ಜಾಹೀರಾತು
ಜಾಹೀರಾತು
ಜಾಹೀರಾತು
ಬಂಟ್ವಾಳದಲ್ಲಿ ನೇತ್ರಾವತಿ ನದಿ ಉಕ್ಕಿ ಹರಿಯಲು ಆರಂಭಿಸಿದೆ. ಶನಿವಾರ ಬೆಳಗ್ಗೆ ನದಿ ಅಪಾಯದ ಮಟ್ಟ 8.5 ಮೀಟರ್ ಎತ್ತರವನ್ನು ದಾಟಿ ಹರಿಯಲಾರಂಭಿಸಿದ್ದು, ಬೆಳಗ್ಗೆ 7 ಗಂಟೆ ವೇಳೆಗೆ 9 ಮೀಟರ್ ಎತ್ತರದಲ್ಲಿ ಹರಿಯುತ್ತಿತ್ತು. ಇದರಿಂದ ತಗ್ಗು ಪ್ರದೇಶಗಳಾದ ಗೂಡಿನಬಳಿ – ಬಂಟ್ವಾಳ ರಸ್ತೆ, ಬಡ್ಡಕಟ್ಟೆ ಮೀನು ಮಾರ್ಕೆಟ್ ಸಮೀಪವೆಲ್ಲಾ ನೀರು ಉಕ್ಕಿ ಹರಿಯಲಾರಂಭಿಸಿದೆ. ಇನ್ನು ಪಾಣೆಮಂಗಳೂರು ಸಮೀಪವೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಂಭವವಿದ್ದು, ಕಳೆದ ವರ್ಷ ಅಪಾಯವಾದ ಜಾಗಗಳ ನಿವಾಸಿಗಳು ಎಚ್ಚರದಲ್ಲಿರಲು ತಾಲೂಕಾಡಳಿತ ಸೂಚಿಸಿದೆ.
ಜಾಹೀರಾತು
ಇನ್ನು ಶಂಭೂರು ಡ್ಯಾಂ ಮೊದಲೇ ಭರ್ತಿಯಾಗಿದ್ದು, 14 ಗೇಟುಗಳನ್ನು ಶೇ.50ರಷ್ಟು ತೆರೆಯಲಾಗಿದೆ. ಆಗಾಗ ಸೈರನ್ ಮೊಳಗಿಸುವ ಮೂಲಕ ನೀರನ್ನು ಹರಿಯಬಿಡಲಾಗುತ್ತಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಅಪಾಯದ ಮಟ್ಟ ಮೀರಿದ ನೇತ್ರಾವತಿ: ತಗ್ಗು ಪ್ರದೇಶಗಳು ಜಲಾವೃತ, ತೀರ ನಿವಾಸಿಗಳಿಗೆ ಎಚ್ಚರಿಕೆ"