ಪಾಣೆಮಂಗಳೂರಿನ ಸುಮಂಗಲಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿಯಮಿತ 2025-26ರ ಸಾಲಿನಲ್ಲಿ 646.04 ಕೋ.ರೂ. ವ್ಯವಹಾರ ನಡೆಸಿ 2.04 ಕೋ.ರೂ.ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ನಾಗೇಶ್ ಕಲ್ಲಡ್ಕ ಹೇಳಿದರು.

ಸಂಘದ 34 ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. 2026ರ ಮಾರ್ಚ್ ಅಂತ್ಯಕ್ಕೆ 3021ಎ ತರಗತಿ ಸದಸ್ಯರಿದ್ದು, 5.52 ಕೋ.ರೂ.ಪಾಲು ಬಂಡವಾಳ ಹೊಂದಿದೆ. 2026ರ ಮಾರ್ಚ್ ಅಂತ್ಯಕ್ಕೆ 91ಕೋ.ರೂ.ಠೇವಣಾತಿ, 6.48 ಕೋ.ರೂ. ವಿವಿಧ ನಿಧಿಗಳಲ್ಲಿ ಇದ್ದು ಮತ್ತು 87.09 ಕೋ.ರೂ ರೂ.ಸಾಲ ಹೊರ ಬಾಕಿ ಇದೆ. ಕಳೆದ ಸಾಲಿನಲ್ಲಿ 164.26 ಕೋ.ರೂ. ಸಾಲ ವಿತರಿಸಿದ್ದು, 145.49 ಕೋ.ರೂ. ಸಾಲವನ್ನು ವಸೂಲಿ ಮಾಡಲಾಗಿದೆ. ವರದಿ ವರ್ಷದಲ್ಲಿ ಷೇರುದಾರರಿಗೆ ಶೇ.15 ಡಿವಿಡೆಂಡ್ ಘೋಷಿಸಲಾಗಿದೆ ಎಂದರು.

ಸಂಸ್ಥೆಯು ಸಾಧಿಸಿದ ಸರ್ವತೋಮುಖ ಅಭಿವೃದ್ಧಿಗಾಗಿ ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ 2025-26 ನೇ ಸಾಲಿಗೆ ಸಾಧನಾ ಪ್ರಶಸ್ತಿ ಪಡೆದಿರುವುದರೊಂದಿಗೆ ಸತತ 6ನೇ ಬಾರಿಗೆ ಈ ಪ್ರಶಸ್ತಿಯನ್ನು ಪಡೆದಿರುತ್ತದೆ ಎಂದು ಅಧ್ಯಕ್ಷರು ತಿಳಿಸಿದರು.

1993 ರಲ್ಲಿ ಸ್ಥಾಪನೆಗೊಂಡ ಸಹಕಾರ ಸಂಘವು 9 ಶಾಖೆಗಳನ್ನು ಹೊಂದಿದ್ದು, ತುಂಬೆ ಶಾಖೆಗೆ ಸ್ವಂತ ಕಟ್ಟಡ ಖರೀದಿಸಿದ್ದು, ಸಂಘವು ಪ್ರಗತಿಯತ್ತ ಮುಂದುವರಿದಿದೆ ಎಂದು ಅಧ್ಯಕ್ಷರು ಈ ಸಂದರ್ಭದಲ್ಲಿ ತಿಳಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಾಹಕ ವಸಂತ್ ಪಿ. ಅವರು ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರಗಳನ್ನು ಮಂಡಿಸಿದರು. ಲೆಕ್ಕಿಗರಾದ ಸುರೇಂದ್ರ ಅವರು ಕಳೆದ ಮಹಾಸಭೆಯ ನಿರ್ಣಯಗಳನ್ನು ಓದಿ ಹೇಳಿದರು. ಉಪಾಧ್ಯಕ್ಷರಾದ ಸಚಿನ್ ಮೆಲ್ಕಾರ್, ನಿರ್ದೇಶಕರಾದ ನರ್ಸಪ್ಪ ಅಮೀನ್, ಈಶ್ವರ್ ಮೆಲ್ಕಾರ್, ದಿನೇಶ್ ಬಂಗೇರ, ಪೂವಪ್ಪ ಸಪಲ್ಯ ದರಿಬಾಗಿಲು, ಸದಾಶಿವ ಬರಿಮಾರ್, ಪ್ರಕಾಶ್ ಸಪಲ್ಯ ಜಕ್ರಿಬೆಟ್ಟು, ಭುವನೇಶ್ ಮೊಗರ್ನಾಡು, ಶರತ್ ಕುಮಾರ್, ಚೇತನ್ ಸಿ.ಎಸ್, ಪುಷ್ಪಾ ನಾಗೇಶ್, ಪವಿತ್ರ ಪದ್ಮನಾಭ ಹಾಗೂ ಬಂಟ್ವಾಳ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಕೃಷ್ಣಪ್ಪ ಗಾಣಿಗ ಉಪಸ್ಥಿತರಿದ್ದರು.
ಸೇವಾ ನಿವೃತ್ತಿಗೊಳ್ಳಲಿರುವ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರನ್ನು ಆಡಳಿತ ಮಂಡಳಿ ಪರವಾಗಿ ಸನ್ಮಾನಿಸಲಾಯಿತು. ನಿರ್ದೇಶಕರಾದ ಬಾಲಕೃಷ್ಣ ಸೆರ್ಕಳ ವಂದಿಸಿದರು.


Be the first to comment on "ಸುಮಂಗಲಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪಾಣೆಮಂಗಳೂರು; 2.04 ಕೋ.ರೂ.ಲಾಭ"