www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ 9448548127
ಬಂಟ್ವಾಳ: ಬಂಟ್ವಾಳ ತಾಲೂಕಿನ ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಹಿನ್ನೆಲೆಯಲ್ಲಿ ಕರಸೇವೆ ಕಾರ್ಯ ಭರದಿಂದ ಸಾಗಿದ್ದು, ಭಾನುವಾರ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಭಾಗವಹಿಸಿ, ಭಕ್ತರೊಂದಿಗೆ ಮಾತುಕತೆ ನಡೆಸಿದರು. ಕಳೆದೊಂದು ತಿಂಗಳಿಂದ ಈ ಕರಸೇವಾ ಕಾರ್ಯ ಸುತ್ತಮುತ್ತಲಿನ ಗ್ರಾಮಗಳಾದ ಬಿ.ಮೂಡ, ಕಳ್ಳಿಗೆ, ತುಂಬೆ ಸಹಿತ ವಿವಿಧ ಗ್ರಾಮಗಳ ಸಂಘಟನೆ, ಮಾತೃಸಂಘಟನೆಗಳ ಮೂಲಕ ನಡೆಯುತ್ತಿದ್ದು, ಜತೆಗೆ ಭಜನಾ ಕಾರ್ಯಕ್ರಮವೂ ನಡೆಯುತ್ತಿದೆ.
ಈ ಸಂದರ್ಭ ಮಾತನಾಡಿದ ಶಾಸಕ ನಾಯ್ಕ್, ಬ್ರಹ್ಮಕಲಶದ ಸಂದರ್ಭ ದೇವಸ್ಥಾನದ ಪರಿಸರ ಹೊಸರೂಪವನ್ನು ಪಡೆದು ಬ್ರಹ್ಮಕಲಶವು ಯಶಸ್ವಿಯಾಗಿ ನೆರವೇರುವ ಸಂಕೇತ ಕಾಣುತ್ತಿದೆ. ಶ್ರದ್ಧೆಯಿಂದ ದೇವರ ಸೇವೆಯಲ್ಲಿ ಭಾಗವಹಿಸುತ್ತಿರುವ ಸಾವಿರಾರು ಕಾರ್ಯಕರ್ತರ ಶ್ರಮ ಅಭಿನಂದನಾರ್ಹ ಎಂದರು.
ಜೀರ್ಣೋದ್ಧಾರ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಅಗತ್ಯ ಬಿದ್ದರೆ ಮತ್ತಷ್ಟು ನೆರವು ನೀಡುವ ಭರವಸೆ ನೀಡಿದರು. ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ದಾಮೋದರ ನೆತ್ತರಕೆರೆ, ಸದಸ್ಯರಾದ ದಿವಾಕರ ಶೆಟ್ಟಿ ಕುಪ್ಪಿಲ, ಸತೀಶ್ ಶೆಟ್ಟಿ ಮೊಡಂಕಾಪು, ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಕೇಶವ ದೈಪಲ, ಅಮಿತಾ ವಿಶ್ವನಾಥ್ ದಾಸರಕೋಡಿ, ಉಮಾ ಲಿಂಗಪ್ಪ ತುಂಬೆ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ರಂಗೋಲಿ, ಸಂಚಾಲಕ ತೇವು ತಾರನಾಥ ಕೊಟ್ಟಾರಿ ಫರಂಗಿಪೇಟೆ, ಪ್ರಧಾನ ಕಾರ್ಯದರ್ಶಿ ಗಣೇಶ್ ಸುವರ್ಣ ತುಂಬೆ, ಕೋಶಾಧಿಕಾರಿ ಕವಿರಾಜ್ ಚಂದ್ರಿಗೆ, ಪ್ರಮುಖರಾದ ಮನೋಜ್ ವಳವೂರು, ಮಹೇಶ್ ಶೆಟ್ಟಿ ಜುಮಾದಿಗುಡ್ಡೆ, ಮನೋಹರ ಕಂಜತ್ತೂರು, ರಾಘವ ಕಾರಂತ ಕನಪಾಡಿ, ವೇಣುಗೋಪಾಲ ಶೆಟ್ಟಿ ಕುಪ್ಪಿಲಗುತ್ತು, ವಿಶ್ವನಾಥ್ ಕುಲಾಲ್ ನೆತ್ತರಕೆರೆ, ಪೂವಪ್ಪ ಸಪಲ್ಯ ದರಿಬಾಗಿಲು ಮತ್ತಿತರರು ಉಪಸ್ಥಿತರಿದ್ದರು.
Be the first to comment on "ದೇವಂದಬೆಟ್ಟು ಬ್ರಹ್ಮಕಲಶೋತ್ಸವ: ಕರಸೇವೆಗೆ ಭಕ್ತರ ಸ್ಪಂದನೆ, ಶಾಸಕ ರಾಜೇಶ್ ನಾಯ್ಕ್ ಭಾಗಿ"