
ಕರ್ನಾಟಕ ಮತ್ತು ಗೋವಾ ನಡುವಿನ ರೈಲು ಸಂಪರ್ಕಕ್ಕೆ ದೊಡ್ಡ ಉತ್ತೇಜನ ನೀಡುವ ನಿಟ್ಟಿನಲ್ಲಿ, ರೈಲ್ವೆ ಸಚಿವಾಲಯವು ಯಶವಂತಪುರ (ಬೆಂಗಳೂರು), ಮಂಗಳೂರು ಮತ್ತು ಮಡಗಾಂವ್ (ಗೋವಾ) ಸಂಪರ್ಕಿಸುವ ನೂತನ ವಂದೇ ಭಾರತ್ ಎಕ್ಸ್’ಪ್ರೆಸ್ ರೈಲು ಸೇವೆಗೆ ಅನುಮೋದನೆ ನೀಡಿದೆ. ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ಪ್ರಮುಖ ಮಾರ್ಗದಲ್ಲಿ ಪ್ರಯಾಣಿಕರಿಗೆ ವೇಗದ, ಆರಾಮದಾಯಕ ಹಾಗೂ ಅನುಕೂಲಕರ ಪ್ರಯಾಣದ ಆಯ್ಕೆಯನ್ನು ಇದು ಒದಗಿಸಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ನೈರುತ್ಯ ರೈಲ್ವೆ, ಹುಬ್ಬಳ್ಳಿ. ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ,ಡಾ. ಮಂಜುನಾಥ ಕನಮಡಿ ವಿವರವಾದ ಮಾಹಿತಿ ನೀಡಿದ್ದಾರೆ.
13 ನವೆಂಬರ್ 2026: ಉದ್ಘಾಟನಾ ವಿಶೇಷ ರೈಲುಗಳ ಸಂಚಾರ
13 ನವೆಂಬರ್ 2026ರಂದು (ಶುಕ್ರವಾರ) ಎಸ್ಎಂವಿಟಿ ಬೆಂಗಳೂರು, ಮಂಗಳೂರು ಜಂಕ್ಷನ್ ಮತ್ತು ಮಡಗಾಂವ್ ಸಂಪರ್ಕಿಸುವ ಎರಡು ಉದ್ಘಾಟನಾ ವಿಶೇಷ ವಂದೇ ಭಾರತ್ ಎಕ್ಸ್’ಪ್ರೆಸ್ ರೈಲುಗಳು ಸಂಚರಿಸಲಿವೆ.

1. ಎಸ್ಎಂವಿಟಿ ಬೆಂಗಳೂರು – ಮಡಗಾಂವ್ ಉದ್ಘಾಟನಾ ವಿಶೇಷ ರೈಲು (ಸಂಖ್ಯೆ 06512)
- ಹೊರಡುವ ಸಮಯ: 13:30 (ಮಧ್ಯಾಹ್ನ 1:30) – ಎಸ್ಎಂವಿಟಿ ಬೆಂಗಳೂರು
- ತಲುಪುವ ಸಮಯ: ಮರುದಿನ 02:55 ಗಂಟೆ – ಮಡಗಾಂವ್
- ನಿಲುಗಡೆಗಳು: ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಮಂಗಳೂರು ಜಂಕ್ಷನ್, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಮುರ್ಡೇಶ್ವರ, ಗೋಕರ್ಣ ರೋಡ್ ಮತ್ತು ಕಾರವಾರ.
2. ಮಂಗಳೂರು ಜಂಕ್ಷನ್ – ಎಸ್ಎಂವಿಟಿ ಬೆಂಗಳೂರು ಉದ್ಘಾಟನಾ ವಿಶೇಷ ರೈಲು (ಸಂಖ್ಯೆ 06213)
- ಹೊರಡುವ ಸಮಯ: 13:30 (ಮಧ್ಯಾಹ್ನ 1:30) – ಮಂಗಳೂರು ಜಂಕ್ಷನ್
- ತಲುಪುವ ಸಮಯ: ಅದೇ ದಿನ 21:00 (ರಾತ್ರಿ 9:00) – ಎಸ್ಎಂವಿಟಿ ಬೆಂಗಳೂರು
- ನಿಲುಗಡೆಗಳು: ಕಬಕಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ ಮತ್ತು ಶ್ರವಣಬೆಳಗೊಳ.
(ಈ ಎರಡೂ ಉದ್ಘಾಟನಾ ವಿಶೇಷ ರೈಲುಗಳು 16 ಬೋಗಿಗಳನ್ನು ಒಳಗೊಂಡಿರುತ್ತವೆ.)
15 ನವೆಂಬರ್ 2026ರಿಂದ ನಿಯಮಿತ ವಂದೇ ಭಾರತ್ ಎಕ್ಸ್’ಪ್ರೆಸ್ ಸೇವೆ
ಉದ್ಘಾಟನಾ ಸಂಚಾರದ ನಂತರ, ಯಶವಂತಪುರ ಮತ್ತು ಮಡಗಾಂವ್ ನಡುವಿನ ನಿಯಮಿತ ವಂದೇ ಭಾರತ್ ಎಕ್ಸ್’ಪ್ರೆಸ್ ಸೇವೆಯು 15 ನವೆಂಬರ್ 2026ರಿಂದ ಎರಡೂ ಕಡೆಯಿಂದ ಪ್ರಾರಂಭವಾಗಲಿದೆ.
ರೈಲು ವಿವರ ಹಾಗೂ ವೇಳಾಪಟ್ಟಿ:
- ರೈಲುಸಂಖ್ಯೆ 26655 (ಯಶವಂತಪುರ –ಮಡಗಾಂವ್):
- ಸಂಚಾರ ದಿನಗಳು: ಬುಧವಾರ ಹೊರತುಪಡಿಸಿ ವಾರದಲ್ಲಿ 6 ದಿನ.
- ವೇಳಾಪಟ್ಟಿ: ಯಶವಂತಪುರ ಜಂಕ್ಷನ್ನಿಂದ ಬೆಳಿಗ್ಗೆ 07:35ಕ್ಕೆ ಹೊರಟು, ಅದೇ ದಿನ ರಾತ್ರಿ 20:55ಕ್ಕೆ (8:55) ಮಡಗಾಂವ್ ತಲುಪಲಿದೆ.
- ಮಾರ್ಗಮಧ್ಯದನಿಲುಗಡೆಗಳು &ಸಮಯ (ಆಗಮನ/ನಿರ್ಗಮನ):
- ಶ್ರವಣಬೆಳಗೊಳ: 09:03 / 09:05
- ಹಾಸನ: 09:38 / 09:40
- ಸಕಲೇಶಪುರ: 10:20 / 10:22
- ಸುಬ್ರಹ್ಮಣ್ಯ ರೋಡ್: 12:40 / 12:42
- ಕಬಕಪುತ್ತೂರು: 13:25 / 13:27
- ಮಂಗಳೂರು ಜಂಕ್ಷನ್: 15:05 / 15:15
- ಉಡುಪಿ: 16:20 / 16:22
- ಕುಂದಾಪುರ: 16:38 / 16:40
- ಮೂಕಾಂಬಿಕಾ ರೋಡ್ ಬೈಂದೂರು: 17:20 / 17:22
- ಮುರ್ಡೇಶ್ವರ: 18:00 / 18:02
- ಗೋಕರ್ಣ ರೋಡ್: 19:00 / 19:02
- ಕಾರವಾರ: 19:45 / 19:47
- ರೈಲುಸಂಖ್ಯೆ 26656 (ಮಡಗಾಂವ್ –ಯಶವಂತಪುರ):
- ಸಂಚಾರ ದಿನಗಳು: ಗುರುವಾರ ಹೊರತುಪಡಿಸಿ ವಾರದಲ್ಲಿ 6 ದಿನ.
- ವೇಳಾಪಟ್ಟಿ: ಮಡಗಾಂವ್ನಿಂದ ಬೆಳಿಗ್ಗೆ 08:20ಕ್ಕೆ ಹೊರಟು, ಅದೇ ದಿನ ರಾತ್ರಿ 21:15ಕ್ಕೆ (9:15) ಯಶವಂತಪುರ ಜಂಕ್ಷನ್ ತಲುಪಲಿದೆ.
- ಮಾರ್ಗಮಧ್ಯದನಿಲುಗಡೆಗಳು &ಸಮಯ (ಆಗಮನ/ನಿರ್ಗಮನ):
- ಕಾರವಾರ: 09:03 / 09:05
- ಗೋಕರ್ಣ ರೋಡ್: 09:48 / 09:50
- ಮುರ್ಡೇಶ್ವರ: 11:00 / 11:02
- ಮೂಕಾಂಬಿಕಾ ರೋಡ್ ಬೈಂದೂರು: 11:20 / 11:22
- ಕುಂದಾಪುರ: 11:48 / 11:50
- ಉಡುಪಿ: 12:18 / 12:20
- ಮಂಗಳೂರು ಜಂಕ್ಷನ್: 13:50 / 14:00
- ಕಬಕಪುತ್ತೂರು: 14:43 / 14:45
- ಸುಬ್ರಹ್ಮಣ್ಯ ರೋಡ್: 15:28 / 15:30
- ಸಕಲೇಶಪುರ: 17:30 / 17:32
- ಹಾಸನ: 18:13 / 18:15
- ಶ್ರವಣಬೆಳಗೊಳ: 18:43 / 18:45
ರೈಲಿನ ವೈಶಿಷ್ಟ್ಯಗಳು ಮತ್ತು ಪ್ರಯಾಣಿಕರಿಗೆ ಆಗುವ ಅನುಕೂಲಗಳು
- ಬೋಗಿಗಳ ವಿವರ: 16 ಬೋಗಿಗಳನ್ನು ಹೊಂದಿರುವ ಈ ವಂದೇ ಭಾರತ್ ಎಕ್ಸ್’ಪ್ರೆಸ್ನಲ್ಲಿ ಎಕ್ಸಿಕ್ಯೂಟಿವ್ ಚೇರ್ ಕಾರ್ ಮತ್ತು ಚೇರ್ ಕಾರ್ ಬೋಗಿಗಳಿದ್ದು, ಆಧುನಿಕ ಹಾಗೂ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡಲಿದೆ.
- ಸುಧಾರಿತ ಸಂಪರ್ಕ: ಬೆಂಗಳೂರು, ಕರ್ನಾಟಕದ ಕರಾವಳಿ ಜಿಲ್ಲೆಗಳು ಮತ್ತು ಗೋವಾ ನಡುವಿನ ಸಂಪರ್ಕವು ಗಣನೀಯವಾಗಿ ಸುಧಾರಿಸಲಿದ್ದು, ಪ್ರವಾಸಿಗರು, ವ್ಯಾಪಾರಿಗಳು, ಯಾತ್ರಾರ್ಥಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
- ಪ್ರವಾಸಿ ತಾಣಗಳಿಗೆ ಸುಲಭ ತಲುಪುವಿಕೆ: ಉಡುಪಿ, ಕೊಲ್ಲೂರು (ಮೂಕಾಂಬಿಕಾ), ಮುರ್ಡೇಶ್ವರ, ಗೋಕರ್ಣ, ಕಾರವಾರ ಮತ್ತು ಮಡಗಾಂವ್ನಂತಹ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ತಾಣಗಳಿಗೆ ಸುಲಭ ಸಂಪರ್ಕ ದೊರೆಯಲಿದೆ.
ಈ ನೂತನ ಸೇವೆ ಆರಂಭವಾಗುವುದರೊಂದಿಗೆ, ಪ್ರಸ್ತುತ ಸಂಚರಿಸುತ್ತಿರುವ ರೈಲು ಸಂಖ್ಯೆ 20645/20646 ಮಡಗಾಂವ್–ಮಂಗಳೂರು ಸೆಂಟ್ರಲ್–ಮಡಗಾಂವ್ ವಂದೇ ಭಾರತ್ ಎಕ್ಸ್’ಪ್ರೆಸ್ ಸೇವೆಯನ್ನು 15 ನವೆಂಬರ್ 2026ರಿಂದ ಎರಡೂ ದಿಕ್ಕುಗಳಲ್ಲಿ ರದ್ದುಗೊಳಿಸಲಾಗುವುದು ಎಂದು ನೈರುತ್ಯ ರೈಲ್ವೆ, ಹುಬ್ಬಳ್ಳಿ. ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ,ಡಾ. ಮಂಜುನಾಥ ಕನಮಡಿ ಮಾಹಿತಿ ನೀಡಿದ್ದಾರೆ.


Be the first to comment on "ಯಶವಂತಪುರ – ಮಡಗಾಂವ್ ನೂತನ ವಂದೇ ಭಾರತ್ ರೈಲು ಸೇವೆ ಪ್ರಾರಂಭ: ಎಲ್ಲೆಲ್ಲಿ ನಿಲುಗಡೆ? ಇಲ್ಲಿದೆ ಪೂರ್ಣ ಮಾಹಿತಿ"