ಬಂಟ್ವಾಳ: ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ. ಶಂಭೂರು ಇದರ ವಾರ್ಷಿಕ ಮಹಾಸಭೆ ಮಂಗಳವಾರ ನರಿಕೊಂಬುವಿನ ಬಿರುವೆರ್ ಸೇವಾ ಟ್ರಸ್ಟ್‌ನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಪುರುಷೋತ್ತಮ ಸಾಲ್ಯಾನ್ ನರಿಕೊಂಬು ಅಧ್ಯಕ್ಷತೆಯಲ್ಲಿ ನಡೆಯಿತು.

ನಿವೃತ್ತ ಸುಬೇದಾರ್ ಬಿ.ಎನ್. ಮೋನಪ್ಪ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ತೆಂಗು ಬೆಳೆಗಾರರ ಸಂಘದ ನಿರ್ದೇಶಕ ಪ್ರೇಮನಾಥ ಶೆಟ್ಟಿ, ಶ್ರೀ ಕೋದಂಡರಾಮಚಂದ್ರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಬಂಗೇರ, ಸಂಘದ ನಿರ್ದೇಶಕರಾದ ಮೋನಪ್ಪ ಪೂಜಾರಿ ಬೊಂಡಾಲ, ಶ್ರೀಶ ಆರ್. ರಾಯಸ, ಎಂ.ಸುಮತಿ, ವೇದಾವತಿ ಸುರೇಶ್ ಪೂಜಾರಿ ಶೇಡಿಗುರಿ, ನಾರಾಯಣ ಪೂಜಾರಿ ಕೇದಿಗೆ, ರಾಜೇಶ್ ಆರ್. ಶೇಡಿಗುರಿ, ಅಶೋಕ ಆರ್. ಶಂಭೂರು, ಬಿ. ಕೃಷ್ಣಪ್ಪ ಪೂಜಾರಿ, ಬಿ. ಗೋಪಾಲ ಸುವರ್ಣ ಬಿ.ಸಿ.ರೋಡು, ಹಿರಿಯ ಮೂರ್ತೆದಾರರಾದ ಚಂದು ಪೂಜಾರಿ ಕೇದಗೆ, ಡೀಕಯ್ಯ ಪೂಜಾರಿ ನಾಟಿ, ಗಿರೀಶ ಬೋರುಗಡ್ಡೆ, ಮೋಹನ ಕುಮಾರ್ ಬೊಂಡಾಲ, ಚಂದ್ರಶೇಖರ ಬೊಂಡಾಲ, ಬಾಲಕೃಷ್ಣ ಬೊಂಡಾಲ, ನಾರಾಯಣ ಪೂಜಾರಿ ಕೇವ, ಸುಂದರ ಪೂಜಾರಿ, ಕಟ್ಟಡ ಮಾಲಕಿ ಉಷಾ ವಾಮನ ಟೈಲರ್, ಚಿನ್ನ ಮೌಲ್ಯ ಮಾಪಕರಾದ ನಾಗೇಶ್ ಆಚಾರ್ಯ, ನಿತ್ಯನಿಧಿ ಸಂಗ್ರಾಹಕ ಚಿತ್ರೇಶ ನಾಟಿ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಮಾಧವ ಕರ್ಬೆಟ್ಟು ಸ್ವಾಗತಿಸಿದರು, ಸಿಬ್ಬಂದಿ ಕೃತಿಕ್ಷಾ ಪ್ರಾರ್ಥಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಯೋಗೀಶ್ ಅಮೀನ್ ನಿರೂಪಿಸಿ, ಬಿರುವೆರ್ ಸೇವಾ ಟ್ರಸ್ಟ್ ನರಿಕೊಂಬು ಇದರ ಕಾರ್ಯದರ್ಶಿ ಮನೋಜ್ ನಿರ್ಮಲ್ ವಂದಿಸಿದರು.



Be the first to comment on "ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ. ಶಂಭೂರು ವಾರ್ಷಿಕ ಮಹಾಸಭೆ"