
ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಂಡಿಕಾನಗರದ ಶ್ರೀ ಚಂಡಿಕಾಪರಮೇಶ್ವರೀ ದೇವಿ ದೇವಸ್ಥಾನದಲ್ಲಿ 2026ನೇ ಸಾಲಿನ ಶರನ್ನವರಾತ್ರಿ ಮಹೋತ್ಸವವು ಅಕ್ಟೋಬರ್ 11ರ ಆದಿತ್ಯವಾರದಿಂದ ಅಕ್ಟೋಬರ್ 21ರ ಬುಧವಾರದವರೆಗೆ ವಿಜೃಂಭಣೆಯಿಂದ ಜರುಗಲಿದೆ. ಪ್ರತಿದಿನವೂ ವೈವಿಧ್ಯಮಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಲ.ಪಿ.ಲೋಕನಾಥ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಶ್ರೀ ಚಂಡಿಕಾಪರಮೇಶ್ವರೀ ದೇವಿ ದೇವಸ್ಥಾನದ ದೈನಂದಿನ ಕಾರ್ಯಕ್ರಮಗಳು —

ಶ್ರೀ ಚಂಡಿಕಾಪರಮೇಶ್ವರೀ ದೇವಿ ದೇವಸ್ಥಾನದ ದೈನಂದಿನ ಕಾರ್ಯಕ್ರಮಗಳು
- ಚಂಡಿಕಾಯಾಗ: ಅಕ್ಟೋಬರ್ 11ರಿಂದ 20ರವರೆಗೆ ಪ್ರತಿದಿನ ಬೆಳಿಗ್ಗೆ 9:00 ಗಂಟೆಗೆ ಚಂಡಿಕಾಯಾಗ ಆರಂಭಗೊಂಡು, ಮಧ್ಯಾಹ್ನ 12:00 ಗಂಟೆಗೆ ಪೂರ್ಣಾಹುತಿ ಹಾಗೂ 12:30ಕ್ಕೆ ಶ್ರೀ ದೇವಿಗೆ ವಿಶೇಷ ಮಹಾಪೂಜೆ ನಡೆಯಲಿದೆ.
- ಅನ್ನಸಂತರ್ಪಣೆ: ಪ್ರತಿದಿನ ಮಧ್ಯಾಹ್ನ 1:00 ಗಂಟೆಯಿಂದ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ.
- ಭಜನಾ ಕಾರ್ಯಕ್ರಮಗಳು: ಪ್ರತಿದಿನ ಸಂಜೆ 6:00ರಿಂದ 8:00ರ ವರೆಗೆ ವಿವಿಧ ಸಂಘಗಳಿಂದ ಭಜನಾ ಕಾರ್ಯಕ್ರಮಗಳು ನಡೆಯಲಿವೆ.
- ವಿಜಯದಶಮಿ ವಿಶೇಷ (ಅಕ್ಟೋಬರ್ 21): ಅಂದು ಬೆಳಿಗ್ಗೆ 9:00 ಗಂಟೆಗೆ ಮಂಗಳವಾದ್ಯ ಘೋಷದೊಂದಿಗೆ ತೆನೆಗೆ ಪೂಜೆ ಮತ್ತು ವಿತರಣೆ ಹಾಗೂ ಬೆಳಿಗ್ಗೆ 10:00 ಗಂಟೆಗೆ ವಿದ್ಯಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ (ವಿದ್ಯೆ ಆರಂಭಿಸುವ ಮಕ್ಕಳು ಮುಂಚಿತವಾಗಿ ಹೆಸರು ನೊಂದಾಯಿಸಬೇಕು).


Be the first to comment on "ಶ್ರೀಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ – ವಿಶೇಷಗಳು ಇವು"