
ಬಂಟ್ವಾಳ: ಬಿ.ಸಿ.ರೋಡಿನ ಕೈಕುಂಜೆಯಲ್ಲಿ ನೇತ್ರಾವತಿ ನದಿ ತೀರದಲ್ಲಿರುವ ಹಿಂದು ರುದ್ರಭೂಮಿಯಲ್ಲಿ ಭಾನುವಾರ ಬಿ.ಮೂಡ ಗ್ರಾಮದಲ್ಲಿರುವ ಹಲವು ಸಂಘ, ಸಂಸ್ಥೆಗಳ ಪ್ರಮುಖರು ಮತ್ತು ಸದಸ್ಯರು ಸಾರ್ವಜನಿಕರ ಜೊತೆಗೂಡಿ ಶ್ರಮದಾನ ನಡೆಸಿದರು.

ಬೆಳಗ್ಗೆ ಸುತ್ತಮುತ್ತಲಿರುವ ಕಳೆಗಿಡಗಳನ್ನು ತೆರವುಗೊಳಿಸಿದ ಅವರು ಬಳಿಕ ಒಳಗಿರುವ ಗಿಡಗಂಟಿಗಳನ್ನು ಕಿತ್ತು, ಸ್ವಚ್ಛತಾ ಕಾರ್ಯ ನೆರವೇರಿಸಿದರು.

ಅಲ್ಲಿರುವ ದಾಸ್ತಾನು ಕೊಠಡಿ, ಶೌಚಾಲಯ, ಬಾವಿ ಮತ್ತು ಇತರ ಪ್ರದೇಶಗಳನ್ನು ಶುಚಿಗೊಳಿಸಿ, ಹೊಸರೂಪ ನೀಡಿದರು. ಹುಲ್ಲು ಕತ್ತರಿಸುವ ಯಂತ್ರಗಳನ್ನು ಹಿಡಿದು ಎತ್ತರಕ್ಕೆ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಲಾಯಿತು.

ಬಿ.ಸಿ.ರೋಡ್ ಸುತ್ತಮುತ್ತಲಿನ ಪರಿಸರದಲ್ಲಿ ಕಾರ್ಯಾಚರಿಸುತ್ತಿರುವ ಹಲವು ಸಂಘ, ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಆಗಮಿಸಿ ಮಧ್ಯಾಹ್ನದವರೆಗೆ ಸೇವಾ ಕಾರ್ಯವನ್ನು ನಡೆಸಿದ್ದಾರೆ ಬಂಟ್ವಾಳದ ಪೌರಕಾರ್ಮಿಕರು ನೆರವು ನೀಡಿದರು. ಭವಿಷ್ಯದಲ್ಲಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲವಾಗುವ ವ್ಯವಸ್ಥೆ, ರುದ್ರಭೂಮಿಯಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಈ ಶ್ರಮದಾನ ಕಾರ್ಯ ಮುನ್ನುಡಿಯಾಗಿದೆ.



Be the first to comment on "ಬಿ.ಸಿ.ರೋಡ್ ಕೈಕುಂಜೆ ರುದ್ರಭೂಮಿಯಲ್ಲಿ ಶ್ರಮದಾನ"