



ಬಂಟ್ವಾಳ: ಸರ್ಕಾರಿ ಪ್ರೌಢಶಾಲೆ ಬಿ.ಸಿ.ರೋಡ್ ಅಜ್ಜಿಬೆಟ್ಟು ನಲ್ಲಿ ವಿಶ್ವ ಪರಿಸರ ದಿನವನ್ನು ಶಾಲಾ ಆವರಣದ ಬದಿಯಲ್ಲಿ ಉಪಯುಕ್ತ ಗಿಡ ನೆಡುವ ಮೂಲಕ ಆಚರಿಸಲಾಯಿತು. ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷರಾದ ಕೇಶವ ದೈಪಲ ಶಾಲಾ ಆವರಣದ ಬದಿಯಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಇದೇ ವೇಳೆ ಚಿತ್ರಕಲಾ ಸ್ಪರ್ಧೆಯನ್ನು ಶಾಲೆಯಲ್ಲಿ ಏರ್ಪಡಿಸಲಾಯಿತು. ಈ ಸಂದರ್ಭ ಸ.ಹಿ.ಪ್ರಾ.ಶಾಲೆ ಬಿ.ಮೂಡ ಶಾಲಾಭಿವೃದ್ಧಿ ಸಮಿತಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಹರೀಶ್ ಮಾಂಬಾಡಿ, ಶಾಲಾ ಹಳೇ ವಿದ್ಯಾರ್ಥಿಗಳಾದ ಗಣೇಶ್, ವಿದ್ಯಾಶ್ರೀ, ಪ್ರೌಢಶಾಲಾ ಹಿರಿಯ ಶಿಕ್ಷಕ ರಮೇಶ್ ನಾಯಕ್, ಕಲಾಶಿಕ್ಷಕ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಬಿ.ಸಿ.ರೋಡ್ ಅಜ್ಜಿಬೆಟ್ಟು ಹೈಸ್ಕೂಲಿನಲ್ಲಿ ವಿಶ್ವ ಪರಿಸರ ದಿನಾಚರಣೆ"