

ಸುಳ್ಯ: ಸುಳ್ಯದಲ್ಲಿ ಭಾನುವಾರ ರಾತ್ರಿ ಕಾರಿನ ಬಳಿ ಬಂದ ವ್ಯಕ್ತಿಯೊಬ್ಬರ ಮೇಲೆ ಮತ್ತೊಂದು ಕಾರಿನಲ್ಲಿ ಬಂದ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದು, ಈ ಸಂದರ್ಭ ಕಾರಿಗೆ ಗುಂಡು ತಾಗಿದ ಕಾರಣ ಅವರು ಪಾರಾಗಿದ್ದಾರೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಮ್ಮದ್ ಸಾಯಿ (39) ಎಂಬವರು ತನ್ನ ಹೆಂಡತಿಯ ತಂಗಿಯ ಮದುವೆ ಕಾರ್ಯಕ್ರಮವನ್ನು ಬಂಟ್ವಾಳದಲ್ಲಿ ಮುಗಿಸಿ ಸುಳ್ಯಕ್ಕೆ ಬಂದು ರಾತ್ರಿ ಸುಮಾರು 10.30ಕ್ಕೆ ಸುಳ್ಯದ ಜ್ಯೋತಿ ಸರ್ಕಲ್ ಹತ್ತಿರದ ವೆಂಕಟರಮಣ ಸೊಸೈಟಿ ಬಳಿ ತನ್ನ ಕ್ರೇಟಾ ಕಾರು ನಿಲ್ಲಿಸಿ, ತಂಗಿ ಮನೆಗೆ ಹೋಗಿ ವಾಪಸ್ ಕಾರಿನ ಬಳಿ ಬಂದು ಬಾಗಿಲು ತೆರೆಯಲು ಹೊರಡುವ ಸಂದರ್ಭ, ಸ್ಕಾರ್ಪಿಯೋ ಕಾರೊಂದರಲ್ಲಿದ್ದ ನಾಲ್ವರು ಗುಂಡು ಹಾರಿಸಿದ್ದಾರೆ. ಈ ಸಂದರ್ಭ ಗುಂಡು ಮಹಮ್ಮದ್ ಸಾಯಿ ಅವರ ಬೆನ್ನಿನ ಎಡಬದಿಗೆ ತಾಗಿ ಕಾರಿನ ಬಲಬದಿಯ ಎರಡು ಡೋರ್ ಗಳ ಮಧ್ಯೆ ತಾಗಿದೆ.
Be the first to comment on "ಸುಳ್ಯದಲ್ಲಿ ಗುಂಡಿನ ದಾಳಿ, ವ್ಯಕ್ತಿ ಪಾರು"