- ಬಂಟ್ವಾಳ ತಾಲೂಕಿನ ನಗ್ರಿ ಸಮೀಪ ಭಾನುವಾರ ನಡೆದ ಘಟನೆ
ಬಂಟ್ವಾಳ ತಾಲೂಕಿನ ನಗ್ರಿ ಶಾಂತಿನಗರ ಎಂಬಲ್ಲಿ ಇನ್ನೋವಾ ಕಾರಿನಲ್ಲಿ ಮೃತದೇಹ ಭಾನುವಾರ ಸಂಜೆ ಪತ್ತೆಯಾಗಿದೆ. ಬಂಟ್ವಾಳ ತಾಲೂಕಿನ ಬೊಳ್ಳಾಯಿ ಸಮೀಪ ನಗ್ರಿ ಎಂಬಲ್ಲಿ ರಸ್ತೆ ಬದಿಯಲ್ಲಿ ಇರುವ ಗುಡ್ಡ ಪ್ರದೇಶದ ಮೈದಾನದಲ್ಲಿ ಕಾರೊಂದು ಕಂಡುಬಂದಿದ್ದು, ಅದರ ಹಿಂಬದಿಯ ಸೀಟಿನಲ್ಲಿ ಸುಮಾರು 40ರಿಂದ 50 ವರ್ಷ ಹರೆಯದ ಶವ ಕುಳಿತ ಸ್ಥಿತಿಯಲ್ಲಿ ಕಂಡುಬಂದಿದೆ. ವ್ಯಕ್ತಿಯನ್ನು ಕೊಂದು ಮೃತದೇಹವನ್ನು ಕಾರಿನಲ್ಲಿ ಬಿಟ್ಟು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದ್ದು, ಕಾರಿನ ನೋಂದಣಿ ಸಂಖ್ಯೆಯನ್ನು ಗಮನಿಸಿದಾಗ ಬೆಂಗಳೂರು ಮೂಲದ ವಾಹನ ಇರಬಹುದು ಎಂದು ಶಂಕಿಸಲಾಗಿದೆ. ವಿಷಯ ತಿಳಿದ ಕೂಡಲೇ ಬಂಟ್ವಾಳ ಸರ್ಕಲ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ನಗರ ಠಾಣಾ ಎಸ್. ಐ.ಅವಿನಾಶ್, ಗ್ರಾಮಾಂತರ ಠಾಣಾ ಎಸ್. ಐ.ಪ್ರಸನ್ನ ಬೇಟಿ ನೀಡಿ ಪರಿಶೀಲನೆ ನಡೆಸಿದರು.
www.bantwalnews.com Editor: Harish Mambady
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
Be the first to comment on "ಇನ್ನೋವಾ ಕಾರಿನಲ್ಲಿ ಶವ ಪತ್ತೆ, ಕೊಲೆ ಶಂಕೆ"