ಭಾರತ ಕಮ್ಯೂನಿಸ್ಟ್ ಪಕ್ಷದ ಶತಮಾನೋತ್ಸವ ಸಂಭ್ರಮಾಚರಣೆಯ ಸಂಧರ್ಭದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಪಕ್ಷದ ಸಮ್ಮೇಳನಗಳು ಆರಂಭಗೊಂಡಿದೆ. ಪಕ್ಷದ ಸಂವಿಂಧಾನದಂತೆ ಗ್ರಾಮ ಶಾಖೆಯಿಂದ ಆರಂಭಗೊಳ್ಳುವ ಸಮ್ಮೇಳನಗಳು ರಾಷ್ಟ್ರೀಯ ಅಧಿವೇಶನದ ಮುಖೇನ ಸಮಾಪನಗೊಳ್ಳಿದೆ. ಅದರಂತೆ ಪಕ್ಷದ ೨೫ ನೇ ಬಂಟ್ವಾಳ ತಾಲೂಕು ಸಮ್ಮೇಳನ ಜೂನ್ ೨೯ ರಂದು ಭಾನುವಾರ ಬಂಟ್ವಾಳದ ಎ.ಶಾಂತಾರಾಂ ಪೈ ಸ್ಮಾರಕ ಭವನದಲ್ಲಿ ನಡೆಸಲು ಪಕ್ಷದ ತಾಲೂಕು ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಅಂದು ಬೆಳಿಗ್ಗೆ ೧೦ ಗಂಟೆಗೆ ಧ್ವಜಾರೋಹಣದೊಂದಿಗೆ ಸಮ್ಮೇಳನ ಆರಂಭಗೊಳ್ಳಲಿದ್ದು ನಂತರ ಸಮ್ಮೇಳನದ ಕಾರ್‍ಯಕಲಾಪಗಳು ನಡೆಯಲಿದೆ. ಬಂಟ್ವಾಳ ತಾಲೂಕಿನ ಪ್ರಸ್ತುತ ಸiಸ್ಯೆಗಳ ಕುರಿತಾಗಿ ಸಮ್ಮೇಳನದಲ್ಲಿ ಚರ್ಚೆ ನಡೆಯಲಿದ್ದು ಸೂಕ್ತ ನಿರ್ಣಯ ಕೈಗೊಳ್ಳಲಿದ್ದು ಸಮಸ್ಯೆಗಳ ಪರಿಹಾರ ಕುರಿತಂತೆ ಮುಂದಿನ ಹೋರಾಟದ ರೂಪುರೇಶೆಳನ್ನು ಕೈಗೊಳ್ಳಲಿಕ್ಕಿದ್ದು ಈಗಾಗಲೇ ಬಂಟ್ವಾಳ ತಾಲೂಕಿನ ವಿವಧ ಗ್ರಾಮ ಶಾಖೆಯ ಪಕ್ಷದ ಸಮ್ಮೇಳನಗಳು ಯಶಸ್ವಿಯಾಗಿ ನಡೆದಿದ್ದು ವಿವಿಧ ಶಾಖೆಗಳಿಂದ ಸುಮಾರು ೧೦೦ ಜನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಕ್ಷದ ರಾಜ್ಯ ಹಾಗೂ ಜಿಲ್ಲಾ ನಾಯಕರುಗಳು ಭಾಗವಹಿಸಲಿದ್ದು ಸಂಜೆ ೫ ಗಂಟೆಗೆ ಸಮ್ಮೇಳನ ಸಮಾಪನಗೊಳ್ಳಲಿದ್ದು ಪಕ್ಷದ ವಿವಿಧ ಶಾಖೆಗಳಿಂದ ಆಯ್ಕೆಗೊಂಡ ಪ್ರತಿನಿಧಿ ಸಂಗಾತಿಗಳು ಸರಿಯಾದ ಸಮಯಕ್ಕೆ ಬಂದು ಹಾಜರಿರಲು ಪಕ್ಷದ ಬಂಟ್ವಾಳ ತಾಲೂಕು ಕಾರ್‍ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್ ಪತ್ರಿಕಾ ಪ್ರಕಟಣೆ ಹೇಳಿಕೆ ನೀಡಿ ತಿಳಿಸಿರುತ್ತಾರೆ.
Be the first to comment on "Bantwal: ಜೂನ್ 29 ರಂದು ಸಿಪಿಐ ಬಂಟ್ವಾಳ ತಾಲೂಕು ಸಮ್ಮೇಳನ"