ಕುಡಿಯುವ ನೀರು ಸರಬರಾಜು ಯೋಜನೆಯನ್ವಯ ಪೈಪ್ ಲೈನ್ ಗಾಗಿ ಅಗೆದು ಮುಚ್ಚದೇ ಇರುವ ಕಾರಣ ಓಡಾಟಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರೇ ಶ್ರಮದಾನದ ಮೂಲಕ ಕಲ್ಲು ಮಣ್ಣು ಹಾಕಿ ಮುಚ್ಚಿದ್ದಾರೆ.
ಜಾಹೀರಾತು
ಬಿ.ಸಿ.ರೋಡ್ ಬಸ್ ನಿಲ್ದಾಣದ ಹಿಂಬದಿ ರಸ್ತೆಯಲ್ಲಿ ಈ ಸಮಸ್ಯೆ ಎದುರಾಗಿದ್ದು, ಸ್ಥಳೀಯರು ಓಡಾಡಲು ತೊಂದರೆಪಡುತ್ತಿದ್ದರು. ಈ ಹಿನ್ನೆಲೆಯಲ್ಲಿ ನಿವಾಸಿಗಳಾದ ಸಂಜಯ ಮಲ್ಯ, ಎಂ.ಸುಬ್ರಹ್ಮಣ್ಯ ಪೈ, ಇ.ಧನುಕರ ರೈ, ಶಿವಾನಂದದ ಶೆಣೈ, ಮಹಮ್ಮದ್ ಶ್ರಮದಾನದ ಮೂಲಕ ಈ ಕಾರ್ಯ ನೆರವೇರಿಸಿದರು. ಬಿ.ಸಿ.ರೋಡಿನ ಹೃದಯ ಭಾಗದಲ್ಲಿದ್ದರೂ ಡಾಂಬರು ಕಾಣ ಈ ರಸ್ತೆ ಆರು ವರ್ಷಗಳಿಂದ ಹದಗೆಟ್ಟ ಸ್ಥಿತಿಯಲ್ಲೇ ಇದೆ. ಇದೀಗ ಪೈಪ್ ಲೈನ್ ಕಾಮಗಾರಿ ಸಮಸ್ಯೆಯಿಂದ ಮತ್ತಷ್ಟು ತೊಂದರೆ ಅನುಭವಿಸುವಂತಾಗಿದ್ದು, ತಾತ್ಕಾಲಿಕವಾಗಿ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಲು ಈ ಕ್ರಮ ಕೈಗೊಂಡಿದ್ದೇವೆ ಎಂದು ಅವರು ತಿಳಿಸಿದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಹದಗೆಟ್ಟ ರಸ್ತೆಯನ್ನು ಶ್ರಮದಾನ ಮೂಲಕ ದುರಸ್ತಿಗೊಳಿಸಿದ ಸಾರ್ವಜನಿಕರು"