ಕಳೆದ ವಾರ ಇವರ ತಲೆಯ ಸರ್ಜರಿ, ನಿನ್ನೆ ಹೆಂಡತಿಯನ್ನು ಕಳೆದುಕೊಂಡ ದುಃಖ. ಆದರೂ ದಾಮೋದರ್ ನಾಯಕ್ ಕಲ್ಯಾಣ್ ಪುರ್ ಓಟು ಮಾಡುವುದನ್ನು ಮರೆಯಲಿಲ್ಲ.
ಅವರಿಗೀಗ ೯೦ ವರ್ಷ. ಕಳೆದ ವಾರ ತಲೆಯಲ್ಲಿ ಆಪರೇಷನ್ ಮಾಡಿಸಿದ್ದಾರೆ. ಯಶಸ್ವಿ ಆಪರೇಷನ್ ನ ನಂತರ ಮನೆಗೆ ಬಂದ ಎರಡು ದಿನದಲ್ಲೇ ಅವರ ಜೊತೆಗೆ ಕುಟುಂಬದವರಿಗೆಲ್ಲ ಆಘಾತಕಾರಿ ಸುದ್ದಿ. ಅದೇನೆಂದರೆ ದಾಮೋದರ ನಾಯಕ್ ಪತ್ನಿ ಶಾಂತಿ ನಾಯಕ್ (79) ಸಾವನ್ನಪ್ಪಿದ್ದಾರೆ. ಆದರೆ ಆ ನೋವನ್ನೆಲ್ಲ ನುಂಗಿಕೊಂಡು, ಮತದಾನ ನಮ್ಮ ಹಕ್ಕು ಎಂದು ಚಲಾಯಿಸಲು ಮಂಗಳೂರಿನ ಮತಗಟ್ಟೆಗೆ ಬಂದು ಮತ ಚಲಾಯಿಸಿದವರು ನಾಯಕ್. ಗಾಂಧಿನಗರ ಬೂತ್ (ಮಣ್ಣಗುಡ್ಡೆ)ಯಲ್ಲಿ ಅವರು ಓಟು ಹಾಕಿ ಮನೆಯಲ್ಲೇ ಕುಳಿತುಕೊಂಡು ಟೀಕೆ ಮಾಡುತ್ತಾ ಓಟು ಹಾಕದವರು ತಲೆತಗ್ಗಿಸುವಂತೆ ಮಾಡಿದ್ದಾರೆ.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
Be the first to comment on "ಕಳೆದ ವಾರ ಸರ್ಜರಿ, ಪತ್ನಿ ವಿಯೋಗದ ದುಃಖದಲ್ಲೂ ಮತ ಚಲಾಯಿಸಿದ 90ರ ದಾಮೋದರ್ ನಾಯಕ್"