
ತಮಿಳುನಾಡು –ಡಿಎಂಕೆ ಹಿಂದಿಕ್ಕಿದ ಟಿವಿಕೆ, ಯಾರಿಗೆ ‘ವಿಜಯ’ಮಾಲೆ
ದೇಶದಾದ್ಯಂತ ಕುತೂಹಲ ಕೆರಳಿಸಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. ಇದೀಗ ಮುನ್ನಡೆಯ ಲೆಕ್ಕಾಚಾರಗಳು ಆಗುತ್ತಿದ್ದು, ಯಾವುದೇ ಹಂತದಲ್ಲಿ ಇದು ಬದಲಾವಣೆ ಆಗಲೂಬಹುದು. ಪರಿಪೂರ್ಣ ಫಲಿತಾಂಶ ಬಂದರಷ್ಟೇ ಸರಿಯಾದ ಲೆಕ್ಕಾಚಾರ, ಬಲಾಬಲಗಳು ದೊರಕುತ್ತದೆ. ಸದ್ಯದ ಮಾಹಿತಿ ಹೀಗಿದೆ.

ಕೇರಳಂ, ಪುದುಚೇರಿ (ಕೇಂದ್ರಾಡಳಿತ ಪ್ರದೇಶ), ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಚುನಾವಣೆ ನಡೆದಿದೆ. ಇದರಲ್ಲಿ ಕೇರಳಂ ನಲ್ಲಿ ಎಲ್.ಡಿ.ಎಫ್, ಪ.ಬಂಗಾಳದಲ್ಲಿ ಟಿಎಂಸಿ, ತಮಿಳುನಾಡಿನಲ್ಲಿ ಡಿಎಂಕೆ, ಪುದುಚೇರಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಅಸ್ಸಾಂನಲ್ಲಿ ಮಾತ್ರ ಬಿಜೆಪಿ ಅಧಿಕಾರದಲ್ಲಿತ್ತು. ಇದೀಗ ಮತ ಎಣಿಕೆ ಹಾಗೂ ಟ್ರೆಂಡಿಂಗ್ ನೋಡಿದರೆ, ಕೇರಳಂನಲ್ಲಿ ಎಲ್.ಡಿ.ಎಫ್. 25, ಯುಡಿಎಫ್ 73ರಲ್ಲಿ ಮುನ್ನಡೆಯಲ್ಲಿದೆ. ವಿಶೇಷವೆಂದರೆ ಬಿಜೆಪಿ 13 ಸ್ಥಾನಗಳಲ್ಲಿ ಮುನ್ನಡೆಯಿದೆ. ಪಶ್ಚಿಮ ಬಂಗಾಲದಲ್ಲಿ ಬಿಜೆಪಿ 124 ಸ್ಥಾನದಲ್ಲಿ ಮುನ್ನಡೆಯಲ್ಲಿದ್ದರೆ, ಟಿಎಂಸಿ 110 ಸ್ಥಾನದಲ್ಲಿ ಮುನ್ನಡೆಯಲ್ಲಿದೆ. ಅಸ್ಸಾಂನಲ್ಲಿ ಬಿಜೆಪಿ ವಿಜಯದ ಮೆಟ್ಟಿಲು ಹತ್ತಿಯಾಗಿದೆ. ಬಿಜೆಪಿ 83, ಕಾಂಗ್ರೆಸ್ 26 ಸ್ಥಾನದಲ್ಲಿ ಮುನ್ನಡೆಯಲ್ಲಿದೆ. ಪುದುಚೇರಿಯಲ್ಲೂ ಬಿಜೆಪಿ 6, ಕಾಂಗ್ರೆಸ್ 2 ಸ್ಥಾನ ಗಳಿಸಿದ್ದು, ಬಿಜೆಪಿ ಮುನ್ನಡೆಯಲ್ಲಿದೆ. ವಿಶೇಷವೆಂದರೆ ತಮಿಳುನಾಡು ಫಲಿತಾಂಶ. ಚಿತ್ರನಟ ವಿಜಯ್ ಅವರ ಟಿವಿಕೆ ಪಕ್ಷ ಡಿಎಂಕೆಯನ್ನೂ ಹಿಂದಿಕ್ಕಿ ಮುಂದಿದೆ. ಪ್ರಸ್ತುತ ಸನ್ನಿವೇಶದಲ್ಲಿ ವಿಜಯ್ ಅವರ ಟಿವಿಕೆ 83 ಸ್ಥಾನದಲ್ಲಿ ಮುಂದೆ ಇದ್ದರೆ, ಎಐಎಡಿಎಂಕೆ 61 ಮತ್ತು ಡಿಎಂಕೆ 54 ಸ್ಥಾನದಲ್ಲಿ ಮುನ್ನಡೆಯಲ್ಲಿದೆ.


Be the first to comment on "ತಮಿಳುನಾಡು –ಡಿಎಂಕೆ ಹಿಂದಿಕ್ಕಿದ ಟಿವಿಕೆ, ಯಾರಿಗೆ ‘ವಿಜಯ’ಮಾಲೆ"