
ಬಂಟ್ವಾಳ: ರಂಗನಿರ್ದೇಶಕ, ನಟ,ಸಾಹಿತಿ ಎಚ್ಕೆ ನಯನಾಡು ಅವರಿಗೆ ಕುಡ್ಲ ಕುಲಾಲೆರ್ ಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ “ಸಮಾಜ ರತ್ನ” ಬಿರುದು ನೀಡಿ ಗೌರವಿಸಲಾಯಿತು.
ಟ್ರಸ್ಟ್ ಅಧ್ಯಕ್ಷ ಸದಾಶಿವ ಬಂಗೇರ ಅವರ ನೇತೃತ್ವದಲ್ಲಿ ಎಚ್ಕೆ ನಯನಾಡು ಅವರ ಮನೆ ಬಂಟ್ವಾಳದ ಪಣೆಕಲೆ ಪಡ್ಲುವಿನಲ್ಲಿರುವ ಅಮೂಲ್ಯದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಗೌರವಾಭಿನಂದನೆ ಸಲ್ಲಿಸಲಾಯಿತು.

ನಾಟಕಕಾರರಾಗಿ, ಕಲಾವಿದರಾಗಿ, ರಂಗ ನಿರ್ದೇಶಕರಾಗಿ, ಕಂಚಿನ ಕಂಠದ ನಿರೂಪಕಾರಾಗಿ, ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿರುವ ಎಚ್ಕೆ ನಯನಾಡು ಅವರು ಇತ್ತೀಚೆಗೆ ನಡೆದ ಮಂಗಳೂರು ದಸರಾದ ಶೋಭಾಯಾತ್ರೆಯಲ್ಲಿ ಕುಡ್ಲ ಕುಲಾಲೆರ್ ಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರಾಯೋಜಿಸಲ್ಪಟ್ಟು ಸಾರ್ವಜನಿಕರ ಗಮನ ಸೆಳೆದ ಭಕ್ತ ಕುಂಬಾರ ದೃಶ್ಯ ರೂಪಕವನ್ನು ನಿರ್ದೇಶಿಸಿ ಹಿನ್ನಲೆ ಧ್ವನಿಯನ್ನು ನೀಡಿದ್ದರು. ಈ ದೃಶ್ಯ ರೂಪಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದುದಲ್ಲದೆ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿ ಸಾಕಷ್ಟು ಸುದ್ದಿ ಮಾಡಿತ್ತು. ವಿವಿಧ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಬಹುಮುಖ ಪ್ರತಿಭೆ ಎಚ್ಕೆ ನಯನಾಡುವ ಅವರ ಈ ಎಲ್ಲಾ ಸಾಧನೆಯನ್ನು ಪರಿಗಣಿಸಿ ಈ ಗೌರವಾಭಿನಂದನೆ ಸಲ್ಲಿಸಲಾಗಿದೆ ಇದೇ ವೇಳೆ ಟ್ಯಾಬ್ಲೋದಲ್ಲಿ ಅಭಿನಯಿಸಿದ ಕಲಾವಿದರಿಗೆ ಪ್ರಮಾಣಪತ್ರ ನೀಡಲಾಯಿತು.

ಈ ಸಂದರ್ಭ ಟ್ರಸ್ಟ್ ಅಧ್ಯಕ್ಷ ಸದಾಶಿವ ಬಂಗೇರ, ಬಿ.ಸಿ.ರೋಡಿನ ರಕ್ತೇಶ್ವರೀ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಬಿ. ಮೋಹನ್, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಮೇಶ್ ಸಾಲ್ಯಾನ್, ಪುತ್ತೂರು ಕುಂಭಾರರ ಗುಡಿ ಕೈಗಾರಿಕೆ ಸಹಕಾರಿ ಸಂಘದ ಅಧ್ಯಕ್ಷ, ಟ್ರಸ್ಟಿ ಭಾಸ್ಕರ ಎಂ. ಪೆರುವಾಯಿ, ಕುಲಾಲ ಕುಂಬಾರರ ಯುವ ವೇದಿಕೆಯ ವಿಭಾಗಿಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ಮಳಲಿ ಕುಂಬಾರ ಗುಡಿಕೈಗಾರಿಕೆ ಸಹಕಾರಿ ಸಂಘದ ಅಧ್ಯಕ್ಷ, ಟ್ರಸ್ಟಿ ಸುಂದರ ಬಂಗೇರ, ಟ್ರಸ್ಟ್ ನ ಕಾರ್ಯದರ್ಶಿ ಶೇಷಪ್ಪ ಟಿ. ಮೂಲ್ಯ, ಟ್ರಸ್ಟಿಗಳಾದ ದೇವಪ್ಪ ಕುಲಾಲ್ ಪಂಜಿಕಲ್ಲು, ಸೋಮಯ್ಯ ಹನೈನಡೆ, ಚಂದ್ರಹಾಸ ಪಲ್ಲಿಪ್ಪಾಡಿ, ಭಾಸ್ಕರ ಅಜೆಕಲ, ಆರ್. ಕೆ. ಪೃಥ್ವಿರಾಜ್ ಎಡಪದವು ಕುಲಾಲ ಸಮುದಾಯದ ಪ್ರಮುಖರಾದ ನಾರಾಯಣ ಸಿ.ಪೆರ್ನೆ, ನಾಗೇಶ್ ಬಾಳೆಹಿತ್ಲು, ಸೋಮನಾಥ ಕುಲಾಲ್, ಮಾಧವ ಕುಲಾಲ್ ಬಿ.ಸಿ.ರೋಡು, ಭಾಸ್ಕರ್ ಕೊಳ್ನಾಡು, ಮನೋಹರ ನೇರಂಬೋಳು, ಸದಾನಂದ ಬಿ. ಬಂಗೇರ, ಜಯಗಣೇಶ್ ಬಂಗೇರ, ರಾಜೇಶ್ ಭಂಡಾರಿಬೆಟ್ಟು, ಗಣೇಶ್ ಕಾರಂಬಡೆ, ಸತೀಶ್ ಕುಮಾರ್ ಉಪಸ್ಥಿತರಿದ್ದರು.



Be the first to comment on "ರಂಗ ನಿರ್ದೇಶಕ ಎಚ್ಕೆ ನಯನಾಡು ಅವರಿಗೆ ಸಮಾಜ ರತ್ನ ಪ್ರಶಸ್ತಿ ಪ್ರದಾನ, ಗೌರವಾರ್ಪಣೆ"