ಮಳೆ ಬಂದರೆ ತೋಡು, ಉರಿಬಿಸಿಲಿಗೆ ತಲೆತಿರುಗಿ ಬೀಳುವ ಸ್ಥಿತಿ.- ಅಂದೂ ಹಾಗಿತ್ತು, ಇಂದೂ ಬದಲಾಗಿಲ್ಲ | ಬಿ.ಸಿ.ರೋಡಿನಲ್ಲಿ ಪ್ರಯಾಣಿಕರಿಗೆ ನಿಲ್ಲಲು ಜಾಗವೇ ಇಲ್ಲ

1980ರಿಂದ 2000ರ ಅವಧಿಯಲ್ಲಿ ಬಿ.ಸಿ.ರೋಡಿನಿಂದ ಮಂಗಳೂರಿಗೆ ಶಾಲೆ, ಕಾಲೇಜು ಹಾಗೂ ಕಚೇರಿಗಳಿಗೆ ತೆರಳುವವರಿಗೆ ಬೆಳಗಿನ 7:30ರಿಂದ 9:00ರ ಅವಧಿಯಲ್ಲಿ ಕೇವಲ ಮೂರೇ ಎಕ್ಸ್‌ಪ್ರೆಸ್ ಬಸ್‌ಗಳಿದ್ದವು. ಬಸ್ ಬಂದರೆ ಪ್ರಯಾಣಿಕರು ಓಡಿಕೊಂಡು ಹೋಗಿ ಹತ್ತಬೇಕಿತ್ತು. ಚಾಲಕನ ಮೂಡ್ ನೋಡಿಕೊಂಡು ಬಸ್ ನಿಲ್ಲುತ್ತದೆಯೋ ಇಲ್ಲವೋ ಎಂದು ಗಮನಿಸಬೇಕಾದ ಸ್ಥಿತಿ ಇತ್ತು! ಕೆಲವು ಬಾರಿಯಂತೂ ಮಂಗಳೂರಿಗೆ ತೆರಳುವ ಟ್ಯಾಕ್ಸಿಗಳಲ್ಲಿ ಒತ್ತೊತ್ತಾಗಿ ಕುಳಿತು ಪ್ರಯಾಣಿಸಬೇಕಿತ್ತು.

VNR GOLD

“ನಮ್ಮ ಮಕ್ಕಳ ಕಾಲಕ್ಕಾದರೂ ಈ ಪರಿಸ್ಥಿತಿ ಬದಲಾಗಬಹುದು…” ಎಂದು ಅಂದು ದಿನವೂ ಪ್ರಯಾಣಿಸುತ್ತಿದ್ದವರು ಹಾರೈಸುತ್ತಿದ್ದರು.

ವರ್ಷಗಳು ಉರುಳಿದವು, ಬಸ್ ಸಂಖ್ಯೆಗಳೂ ಹೆಚ್ಚಿದವು. ಇಂದು ಬಿ.ಸಿ.ರೋಡ್‌ನಲ್ಲಿ ಬೆಳಗಿನ ವೇಳೆ ಬಸ್ ಹಿಡಿಯಲು ಹಿಂದಿನಂತೆ ಓಡಬೇಕಿಲ್ಲ ಎನ್ನುವುದೊಂದನ್ನು ಬಿಟ್ಟರೆ, ಪ್ರಯಾಣಿಕರಿಗೆ ನಿಲ್ಲಲು ಇನ್ನೂ ಬಯಲೇ ಗತಿ! ತುಂಬಿದ ಬಸ್ಸಿನೊಳಗೆ ನುಗ್ಗುವುದು ಇಂದಿಗೂ ದೊಡ್ಡ ಸವಾಲು

ಜಾಹೀರಾತು

ತಲೆಎತ್ತಿದ ಕಟ್ಟಡಗಳು, ಕಣ್ಮರೆಯಾದ ಜಾಗ!

ಈ ಅವಧಿಯಲ್ಲಿ ಬಿ.ಸಿ.ರೋಡ್‌ನಲ್ಲಿ ಭವ್ಯ ಕಟ್ಟಡಗಳು ತಲೆಎತ್ತಿದವು.  ತಳ ಅಂತಸ್ತು ಸೇರಿದಂತೆ ಎಲ್ಲೆಡೆ ಸಾಲು ಸಾಲು ಮಳಿಗೆಗಳು ಕಾರ್ಯಾಚರಿಸಲಾರಂಭಿಸಿದವು. ಜನಸಂಖ್ಯೆ ಹೆಚ್ಚಿದಂತೆ ವಾಹನಗಳ ಸಂಖ್ಯೆಯೂ ಹೆಚ್ಚಿದವು, ಫ್ಲೈಓವರ್ ನಿರ್ಮಾಣವಾಯಿತು. ಸರ್ವೀಸ್ ರಸ್ತೆ ಆಯಿತು. ವಾಹನ ನಿಲುಗಡೆಗೆ (ಪಾರ್ಕಿಂಗ್) ಜಾಗವೇ ಇಲ್ಲದಂತಾಯಿತು. ಇದೇ ರೀತಿಯ ತೀವ್ರ ಸಮಸ್ಯೆಯನ್ನು ಇಂದಿಗೂ ಬಸ್ ಪ್ರಯಾಣಿಕರು ಎದುರಿಸುತ್ತಿದ್ದಾರೆ.

ಬಸ್ ಪ್ರಯಾಣಿಕರು ಈಗ ಎಲ್ಲಿ ನಿಲ್ಲುತ್ತಾರೆ?

ಇಡೀ ಬಿ.ಸಿ.ರೋಡ್‌ನಲ್ಲಿ ಪ್ರಯಾಣಿಕರು ಬಸ್‌ಗಾಗಿ ನಿಲ್ಲುವ ಪ್ರಮುಖ ಜಾಗಗಳಿವು:

  1. ಪುರಸಭೆ ಖಾಸಗಿ ಬಸ್ ತಂಗುದಾಣ (ವಾಣಿಜ್ಯ ಸಂಕೀರ್ಣ): ಗ್ರಾಮೀಣ ಪ್ರದೇಶಗಳು, ಮೂಡುಬಿದಿರೆ, ಮುಡಿಪು ಕಡೆಗೆ ತೆರಳುವ ಖಾಸಗಿ ಬಸ್‌ಗಳು ನಿಲ್ಲುತ್ತವೆ. ಪ್ರಯಾಣಿಕರಿಗೆ ತಕ್ಕಮಟ್ಟಿಗೆ ತಲೆ ಮೇಲೆ ಸೂರಿದೆ ಎಂದು ಹೇಳಬಹುದಾದ ಏಕೈಕ ಜಾಗ.
  1. KSRTC ಬಸ್ ನಿಲ್ದಾಣ (2017ರಲ್ಲಿ ಲೋಕಾರ್ಪಣೆ): ಮಂಗಳೂರಿಗೆ ತೆರಳುವ ಕೆಲವು ಪ್ರಯಾಣಿಕರು ಮಾತ್ರ ಇಲ್ಲಿ ನಿಲ್ಲುತ್ತಾರೆ, ನಿಲ್ದಾಣದಲ್ಲಿ ಜನಸಂದಣಿ ಕಮ್ಮಿ. ಕೊಲೆ ಪ್ರಕರಣವೊಂದು ನಡೆದ ಮೇಲಷ್ಟೇ ಜನರಿಗೆ ಇಲ್ಲೊಂದು ಬಸ್ ನಿಲ್ದಾಣವಿದೆ ಎಂದು ಗೊತ್ತಾಗುವಂತಾಯಿತು!
  2. ಪುರಸಭಾ ಸಂಕೀರ್ಣದ ಎದುರಿನ ಎತ್ತರ-ತಗ್ಗಿನ ಜಾಗ: ಧರ್ಮಸ್ಥಳ, ಪುತ್ತೂರು, ವಿಟ್ಲ, ಮೈಸೂರು, ಬೆಂಗಳೂರು, ಚಿಕ್ಕಮಗಳೂರು ಕಡೆಗೆ ತೆರಳುವ ಬಸ್‌ಗಳು ಹೆದ್ದಾರಿಯಲ್ಲೇ ನಿಲ್ಲುತ್ತವೆ. ಬಸ್ ಬರುವುದನ್ನು ನೋಡಲು ಪ್ರಯಾಣಿಕರು ಅತ್ತಿತ್ತ ಅಲೆಯಬೇಕು. ಬಿಸಿಲು, ಮಳೆ, ಚಳಿಗೆ ಪ್ರಯಾಣಿಕರು ಕಂಗಾಲು.
  3. ಮಂಗಳೂರು ಬಸ್ ಕಾಯುವ ಜಾಗ (ಸರ್ವೀಸ್ ರಸ್ತೆ): ಸರ್ವೀಸ್ ರಸ್ತೆಯ ಬದಿಯಲ್ಲಿರುವ ಚರಂಡಿಯಂತಹ ಜಾಗದಲ್ಲಿ ಪ್ರಯಾಣಿಕರು ನಿಲ್ಲಬೇಕು. ಬೆಳಗಿನ ‘ಪೀಕ್ ಅವರ್’ನಲ್ಲಿ ಇಲ್ಲಿ ನಿಂತು ಬಸ್ ಕಾಯುವ ಕಿರಿಕಿರಿ ಅನುಭವಿಸಿದವರಿಗಷ್ಟೇ ಗೊತ್ತು!

ಸ್ವಯಂಸೇವಾ ಸಂಘಟನೆಗಳ ಕೊಡುಗೆ:

ಪ್ರಯಾಣಿಕರ ಬವಣೆ ನೋಡಲಾಗದೆ, ಬಿ.ಸಿ.ರೋಡ್‌ನಿಂದ ಪುತ್ತೂರಿಗೆ ತೆರಳುವ ಕಡೆಗೆ ಲಯನ್ಸ್ ಕ್ಲಬ್ ಹಾಗೂ ಮಂಗಳೂರು ಕಡೆಗೆ ತೆರಳುವ ಪ್ರಯಾಣಿಕರಿಗೆ ಕುಳಿತುಕೊಳ್ಳಲು ರೋಟರಿ ಕ್ಲಬ್ ಬಂಟ್ವಾಳ ಟೌನ್ ಘಟಕ ಸಣ್ಣ ಸೂರು ನಿರ್ಮಿಸಿಕೊಟ್ಟಿದ್ದನ್ನು ಹೊರತುಪಡಿಸಿದರೆ, ಆಡಳಿತದ್ದು ಶೂನ್ಯಕೊಡುಗೆ.

ಪ್ರಯಾಣಿಕರು ಏನಂತಾರೆ?

ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸ್ ಮುಂಭಾಗದ ಇಕ್ಕಟ್ಟಿನ ಜಾಗದಲ್ಲಿರುವ ಜಾಹೀರಾತು ಫಲಕವುಳ್ಳ ತಂಗುದಾಣವನ್ನು ಪ್ರಸ್ತುತ ಮಂಗಳೂರಿಗೆ ಬಸ್ ಕಾಯುವ ಜಾಗಕ್ಕೆ ಸ್ಥಳಾಂತರಿಸಿದರೆ ಆ ಭಾಗಕ್ಕೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ರಸ್ತೆಯ ಎರಡೂ ಕಡೆಗಳಲ್ಲಿ ಜನರು ನಿಲ್ಲಲು ಸುರಕ್ಷಿತವಾದ ತಂಗುದಾಣವೊಂದು ನಿರ್ಮಾಣವಾಗಬೇಕು ಹಾಗೂ ಬಸ್ ಬೇ ರಚನೆಯಾಗಬೇಕು.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಮಳೆ ಬಂದರೆ ತೋಡು, ಉರಿಬಿಸಿಲಿಗೆ ತಲೆತಿರುಗಿ ಬೀಳುವ ಸ್ಥಿತಿ.- ಅಂದೂ ಹಾಗಿತ್ತು, ಇಂದೂ ಬದಲಾಗಿಲ್ಲ | ಬಿ.ಸಿ.ರೋಡಿನಲ್ಲಿ ಪ್ರಯಾಣಿಕರಿಗೆ ನಿಲ್ಲಲು ಜಾಗವೇ ಇಲ್ಲ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*