
ಬಂಟ್ವಾಳ: ಬಂಟ್ವಾಳ ಬಿ.ಸಿರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರಕ್ಕೆ ಬುಧವಾರ ಉಡುಪಿ ಜಿಲ್ಲಾಧಿಕಾರಿ ಟಿ.ಕೆ.ಸ್ವರೂಪ ಭೇಟಿ ನೀಡಿದರು.

ಈ ಸಂದರ್ಭ ಮಾತನಾಡಿದ ಅವರು,ಒಂದು ಪ್ರದೇಶದ ಸಾಂಸ್ಕೃತಿಕ ಕುರುಹುಗಳಾದ ಕೋಟೆ ಕೊತ್ತಲಗಳು, ಶಾಸನಗಳು, ವಸ್ತು ಪರಿಕರಗಳು ದೇಶದ ಬೆಲೆಕಟ್ಟಲಾಗದ ಆಸ್ತಿ. ಇವುಗಳು ನಮ್ಮ ನೆಲದ ಚರಿತ್ರೆಯನ್ನು ರಚಿಸಲು ಸಹಕಾರಿಯಾಗುವುದಲ್ಲದೆ, ನಮ್ಮ ಪೂರ್ವಜರ ಬದುಕು ಬವಣೆಗಳನ್ನು ತಿಳಿಯಲು ಸಹಕಾರಿ ಎಂದು ಹೇಳಿದರು.

ಆಯಾ ದೈವ ದೇವಸ್ಥಾನಗಳ ಸಾಂಸ್ಕೃತಿಕ ಕುರುಹುಗಳು, ಶಾಸನ ಇತ್ಯಾದಿಗಳನ್ನು ಅಲ್ಲಲ್ಲಿಯೆ ಜತನದಿಂದ ಕಾಪಿಡುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟರಲ್ಲದೆ, ಈ ದಿಸೆಯಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ನಿರಂತರತೆ, ಬದ್ಧತೆ ಮತ್ತು ಕೆಲಸಕಾರ್ಯಗಳು ಶ್ಲಾಘನೀಯ ಎಂದರು. ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಹಾಗೂ ಇಂತಹ ಸಂಸ್ಥೆಗಳಿಗೆ ಪ್ರತಿಯೊಬ್ಬರೂ ಬೆಂಬಲಿಸುವ ಅಗತ್ಯವಿದೆ ಎಂದು ನುಡಿದರು.

ಕೇಂದ್ರದ ಸ್ಥಾಪಕಾಧ್ಯಕ್ಷ ಡಾ.ತುಕಾರಾಮ್ ಪೂಜಾರಿ ಅಬ್ಬಕ್ಕ ಕಲಾ ಗ್ಯಾಲರಿ ಹಾಗೂ ಮ್ಯೂಸಿಯಮ್‌ನ ಮಾಹಿತಿ ನೀಡಿದರು.
ಈ ಸಂದರ್ಭ ಕುಂದಾಪುರ ವಿಭಾಗದ ಸಹಾಯಕ ಆಯುಕ್ತರಾದ ಎಸ್ ಆರ್ ರಶ್ಮಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಅರುಣ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾ, ಹಾಗೂ ರಾಣಿ ಅಬ್ಬ್ಕಾಕ್ಕ ತುಳು ಅಧ್ಯಯನ ಕೇಂದ್ರದ ಕಾರ್ಯದರ್ಶಿ ಡಾ. ಆಶಾಲತಾ ಸುವರ್ಣ ಉಪಸ್ಥಿತರಿದ್ದರು.


Be the first to comment on "ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರಕ್ಕೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಭೇಟಿ"