ಬಂಟ್ವಾಳದಲ್ಲಿ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟ

ಶಾಲಾ ಶಿಕ್ಷಣ ಇಲಾಖೆ, ದ.ಕ ಜಿಲ್ಲಾ ಪಂಚಾಯತ್, ದ.ಕ.ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರ ಕಾರ್ಯಾಲಯ, ಬಂಟ್ವಾಳ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಬಂಟ್ವಾಳ ಎಸ್.ವಿ.ಎಸ್.ದೇವಳ ಆಂಗ್ಲ ಮಾಧ್ಯಮ ಶಾಲೆ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 14 ಮತ್ತು 17 ರ ವಯೋಮಾನದ ಬಾಲಕ ಬಾಲಕಿಯರ ಟೇಬಲ್ ಟೆನ್ನೀಸ್ ಪಂದ್ಯಾಟ ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಜರಗಿತು.

ಸಮಾಜ ಸೇವಕ ಹಾಗೂ ಉದ್ಯಮಿ ಮಂಜುನಾಥ್ ಆಚಾರ್ಯ ಪಂದ್ಯಾಟವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಚಂದಪ್ಪ ಎಲ್.ಬಿ ಭಾಗವಹಿಸಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಾರೀರಿಕ ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ದೇವಳದ ಮೊಕ್ತೇಸರ ಮತ್ತು ಶಾಲಾ ಸಂಚಾಲಕ ಬಿ. ಸುರೇಶ್ ವಿ. ಬಾಳಿಗಾ ಮಾತನಾಡಿ, ಟೇಬಲ್ ಟೆನ್ನೀಸ್ ಪಂದ್ಯಾಟ ಕ್ರೀಡಾಪಟುಗಳ ಮಾನಸಿಕ ಸ್ಥಿರತೆ, ತಾಳ್ಮೆಗೆ ಪೂರಕವಾದ ಆಟವಾಗಿದೆ ಎಂದರು.

ಜಾಹೀರಾತು
VNR GOLD

ಫಲಿತಾಂಶ:

ಸುಮಾರು 28 ತಂಡಗಳು 4 ವಿಭಾಗದಲ್ಲಿ ಭಾಗವಹಿಸಿದವು. ಪಂದ್ಯಾಟದಲ್ಲಿ ಎಸ್.ವಿ.ಎಸ್.ದೇವಳ ಆಂಗ್ಲಮಾಧ್ಯಮ ಶಾಲೆ ಬಂಟ್ವಾಳ ವಿದ್ಯಾರ್ಥಿಗಳು ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ ಪ್ರಥಮ, ದ್ವಿತೀಯ ಸ್ಥಾನವನ್ನು ಸೈಂಟ್ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು ಪಡೆದುಕೊಂಡಿತು.ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಎಸ್.ವಿ.ಎಸ್.ದೇವಳ ಆಂಗ್ಲಮಾಧ್ಯಮ ಶಾಲೆ ಬಂಟ್ವಾಳ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಸೈಂಟ್ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆ ಕೊಡಿಯಾಲ್ ಬೈಲ್ ಪಡೆದುಕೊಂಡಿತು. ಪ್ರೌಢಶಾಲಾ ಬಾಲಕರಲ್ಲಿ  ಪ್ರಥಮ ಸ್ಥಾನವನ್ನು ಎಸ್.ವಿ.ಎಸ್.ದೇವಳ ಆಂಗ್ಲಮಾಧ್ಯಮ ಶಾಲೆ ಬಂಟ್ವಾಳ, ದ್ವಿತೀಯ ಸ್ಥಾನವನ್ನು ಸೇಕ್ರೆಡ್ ಹಾರ್ಟ್ ಪ್ರೌಢಶಾಲೆ ಕುಲಶೇಖರ ಪಡೆದುಕೊಂಡಿತು. ಪ್ರೌಢಶಾಲಾ ಬಾಲಕಿಯರಲ್ಲಿ ಎಸ್.ವಿ.ಎಸ್.ದೇವಳ ಆಂಗ್ಲಮಾಧ್ಯಮ ಶಾಲೆ ಬಂಟ್ವಾಳ ಪ್ರಥಮ ಸ್ಥಾನವನ್ನು , ಎಸ್.ಡಿ.ಎಂ ಅನುದಾನಿತ ಪ್ರೌಢ ಶಾಲೆ ಧರ್ಮಸ್ಥಳ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.

OPTIC WORLD

ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ವಿಷ್ಣುನಾರಾಯಣ್ ಹೆಬ್ಬಾರ್ , ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್, ಬಿ.ಆರ್. ಸಿ ವಿದ್ಯಾ, ಶಿಕ್ಷಣ ಸಂಯೋಜಕ ರಮಾನಂದ್, ಆಡಳಿತ ಮಂಡಳಿ ಸದಸ್ಯರಾದ ಶಿವಾನಂದ ಬಾಳಿಗಾ, ವೆಂಕಟರಮಣ ಶೆಣೈ, ಲಕ್ಷ್ಮಣ್ ಶೆಣೈ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಗಂಗಾಧರ ಆಳ್ವ, ಮುಖ್ಯೋಪಾಧ್ಯಾಯಿನಿ ರೋಷನಿ ತಾರಾ ಡಿ’ಸೋಜ, ಸಹ ಮುಖ್ಯೋಪಾಧ್ಯಾಯಿನಿ ಜಾನಕಿ ರಾಜೇಶ್ , ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ವೇದಾವತಿ, ಸಂಘದ ವಿವಿಧ ಪದಾಧಿಕಾರಿಗಳಾದ ಜಗದೀಶ್ ರೈ, ಶಿವಪ್ರಸಾದ ಶೆಟ್ಟಿ, ಜಯರಾಮ, ನವೀನ್ ಪಿ.ಎಸ್, ಚಿನ್ನಪ್ಪ ಉಪಸ್ಥಿತರಿದ್ದರು. ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ರವಿಚಂದ್ರ, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷೆ ಚಿತ್ರಾ ಯಡಪಡಿತ್ತಾಯ, ಬಂಟ್ವಾಳ ಲಯನ್ಸ್ ಕ್ಲಬ್ ಕೋಶಾಧಿಕಾರಿ ಸುಮಾ ಸುನೀಲ್ ಇವರು ವಿಜೇತ ಮಕ್ಕಳಿಗೆ ಟ್ರೋಫಿ ಹಾಗೂ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ದೈಹಿಕ ಶಿಕ್ಷಣ ಶಿಕ್ಷಕ ಎಂ ಚಂದ್ರಹಾಸ ಶೆಟ್ಟಿ ಸ್ವಾಗತಿಸಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಧಿಕಾರಿ ಆಶಾ ನಾಯಕ್ ವಂದಿಸಿದರು. ಶಿಕ್ಷಕ ಮುರಳೀಧರ ಆಚಾರ್ಯ ನಿರೂಪಿಸಿದರು.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಬಂಟ್ವಾಳದಲ್ಲಿ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*