
ಅಸ್ತಿತ್ವದಲ್ಲೇ ಇಲ್ಲ ಎಂದು ಹೇಳಿಸಿಕೊಂಡಿದ್ದ ಕೇರಳದಲ್ಲಿ ಬಿಜೆಪಿ 11ಕ್ಕೂ ಅಧಿಕ ಸ್ಥಾನದಲ್ಲಿ ಮುನ್ನಡೆಯಿದೆ. ಪುದುಚೇರಿಯಲ್ಲಿ ಮತ್ತೆ ಅಧಿಕಾರ ಸ್ಥಾಪನೆಯತ್ತ ಮುನ್ನಡೆಯಲ್ಲಿದೆ. ತಮಿಳುನಾಡಿನಲ್ಲಿ ಬಿಜೆಪಿ ಬೆಂಬಲಿಸುತ್ತಿರುವ ಎಐಎಡಿಎಂಕೆ ಗಮನಾರ್ಹ ಸ್ಥಾನ ಗಳಿಕೆಯಲ್ಲಿದೆ. ಅಸ್ಸಾಂನಲ್ಲಿ ಮತ್ತೆ ಅಧಿಕಾರದ ಮೆಟ್ಟಿಲು ಹತ್ತಿದೆ. ವಿಶೇಷವೆಂದರೆ ಪಶ್ಚಿಮ ಬಂಗಾಲದಲ್ಲೂ ಅಧಿಕಾರದ ಸನಿಹಕ್ಕೆ ಬರುತ್ತಿದೆ. ಬೆಳಗ್ಗೆ ಸುಮಾರು 10 ಗಂಟೆ ಆಗುವಾಗಲೇ ದೇಶದಾದ್ಯಂತ ಬಿಜೆಪಿಗರ ಮೊಗದಲ್ಲಿ ಮಂದಹಾಸ ಮೂಡಲು ಕಾರಣ ಹೀಗೆ.

ವಾಸ್ತವವಾಗಿ ಅಸ್ಸಾಂ ಮತ್ತು ಪುದುಚೇರಿ ಹೊರತುಪಡಿಸಿದರೆ, ಬಿಜೆಪಿ ಪ್ರವೇಶಕ್ಕೂ ಸಾಧ್ಯವೇ ಇಲ್ಲ ಎಂಬಂಥ ರಾಜ್ಯಗಳಾದ ಕೇರಳದಲ್ಲಿ ಗಮನಾರ್ಹ ಸಾಧನೆಯನ್ನು ಬಿಜೆಪಿ ಮಾಡುತ್ತಿದೆ. ಒಂದು ಕಾಲದಲ್ಲಿ ಕಮ್ಯೂನಿಷ್ಟರ ಭದ್ರಕೋಟೆಯಾಗಿದ್ದ ಬಂಗಾಲದಲ್ಲಿ ಬಿಜೆಪಿಯ ಬಾವುಟ ಹಾರಾಡುತ್ತಿದೆ. ತಮಿಳುನಾಡಿನಲ್ಲಿ ಡಿಎಂಕೆಯನ್ನು ಕಸಿವಿಸಿ ಮಾಡುವಂತೆ ವಿಜಯ್ ಪಕ್ಷ ಮಾಡುತ್ತಿದ್ದರೂ ಬಿಜೆಪಿ ಬೆಂಬಲಿಸುತ್ತಿರುವ ಎಐಎಡಿಎಂಕೆ ದೊಡ್ಡ ಮೊತ್ತದತ್ತ ಸಾಗುತ್ತಿದೆ. ಹೀಗಾಗಿ ಬಿಜೆಪಿಗೆ ಬಂದದ್ದೆಲ್ಲಾ ಬೋನಸ್… ಬಿಜೆಪಿಗರ ಮೊಗದಲ್ಲಿ ಮಂದಹಾಸ ಮೂಡಲು ಕಾರಣ ಹೀಗೆ.

ಸದ್ಯದ ಫಲಿತಾಂಶ ವಿವರ ಹೀಗಿದೆ. ಇದು ಬದಲಾಗಲೂಬಹುದು.
ತಮಿಳುನಾಡು ಡಿಎಂಕೆ 54, ಎಐಎಡಿಎಂಕೆ 67, ಟಿವಿಕೆ 84. ಒಟ್ಟು 234 ಸ್ಥಾನಗಳು.
ಅಸ್ಸಾಂ ಒಟ್ಟು 126: ಬಿಜೆಪಿ 86, ಕಾಂಗ್ರೆಸ್ 28, ಇತರ 1
ಕೇರಳಂ: ಎಲ್.ಡಿ.ಎಫ್. 41, ಯುಡಿಎಫ್ 81
ಪುದುಚೇರಿ: ಬಿಜೆಪಿ 7, ಕಾಂಗ್ರೆಸ್ 5


Be the first to comment on "ಬೆಳಗ್ಗೆ ಬಿಜೆಪಿಯವರ ಮೊಗದಲ್ಲಿ ಮಂದಹಾಸ, ಕಾರಣವೇನು?"