂಟೆ 5:00ರಿಂದ / 5:30ರಿಂದ: ಭಜನಾ ಕಾರ್ಯಕ್ರಮ
- ರಾತ್ರಿ ಗಂಟೆ 7:30ಕ್ಕೆ: ರಂಗಪೂಜೆಯೊಂದಿಗೆ ಮಹಾಪೂಜೆ
ಹಾಗೂ ಉತ್ಸವದ ಅಂತಿಮ ದಿನವಾದ ದಿನಾಂಕ 21-10-2026ನೇ ಬುಧವಾರ ರಾತ್ರಿ ಗಂಟೆ 7:30ರಿಂದ ರಂಗಪೂಜೆ, ಮಹಾಪೂಜೆಯೊಂದಿಗೆ ಶ್ರೀ ದೇವಿಗೆ ವಿಶೇಷ ಅಷ್ಟಾವಧಾನ ಸೇವೆ ನಡೆಯಲಿದೆ. ಅ.14ರಂದು ಕುಮಾರಿ ದುರ್ಗಾಪೂಜೆ, ಚೌತಿ ಹೊಸ ಅಕ್ಕಿ ನೈವೇದ್ಯ, ತೆನೆಕೊಡುವ ದಿನವಾಗಿದೆ. 15ರಂದು ಲಲಿತಾ ಪಂಚಮಿ, ಅ.16ರಂದು ಮಹಿಷಮರ್ದಿನಿ ದುರ್ಗಾಪೂಜೆ, ವಿಶೇಷ ನಾಗಾರಾಧನೆ ಇರಲಿದೆ. 17ರಂದು ಚಂಡಿಕಾ ದುರ್ಗಾಪೂಜೆ,. 18ರಂದು ಚಂಡಿಕಾ ದುರ್ಗಾಪೂಜೆ ಕುಂಕುಮ ಅಲಂಕಾರ ಸಹಿತ ನಡೆಯಲಿದೆ. 20ರಂದು ವಾಗೇಶ್ವರಿ ದುರ್ಗಾಪೂಜೆ, ಆಯುಧ ಪೂಜೆ ನಡೆಯಲಿದೆ.


Be the first to comment on "ಶ್ರೀ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವ: ವಿವರಗಳು ಹೀಗಿವೆ"