ಅರಣ್ಯ ಇಲಾಖೆ ಬಂಟ್ವಾಳ, ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ವಕೀಲ ರ ಸಂಘ ಬಂಟ್ವಾಳ, ಕಂದಾಯ ಇಲಾಖೆ ಬಂಟ್ವಾಳ ಹಾಗೂ ಪುರಸಭೆ ಬಂಟ್ವಾಳ ಇವರ ಸಂಯುಕ್ತ ಆಶ್ರಯ ದಲ್ಲಿ ವಿಶ್ವ ಪರಿಸರ ದಿನವನ್ನು ಕೋರ್ಟ್ ಆವರಣದಲ್ಲಿ ಮತ್ತು ಮಿನಿವಿಧಾನ ಸೌಧದ ಎದುರಿನಲ್ಲಿ ಗಿಡ ನೆಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭ ಸೀನಿಯರ್ ಸಿವಿಲ್ ಜಡ್ಜ್ ನ್ಯಾಯಾಲಯದ ನ್ಯಾಯದೀಶ ಮಹಮ್ಮದ್ ಇಮ್ತಿಯಾಜ್ ಮಹಮ್ಮದ್, ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್. ಸಿ. ನ್ಯಾಯಾಲಯ ದ ನ್ಯಾಯದೀಶೆ ಪ್ರತಿಭಾ ಡಿ.ಎಸ್, ತಹಶೀಲ್ದಾರ್ ವೈ. ರವಿ, ಬಂಟ್ವಾಳ ವಕೀಲರ ಸಂಘ ದ ಅಧ್ಯಕ್ಷ ದೀಪಕ್ ಕುಮಾರ್ ಜೈನ್, ಮಾಜಿ ಅಧ್ಯಕ್ಷ ಬಿ.ವೆಂಕಟರಮಣ ಶೆಣ್ಯೆ, ಹಾಗೂ ವಕೀಲ ರ ಸಂಘದ ಪಧಾದಿಕಾರಿಗಳು, ಬಂಟ್ವಾಳ ವಲಯ ಅರಣ್ಯಾಧಿಕಾರಿ ಸುರೇಶ್ ಬಿ. ಉಪವಲಯ ಅರಣ್ಯಾಧಿಕಾರಿ ಪ್ರೀತಂ ಎಸ್, ಅರಣ್ಯ ರಕ್ಷಕರಾದ ವಿನಯಕುಮಾರ್, ಶಿವಲಿಂಗ ಸ್ವಾಮಿ, ಸಿಬ್ಬಂದಿ ಗಳಾದ ಭಾಸ್ಕರ್ ಡಿ. ಜಯರಾಮ, ಸ್ನೇಕ್ ಕಿರಣ್ ಪಿಂಟೊ, ನಗರ ಠಾಣಾ ಎಸ್. ಐ. ಚಂದ್ರಶೇಖರ್, ಪುರಸಭಾ ಅಧಿಕಾರಿ ರತ್ನ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಬಂಟ್ವಾಳ ನ್ಯಾಯಾಲಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ"