ಬಂಟ್ವಾಳ ನಗರ ಪೊಲೀಸ್ ಠಾಣೆ ಮತ್ತು ಎಎಸ್ಪಿ ಕಚೇರಿಯ ಪಕ್ಕದ ಕಟ್ಟಡದಲ್ಲೇ ಕಳ್ಳರು ಗುರುವಾರ ರಾತ್ರಿ ಕೈಚಳಕ ತೋರಿದ್ದಾರೆ. ಠಾಣೆಯ ಪಕ್ಕದಲ್ಲೇ ಇರುವ ಸೆಲೂನ್ ಒಂದರಿಂದ ಗುರುವಾರ ರಾತ್ರಿ ನಗದನ್ನು ಕದ್ದೊಯ್ಯಲಾಗಿದೆ.
ಅದರ ಮಾಲೀಕರು ಶುಕ್ರವಾರ ಬೆಳಗ್ಗೆ ಬಂದು ನೋಡಿದಾಗ ಬಾಗಿಲು ಮುರಿದು, ಕ್ಯಾಶ್ ಡ್ರಾವರ್ ಒಳಗಿದ್ದ 18 ಸಾವಿರ ರೂ ನಗದನ್ನು ಕದ್ದೊಯ್ದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಸಮೀಪದಿಂದಲೇ ಬೈಕು ಕಳವಿಗೆ ಯತ್ನ ನಡೆಸಿದ ಪ್ರಕರಣವೂ ಕೆಲ ದಿನಗಳ ಹಿಂದೆ ನಡೆದಿತ್ತು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಬಂಟ್ವಾಳ ನಗರ ಠಾಣೆ ಪಕ್ಕದಲ್ಲೇ ಕಳ್ಳರ ಕೈಚಳಕ"