ಇತಿಹಾಸ ಮರೆತರೆ ಬದುಕಲು ಪರದಾಟ: ನಂಜುಂಡೇಗೌಡ

ನಾವು ಇತಿಹಾಸವನ್ನು ಮರೆತರೆ ಉಣ್ಣಲು ಅನ್ನವಿಲ್ಲದೆ ಪರದಾಡಬೇಕಾದೀತು. ಅಂತರ್ಜಲ ಕಡಿಮೆಯಾಗುತ್ತಿರುವ ಈ ಸನ್ನಿವೇಶದಲ್ಲಿ ನಾವು ಇತಿಹಾಸವನ್ನು ನೋಡುವ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ ಹೇಳಿದರು.

ಬಂಟ್ವಾಳ ಬಿ.ಸಿ.ರೋಡಿನ ಸಂಚಯಗಿರಿಯಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತುಸಂಗ್ರಹಾಲಯ ಕೇಂದ್ರದಲ್ಲಿ ನಡೆದ  ಮೌಖಿಕ ಕಥನ ಮತ್ತು ಭೌತಿಕ ವಸ್ತುಗಳು, ಸಾಮಾಜಿಕ ಚರಿತ್ರೆಯ ಪುನರ್ ರಚನೆ ಎಂಬ ವಿಷಯದ ಕುರಿತು ನಡೆದ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರಸಂಕಿರಣ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಜಾಹೀರಾತು

ಮುಂದಿನ ಪೀಳಿಗೆಗೆ ಪೂರ್ವಿಕರ ಆಲೋಚನೆ ಏನಿತ್ತು ಎಂಬುದು ಗೊತ್ತಿರಬೇಕು. ಇಂದು ಕೃಷಿಯನ್ನು ನಂಬಿದವನು ಯಾವುದೇ ಕಾರಣಕ್ಕೂ ಬದುಕಲು ಅಸಾಧ್ಯ ಎಂಬ ಸ್ಥಿತಿ ಇದೆ. ಕೃಷಿಯಲ್ಲಿ ಸಂಪಾದನೆ, ಸರಿಯಾದ ಬೆಲೆ ಇಲ್ಲದಿದರೆ ಕಾರ್ಮಿಕರು ಸಹಜವಾಗಿಯೇ ಬೇರೆ ದಾರಿ ಕಂಡುಕೊಳ್ಳುತ್ತಾನೆ. ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಡೀ ಕೃಷಿಯೇ ನಾಶವಾಗುವ ಸ್ಥಿತಿ ಹಾಗೂ ಅಂತರ್ಜಲ ಸಹಿತ ನೀರಿನ ಸೆಲೆಗಳೇ ನಾಶವಾಗುವ ಪರಿಸ್ಥಿತಿ. ಮಳೆಯೂ ಬರುತ್ತಿಲ್ಲ. ಇದಕ್ಕೆ ಕಾರಣ ನಾವು ಇತಿಹಾಸವನ್ನು ಮರೆತಿರುವುದು ಎಂದು ನಂಜುಂಡೇಗೌಡ ಹೇಳಿದರು.

ಉದ್ಯಮಿ ಸಿ.ಎ.ನಂದಗೋಪಾಲ ಶೆಣೈ ಮಾತನಾಡಿ, ಹಳೆಯ ವಸ್ತುಗಳನ್ನು ಇಂದು ಮಾರ್ಕೆಟಿಂಗ್ ದೃಷ್ಟಿಯಿಂದಲೂ ನೋಡಬೇಕಾದ ಅಗತ್ಯವಿದೆ ಎಂದರು.

ನಿವೃತ್ತ ಪ್ರಾಂಶುಪಾಲ ಡಾ.ಪಿ.ಎನ್.ಎನ್.ಮೂರ್ತಿ, ಸೆಂಟರ್ ಫಾರ್ ಪಬ್ಲಿಕ್ ಹಿಸ್ಟರಿಯ ಸ್ಥಾಪಕ ನಿರ್ದೇಶಕಿ ಡಾ.ಇಂದಿರಾ ಚೌಧುರಿ, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಕೇಂದ್ರದ ಕಾರ್ಯದರ್ಶಿ ಡಾ.ಆಶಾಲತಾ ಸುವರ್ಣ ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾತನಾಡಿ ತುಳು ಬದುಕಿನ ಜೀವಂತಿಕೆಯನ್ನು ಉಳಿಸುವ ಅಗತ್ಯವನ್ನು ಒತ್ತಿ ಹೇಳಿದರು.

ನಿರೇನ್ ಜೈನ್, ಗೋಪಿ, ಶೋಭಾ ಅನಿಸಿಕೆ ವ್ಯಕ್ತಪಡಿಸಿದರು. ಉಪನ್ಯಾಸಕ ಚೇತನ್ ಮುಂಡಾಜೆ ಸಮಾರಂಭದ ಹಿನ್ನೋಟ ನೀಡಿದರು. ಪ್ರೊ.ತುಕಾರಾಮ ಪೂಜಾರಿ ಸ್ವಾಗತಿಸಿದರು. ಪುರುಷೋತ್ತಮ ಭಂಡಾರಿ ವಂದಿಸಿದರು.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಇತಿಹಾಸ ಮರೆತರೆ ಬದುಕಲು ಪರದಾಟ: ನಂಜುಂಡೇಗೌಡ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*