ಬಂಟ್ವಾಳ: ಕರ್ನಾಟಕ ಗಮಕ ಕಲಾ ಪರಿಷತ್ತು ಬಂಟ್ವಾಳ ವಲಯ ಮತ್ತು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ, ಭಾಷಾ ಸಂಘದ ಆಶ್ರಯದಲ್ಲಿ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಆಧಾರಿತ, ಇಬ್ಬರು ಮಹಾನ್ ಕವಿಗಳ ಕಾವ್ಯ ಭಾಗಗಳ ಗಮನ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು.

ರನ್ನ ಕವಿ ಯ ಛಲಮನೆ ಮೆರೆವೆಂ ಕಾವ್ಯ ಭಾಗವನ್ನು ವಿದುಷಿ ಮಂಜುಳಾ ಸುಬ್ರಹ್ಮಣ್ಯ ಭಟ್ ಮಂಚಿ ವಾಚನ ಮಾಡಿ, ಹೇಮಾ ಮಯ್ಯ ಇದರ ವ್ಯಾಖ್ಯಾನಕಾರರಾಗಿ, ಮತ್ತು ಕುಮಾರವ್ಯಾಸ ಕವಿಯ ಕೌರವೇಂದ್ರನ ಕೊಂದೆ ನೀನು ಕಾವ್ಯ ಭಾಗವನ್ನು, ಪ್ರಚೇತ್ ರಾಮ್ ಕಜೆ ವಾಚನ ಮಾಡಿ, ಪ್ರತಿಭಾ ಸುಬ್ರಹ್ಮಣ್ಯ ಭಟ್ ವ್ಯಾಖ್ಯಾನಕಾರರಾಗಿ ಕಾರ್ಯಕ್ರಮ ನಡೆಸಿಕೊಟ್ಟರು.

ಗಮಕ ಕಲಾ ಪರಿಷತ್ ನ ಬಂಟ್ವಾಳ ಘಟಕಾಧ್ಯಕ್ಷ ರವಿಶಂಕರ್ ಮಯ್ಯ, ಉಪಾಧ್ಯಕ್ಷ ಸುಬ್ರಹ್ಮಣ್ಯ ಭಟ್, ಕೋಶಾಧಿಕಾರಿ ಶಾಂತರಾಮ್ ರಾವ್, ಶ್ರೀದುರ್ಗಾಪರಮೇಶ್ವರಿ ಮಹಿಳಾ ಮಂಡಳಿ ಶೇಡಿಗುರಿ ಅಧ್ಯಕ್ಷರಾದ ಕಲಾವತಿ ಉಪಸ್ಥಿತರಿದ್ದರು.

ಮುಖ್ಯಶಿಕ್ಷಕ ಕಮಲಾಕ್ಷ ಕಲ್ಲಡ್ಕ ಸ್ವಾಗತಿಸಿ, ಹರಿಪ್ರಸಾದ್ ವಂದಿಸಿದರು. ಶಿಕ್ಷಕಿ ಸರಸ್ವತಿ ಕಾರ್ಯಕ್ರಮ ಸಂಯೋಜಿಸಿದರು. ಶಿಕ್ಷಕರಾದ ಭಾರತಿ, ಗೀತಾ ಉಡುಪಿ, ಸುಜಾತ, ಧನರಾಜ್ ಶೆಟ್ಟಿ ಹಾಗೂ ಹರೀಶ್. ಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Be the first to comment on "ಬೊಂಡಾಲ ಹೈಸ್ಕೂಲ್ ನಲ್ಲಿ ಗಮಕ ವಾಚನ"