BJP PROTEST: 23ರಂದು ಏಕಕಾಲದಲ್ಲಿ ಎಲ್ಲ ಸ್ಥಳೀಯಾಡಳಿತ ಕಚೇರಿ ಮುಂಭಾಗ ಬಿಜೆಪಿ ಪ್ರತಿಭಟನೆ – ಕಾರಣಗಳೇನು?

A protest will be held by the BJP on June 23 against the state government’s policy, as stated in a joint announcement by BJP constituency president R. Chennappa Kottayan and Bantval MLA Rajesh Naik Ulippadi.

ರಾಜ್ಯ ಸರಕಾರದ ನೀತಿ ವಿರುದ್ಧ ಬಿಜೆಪಿ ವತಿಯಿಂದ ಜೂನ್ 23ರಂದು ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್ ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಜಂಟಿ ಪ್ರಕಟಣೆ ತಿಳಿಸಿದೆ.

ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರವು ಜನ ಸಾಮಾನ್ಯರಿಗೆ ನೀಡುತ್ತಿರುವ ಸರಕಾರಿ ಸೇವೆಗಳನ್ನು ಕಠಿಣಗೊಳಿಸಿ ಜನವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆಋಓಪಿಸಿರುವ ಬಿಜೆಪಿ ಇದನ್ನು ತಕ್ಷಣದಿಂದ ಕೈ ಬಿಡಬೇಕು ಎಂದು ಬಂಟ್ವಾಳ ವಿಧಾನ ಸಭಾ ಕ್ಶೇತ್ರ ವ್ಯಾಪ್ತಿಯ 39 ಗ್ರಾಮ ಪಂಚಾಯತ್ ಹಾಗೂ ಬಂಟ್ವಾಳ ಪುರಸಭಾ ಕಚೇರಿ ಎದುರು ಜೂನ್ 23ರಂದು ಬೆಳಿಗ್ಗೆ 10ಕ್ಕೆ ಏಕಕಾಲದಲ್ಲಿ ಪ್ರತಿಭಟನೆ ನಡೆಸಲಿದೆ ಎಂದವರು ತಿಳಿಸಿದ್ದಾರೆ.

ಪ್ರತಿಭಟನೆ ಮಾಡುವುದಕ್ಕೆ ಬಿಜೆಪಿ ನೀಡುವ ಕಾರಣಗಳೇನು?

94 ಸಿ ಹಕ್ಕು ಪತ್ರಗಳಿಗೆ 9/11 ನೀಡುವುದನ್ನು ತಡೆ ಮಾಡಿರುವುದನ್ನು ತಕ್ಷಣದಿಂದಲೇ ಕೈ ಬಿಟ್ಟೂ ಹಿಂದಿನ ಮಾದರಿಯಲ್ಲಿಯೇ 9/11 ನೀಡಬೇಕು. ಬಡವರ ಅನಧಿಕೃತ ಕಟ್ಟಡಗಳಿಗೆ ನೀಡುತ್ತಿದ್ದ 11 ಬಿ ಖಾತೆಯನ್ನು ನೀಡದಂತೆ ಆದೇಶ ಹೊರಡಿಸಿರುವುದು, ಪ್ಲೋಟಿಂಗ್ ಆಗದೇ ಇರುವ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ಮನೆ ನಂಬ್ರ ನೀಡುವುದನ್ನು ತಡೆ ಹಿಡಿದಿರುವುದು., ಕುಟುಂಬಸ್ಥರು ವಾಸ್ತವವಿದ್ದುಕೊಂಡು ಮನೆ ನಂಬ್ರ ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ತಡೆ ಹಿಡಿದಿರುವುದು (ಇದರಿಂದ ಕೋಳಿ ಫಾರಂ ಚಟುವಟಿಕೆಗಳಿಗೆ ತುಂಬಾ ತೊಂದರೆಯಾಗಿದೆ)., ಗ್ರಾಮ ಪಂಚಾಯತ್ ಗಳಲ್ಲಿ 9/11 ಪಡೆಯಬೇಕಾದರೆ ಲೇಔಟ್ ನಕ್ಷೆಗೆ ನಗರ ಮತ್ತು ಗ್ರಾಮಾಂತರ ಯೋಜನಾ ಕಛೇರಿ (ಮೂಡ)ದಿಂದ ಕಡ್ಡಾಯವಾಗಿ ಅನುಮೋದನೆ ಪಡೆಯುವ ಬಗ್ಗೆ ಆದೇಶ ಹೊರಡಿಸಿರುವುದು (ಗ್ರಾಮ ಪಂಚಾಯತ್ ಗಳನ್ನು ನಗರಾಡಳಿತ ಇಲಾಖೆಗೆ ಮರ್ಜಿ ಮಾಡಿದ ಸರಕಾರ). ಗ್ರಾಮಾಂತರ ಪ್ರದೇಶಗಳಲ್ಲಿ ನಿರ್ಮಿಸಿದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕಕಕ್ಕೆ ಕಾರ್ಮಿಕ ಇಲಾಖೆಯ ಪ್ರಮಾಣ ಪತ್ರ ಪಡೆಯಲು ಆದೇಶ ಹೊರಡಿಸಿ ಜನವಿರೋಧಿ ನೀತಿ ಅನುಸರಿಸುತ್ತಿರುವುದು. ಗ್ರಾಮೀಣ ಭಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ನಗರ ಮತ್ತು ಗ್ರಾಮಾಂತರ ಯೋಜನಾ ಕಛೇರಿಯಿಂದ (ಮೂಡ) ಪ್ರಾರಂಭಿಕ ಪ್ರಮಾಣ ಪತ್ರ ಪಡೆಯಲು ಆದೇಶ ಮಾಡಿರುವುದು (ಇದರಿಂದ ಗ್ರಾಮ ಪಂಚಾಯತ್ ಆಡಳಿತಕ್ಕೆ ಯಾವುದೇ ಗೌರವ ಇಲ್ಲದಂತಾಗಿದೆ) ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಯಲ್ಲಿನ 1-5 ಪ್ಲೋಟಿಂಗ್ ಆಗದಿರುವ ನೂರಾರು ಪ್ರಕರಣಗಳು ಇತ್ಯರ್ಥವಾಗದಿರುವುದು..      ಗ್ರಾಮೀಣ ಭಾಗದ ಬಡ ಜನರಿಗೆ ವಾಸ್ತವ್ಯಕ್ಕೆ ಸೂರು ಒದಗಿಸುವ ವಸತಿ ಯೋಜನೆಗಳು ಸಂಪೂರ್ಣ ಸ್ಥಗಿತ ಮಾಡಿದ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರಕಾರ. ಗ್ರಾಮೀಣ ಭಾಗದಲ್ಲಿ ಗೃಹ ನಿರ್ಮಾಣಕ್ಕೆ ಬೇಕಾಗುವ ಮರಳು ಮತ್ತು ಕೆಂಪುಕಲ್ಲು ಸಾಗಾಣಿಕೆಗೆ ಶಿಸ್ತು ಕ್ರಮದ ಆದೇಶದಿಂದ ಮನೆ ಕಟ್ಟಲಿರುವ ಅದೆಷ್ಟೋ ಮಂದಿ ಬಡವರು ಕಂಗಾಲಾಗಿದ್ದು, ಕಾರ್ಮಿಕರು ದಿಕ್ಕಾ ಪಾಲು ಆಗಿರುತ್ತಾರೆ. ವೃದ್ದಾಪ್ಯ ವೇತನ ವಿಧವಾ ವೇತನ, ಸಂಧ್ಯಾ ಸುರಕ್ಷಾ, ವಿಕಲಚೇತನರ ವೇತನ ಸೇರಿದಂತೆ ಎಲ್ಲಾ ಪಿಂಚಣಿ ಸೌಲಭ್ಯಗಳನ್ನು ಹಂತ ಹಂತವಾಗಿ ಕಡಿತಗೊಳಿಸಿರುವುದು. ಕಾರ್ಮಿಕರ ವಿದ್ಯಾರ್ಥಿ ವೇತನ ಸೇರಿದಂತೆ ಎಲ್ಲಾ ವಿದಧ ವಿದ್ಯಾರ್ಥಿ ವೇತನಗಳ ಮೊತ್ತ ಕಡಿತಗೊಳಿಸಿರುವುದು. 94 ಸಿ ಅಡಿಯಲ್ಲಿ ಹಕ್ಕುಪತ್ರ ಪಡೆಯಲು ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡದಿರುವುದು.   ಜಮೀನಿ ಪರಾಬಾರೆ, ಎಗ್ರಿಮೆಂಟ್ ಕರಾರು ಪತ್ರ ಇತ್ಯಾದಿ ಬಗ್ಗೆ ಸ್ಟಾಂಪ್ ಪೇಪರ್ ನೋಂದಣಿ ಶುಲ್ಕವನ್ನು ೧೦ ಪಟ್ಟು ಹೆಚ್ಚಿಸಿರುವುದು.ವಿದ್ಯುತ್ ಬಿಲ್ಲ್ ಮೊತ್ತವನ್ನು ದುಪ್ಪಟ್ಟು ಮಾಡಿರುವುದು. ಅರ್ಹ ಬಡಕುಟುಂಬಗಳಿಗೆ BPL ಪಡಿತರ ಚೀಟಿ ನೀಡದಿರುವುದು., ,ಜನ ಉಪಯೋಗಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡದಿರುವುದು.                 ರೈತರಿಗೆ ಬಾಕಿ ಇರುವ ಸಾಲ ಮನ್ನಾ ಹಣವನ್ನು ಬಿಡುಗಡೆ ಮಾಡಿಲ್ಲ., ಪ್ರತಿ ಗ್ರಾಮ ಪಂಚಾಯತ್ ಗಳಲ್ಲಿ 15-20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗ್ರಾ. ಪಂ. ನೌಕರರನ್ನು ಖಾಯಂ ಮಾಡದಿರುವ ಕಾರಣ ಪ್ರತಿಭಟನೆ ನಡೆಯಲಿದೆ ಎಂದವರು ತಿಳಿಸಿದ್ದಾರೆ.

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "BJP PROTEST: 23ರಂದು ಏಕಕಾಲದಲ್ಲಿ ಎಲ್ಲ ಸ್ಥಳೀಯಾಡಳಿತ ಕಚೇರಿ ಮುಂಭಾಗ ಬಿಜೆಪಿ ಪ್ರತಿಭಟನೆ – ಕಾರಣಗಳೇನು?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*