
ಶರನ್ನವರಾತ್ರಿ: ಶ್ರೀ ರಕೇಶ್ವರೀ ದೇವಿ ಸನ್ನಿಧಿಯ ವಿಶೇಷ ಕಾರ್ಯಕ್ರಮಗಳು

ಶರನ್ನವರಾತ್ರಿ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಬ್ರಹ್ಮಶ್ರೀ ವೇ.ಮೂ.ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ವಿಶೇಷ ಪೂಜೆ, ಕಾರ್ಯಕ್ರಮಗಳು ಇರಲಿವೆ ಎಂದು ಸೇವಾ ಸಮಿತಿ ಅಧ್ಯಕ್ಷ ಬಿ.ಮೋಹನ್ ತಿಳಿಸಿದ್ದಾರೆ.
- ದೈನಂದಿನ ಪೂಜೆಗಳು: ಪ್ರತಿದಿನ ಸಂಜೆ 6:00ರಿಂದ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ರಾತ್ರಿ 8:00 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.
- ವಿಶೇಷ ಆರಾಧನೆಗಳು: ಅಕ್ಟೋಬರ್ 15 ಮತ್ತು 16ರಂದು ಪೂರ್ವಾಹ್ನ 11:30ಕ್ಕೆ ಹಗಲು ನಾಗಾರಾಧನೆ ನಡೆಯಲಿದೆ.
- ದುರ್ಗಾಷ್ಟಮಿ: ಅಕ್ಟೋಬರ್ 19ರ ಸೋಮವಾರದಂದು ದುರ್ಗಾಷ್ಟಮಿಯ ಪ್ರಯುಕ್ತ ವಿಶೇಷ ದುರ್ಗಾನಮಸ್ಕಾರ ಪೂಜೆ ಜರುಗುವುದು.
- ಆಯುಧ ಪೂಜೆ: ಆಯುಧ ಪೂಜೆ ಮಾಡಿಸುವ ಭಕ್ತರಿಗಾಗಿ ಅಕ್ಟೋಬರ್ 20ರ ಮಂಗಳವಾರ ಬೆಳಿಗ್ಗೆಯಿಂದ ದೇವಿಯ ಸನ್ನಿಧಿಯಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.
- ಮಹಾ ಚಂಡಿಕಾಯಾಗ: ಅಕ್ಟೋಬರ್ 21ರ ಬುಧವಾರ ವಿಜಯದಶಮಿಯ ಶುಭದಿನದಂದು ಪೂರ್ವಾಹ್ನ 8:00 ಗಂಟೆಯಿಂದ ಬ್ರಹ್ಮಶ್ರೀ ವೇದಮೂರ್ತಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಮಹಾ ಚಂಡಿಕಾಯಾಗ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿದೆ
- ಪ್ರತಿದಿನ ಕಾರ್ಯಕ್ರಮಗಳು: ಪ್ರತಿದಿನವೂ ಭಜನೆ, ನಾಟ್ಯ, ಸಂಗೀತ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿದ್ದು, 21ರಂದು ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರದಿಂದ ರೋಹಿಣಿ ಉದಯ್ ಶಿಷ್ಯೆಯರ ನೃತ್ಯರಂಜನಿ ಇರಲಿದೆ.


Be the first to comment on "ಶರನ್ನವರಾತ್ರಿ: ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯ ವಿಶೇಷ ಕಾರ್ಯಕ್ರಮಗಳು"