ಬಂಟ್ವಾಳದ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್ ನಲ್ಲಿ ವಿಶ್ವ ಪರಿಸರ ದಿನವನ್ನು ಪ್ರಹಸನ, ಮಾಹಿತಿ, ಹಾಡುಗಳಲ್ಲಿ ಮಾಹಿತಿ ನೀಡುವ ಮೂಲಕ ಆಚರಿಸಲಾಯಿತು.
ಜಾಹೀರಾತು
ಶಾಲೆಯ ಪ್ರಾಂಶುಪಾಲರಾದ ರಮಾಶಂಕರ್ ಸಿ ಅವರು ಮಾತನಾಡಿ, ಪ್ಲಾಸ್ಟಿಕ್ನ ಅತಿಯಾದ ಬಳಕೆಯಿಂದ ಆಗುತ್ತಿರುವ ಅಪಾಯಕಾರಿ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದರು. 9ನೇ ಹಾಗೂ 5ನೇ ತರಗತಿಯ ಮಕ್ಕಳು ಕಾರ್ಯಕ್ರಮ ನಡೆಸಿಕೊಟ್ಟರು.
ನಮ್ಮ ದೈನಂದಿನ ಜೀವನ ಪರಿಸರವನ್ನೇ ಅವಲಂಬಿತವಾಗಿದೆ ಹಾಗೂ ಪ್ಲಾಸ್ಟಿಕ್ ಪರಿಸರಕ್ಕೆ ಮಾರಕ ಎಂಬುದನ್ನು ಕಿರುನಾಟಕಗಳ ಮೂಲಕ ತಿಳಿಯಪಡಿಸಿದರು. ಅದರೊಂದಿಗೆ ಪರಿಸರಕ್ಕೆ ಸಂಬಂಧಿಸಿದ ರಸಪ್ರಶ್ನೆಗಳು, ವಿಸ್ಮಯಕಾರಿ ಸಂಗತಿಗಳು, ಗೀತೆಗಳು ಮುಂತಾದವುಗಳನ್ನು ನಡೆಸಿಕೊಡುವ ಮೂಲಕ ಪರಿಸರದ ಬಗೆಗಿನ ಕಾಳಜಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ನೀಡಿದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಪ್ರಹಸನದ ಮೂಲಕ ಪರಿಸರ ಮಾಹಿತಿ"