ಕರಾವಳಿ ಜಿಲ್ಲೆಗಳಲ್ಲಿ ಸಮಾಜಘಾತುಕ ಶಕ್ತಿಗಳಿಂದ ಶಾಂತಿ ಕದಡಲು ಪ್ರಯತ್ನಗಳು ನಡೆಯುತ್ತಿದೆ. ಕ್ಷುಲ್ಲಕ ನೆಪಗಳನ್ನೊಡ್ಡಿ ಧರ್ಮ ಧರ್ಮಗಳ ಮಧ್ಯೆ ಕಲಹಗಳನ್ನು ಸೃಷ್ಟಿಸಿ ತನ್ಮೂಲಕ ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆಯುತ್ತಿದೆ. ಇಂತಹ ಸಂಧರ್ಭದಲ್ಲಿ ಜಿಲ್ಲೆಯಲ್ಲಿ ಶಾಂತಿ ಸೌಹಾರ್ಧತೆ ಉಳಿಸಲು ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಹೆಚ್ಚು ಮಹತ್ವಕೊಟ್ಟು ಉದ್ಯೋಗ ಸೃಷ್ಟಿಯಂತಹ ಅಭಿವೃದ್ಧಿ ಪರ ಕೆಲಸಗಳಿಗೆ ಜನ ಸ್ಪಂದಿಸುವಂತೆ ನೆಮ್ಮದಿಯಿಂದ ಬಾಳುವಂತಾಗಲು ಪೂರಕ ಪ್ರಯತ್ನಗಳು ಆಗಬೇಕಿದೆ. ಈ ಹಿನ್ನೆಯಲ್ಲಿ ಕಮ್ಯೂನಿಸ್ಟ್ ಪಕ್ಷದ ಸಮ್ಮೇಳನಗಳು ನಡೆಯುತ್ತಿದ್ದು ಜಿಲ್ಲೆಯ ಜನತೆ ಕಮ್ಯೂನಿಸ್ಟ್ ಪಕ್ಷದ ಜೊತೆ ಕೈಜೋಡಿಸಬೇಕಿದೆ. ಈ ನಿಟ್ಟಿನಲ್ಲಿ ಮುಂಬರುವ ಜುಲಾಯಿ ತಿಂಗಳ 20 ರಿಂದ 22 ರವರೆಗೆ ವಿಟ್ಲದಲ್ಲಿ ನಡೆಯುವ ಪಕ್ಷದ ೨೫ ನೇ ಜಿಲ್ಲಾ ಸಮ್ಮೇಳನವನ್ನು ಯಶಸ್ವಿಗೊಳಿಸಲು ಪಕ್ಷದ ಜಿಲ್ಲಾ ಕಾರ್‍ಯದರ್ಶಿ ಬಿ.ಶೇಖರ್ ಕರೆ ನೀಡಿದರು.
ಬಂಟ್ವಾಳದಲ್ಲಿ ನಡೆದ ಸಿಪಿಐ ಪಕ್ಷದ 25 ನೇ ತಾಲೂಕು ಸಮ್ಮೇವನ್ನು ಉದ್ಘಾಟಿಸಿ ಮಾತನಾಡಿದರು. ಸಮ್ಮೇಳನದಲ್ಲಿ ಪಕ್ಷದ ಮಾಜೀ ಜಿಲ್ಲಾ ಕಾರ್‍ಯದರ್ಶಿ ವಿ.ಕುಕ್ಯಾನ್ ಮಾತನಾಡಿ ತ್ಯಾಗ ಹೋರಾಟ ಬಲಿದಾನಗಳ ಐತಿಹಾಸಿಕ ಚರಿತ್ರೆ ಹೊಂದಿರುವ ಭಾರತ ಕಮ್ಯೂನಿಸ್ಟ್ ಪಕ್ಷ ಸ್ವಾತಂತ್ರ್ಯ ಪೂರ್ವದಲ್ಲೇ ಸ್ವಾತಂತ್ರ ಸಂಗ್ರಾಮದಲ್ಲಿ ಗುರುತಿಸಿಕೊಂಡಿದೆ ಎಂದರು.
ಎಐಟಿಯುಸಿ ಜಿಲ್ಲಾ ಕಾರ್‍ಯದರ್ಶಿ ವಿ.ಎಸ್.ಬೇರಿಂಜ ಹಾಗೂ ಪಕ್ಷದ ಮಂಗಳೂರು ತಾಲೂಕು ಕಾರ್‍ಯದರ್ಶಿ ಎಂ.ಕರುಣಾಕರ ಶುಭಕೋರಿ ಮಾತನಾಡಿದರು. ಸಮ್ಮೇಳನದ ಅಧ್ಯಕ್ಷೀಯ ಮಂಡಳಿಯಲ್ಲಿ ಪಕ್ಷದ ಹಿರಿಯ ಮುಂದಾಳು ಬಿ.ಬಾಬು ಭಂಡಾರಿ, ಬಿ.ಎಂ ಹಸೈನಾರ್ ವಿಟ್ಲ ಹಾಗೂ ಕುಸುಮ ಕಳ್ಳಿಗೆ ಉಪಸ್ಥಿತರಿದ್ದು ಸಮ್ಮೇಳನ ನಡೆಸಿಕೊಟ್ಟರು.
ಸಮ್ಮೇಳನದಲ್ಲಿ ಕಳೆದ ಸಮ್ಮೇಳನದಿಂದ ಈ ಸಮ್ಮೇಳನದವರೆಗೆ ಪಕ್ಷದ ತಾಲೂಕು ಘಟಕ ನಡೆಸಿದ ಚಟುವಟಿಕೆಗಳ ವರದಿ ರಾಜಕೀಯ ವರದಿ ಹಾಗೂ ಸಂಘಟನಾ ವರದಿ ಲೆಕ್ಕಪತ್ರ ವನ್ನು ಪಕ್ಷದ ತಾಲೂಕು ಕಾರ್‍ಯದರ್ಶಿ ಸುರೇಶ್ ಕುಮಾರ್ ಮಂಡಿಸಿದರು. ಕೆಲವು ತಿದ್ದುಪಡಿಗಳೊಂದಿಗೆ ಸಭೆಯಲ್ಲಿ ಅಂಗೀಕಾರ ದೊರೆಯಿತು. ನೂತನ ತಾಲೂಕು ಸಮಿತಿಗೆ ಆಯ್ಕೆ ನಡೆದು ಬಂಟ್ವಾಳ ತಾಲೂಕಿನ ವಿವಿಧ ಶಾಖೆಗಳಿಂದ ಸುಮಾರು ೧೭ ಜನರನ್ನು ಆಯ್ಕೆ ಮಾಡಲಾಯ್ತು. ಕಾರ್‍ಯದರ್ಶಿಯಾಗಿ ಸುರೇಶ್ ಕುಮಾರ್ ಸಹಕಾರ್‍ಯರ್ಶಿಗಳಾಗಿ ಪ್ರೇಮನಾಥ ಕೆ, ಭಾರತಿ ಪ್ರಶಾಂತ್ ಹಾಗೋ ಕೋಶಾದಿಕಾರಿಯಾಗಿ ಶ್ರೀನಿವಾಸ ಭಂಡಾರಿ ಪುನರಾಯ್ಕೆಗೊಂಡರು. ಸಮ್ಮೇಳನದಲ್ಲಿ ಪ್ರಮುಖ ೧೫ ನಿರ್ಣಯಗಳನ್ನು ಮಂಡಿಸಿ ಅಂಗೀಕರಿಸಯ್ತು. ಮುಂಬರುವ ೨೫ ನೇ ಜಿಲ್ಲಾ ಸಮ್ಮೇಳನಕ್ಕೆ ಸುಮಾರು ೩೦ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಂಯಿತು. ಪಕ್ಷದ ತಾಲೂಕು ಸಮಿತಿ ಸದಸ್ಯೆ ಶಮಿತ ಸ್ವಾಗತಿಸಿ ಸಹ ಕಾರ್‍ಯದರ್ಶಿ ಭಾರತಿ ಪ್ರಶಾಂತ್ ವಂದಿಸಿದರು. ಪಕ್ಷದ ತಾಲೂಕು ಸಹ ಕಾರ್‍ಯದರ್ಶಿ ಪ್ರೇಮನಾಥ ಕೆ ಕಾರ್‍ಯಕ್ರಮ ನಿರೂಪಿಸಿದರು.
Be the first to comment on "Bantwal: ಸಿಪಿಐ 25 ನೇ ಬಂಟ್ವಾಳ ತಾಲೂಕು ಸಮ್ಮೇಳನ"