ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ: ಬ್ಯಾಂಡ್ ಸೆಟ್ ಹಸ್ತಾಂತರ

ಬಂಟ್ವಾಳ: ಬಿ.ಸಿ.ರೋಡಿನ  ಅಜ್ಜಿಬೆಟ್ಟುವಿನಲ್ಲಿರುವ ಬಿ.ಮೂಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ರವಿಚಂದ್ರ ಬಂಟ್ವಾಳ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ನೆನಪು ಮಾಡಿಕೊಂಡು, ಭವಿಷ್ಯದಲ್ಲಿ ಸತ್ಪ್ರಜೆಗಳಾಗಿ ಜೀವಿಸಬೇಕು ಎಂದು ಕರೆ ನೀಡಿದರು.

ಇದೇ  ವೇಳೆ ಶಾಲೆಗೆ ಪದ್ಮಿನಿ ದೇವಣ್ಣ ಬಲ್ಲಾಳ್ ಬಾಗ್, ಜಯಂತಿ ಗಂಗಾಧರ್, ಪ್ರೇಮಾ ಜನಾರ್ದನ್, ಕುಸುಮಾ ಕೈಕುಂಜೆ, ನಮಿತಾ ಉಮೇಶ್ ಮತ್ತು ಸೃಜನ್ ಬಿ.ಎಲ್. ಅವರು ನೀಡಿದ ಬ್ಯಾಂಡ್ ಸೆಟ್ ಅನ್ನು ಹಸ್ತಾಂತರಿಸಲಾಯಿತು.

VNR GOLD

ಎಸ್.ಡಿ.ಎಂ.ಸಿ. ಅಧ್ಯಕ್ಷೆ ವಿನೋದಾ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.

ಜಾಹೀರಾತು

ರೋಟರಿ ಕ್ಲಬ್ ಬಂಟ್ವಾಳ ಕಾರ್ಯದರ್ಶಿ ರವಿರಾಜ ಶೆಟ್ಟಿ, ಸ್ನೇಹಾಂಜಲಿ ಸೇವಾ ಸಂಘ ಅಧ್ಯಕ್ಷ ಜಯಂತ್ ಅಗ್ರಬೈಲ್, ಕಾರ್ಯದರ್ಶಿ ಆಶಿಶ್ ಅಜ್ಜಿಬೆಟ್ಟು, ಪದಾಧಿಕಾರಿಗಳಾದ ಲೋಹಿತ್ ಅಜ್ಜಿಬೆಟ್ಟು, ಪ್ರಶಾಂತ್  ಅಜ್ಜಿಬೆಟ್ಟು, ಗಣೇಶ್ , ಎಸ್.ಡಿ.ಎಂ.ಸಿ. ಪೂರ್ವಾಧ್ಯಕ್ಷ ಹರೀಶ್ ಮಾಂಬಾಡಿ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಶಶಿಧರ್, ಸದಸ್ಯರಾದ ಶಿವಮೂರ್ತಿ, ಜಯಂತಿ, ಕವಿತಾ, ಸಾವಿತ್ರಿ, ಶಾಲಾ ನಾಯಕಿ ಸಂಜನಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಹರ್ಷಿಣಿ, ಸಮರ್ಥ್, ಯಶವಂತ್, ತೃಪ್ತಿ ಸ್ವಾತಂತ್ರ್ಯ ದಿನಾಚರಣೆ ಭಾಷಣ ಮಾಡಿದರು.

ಕಂಪ್ಯೂಟರ್ ಶಿಕ್ಷಕ ಶಿವಮೂರ್ತಿ ಮಾರ್ಗದರ್ಶನದಲ್ಲಿ ಶಾಲೆಯ ಲೇಝಿಮ್ ತಂಡದ ವತಿಯಿಂದ ದೇಶಭಕ್ತಿ ನೃತ್ಯ ಪ್ರದರ್ಶನಗೊಂಡಿತು. ಸಹಶಿಕ್ಷಕಿ ಐರಿನ್, ಗೌರವ ಶಿಕ್ಷಕಿಯರಾದ ನಿಶ್ಮಿತಾ, ಪೂರ್ಣಿಮಾ, ಲಾವಣ್ಯ ಮತ್ತು ದಿವ್ಯಾ ಸಹಕರಿಸಿದರು. ಗುರುದತ್ತ ಹೆಗ್ಡೆ ಪ್ರಾಯೋಜಕತ್ವದಲ್ಲಿ ಉಪಾಹಾರ ವ್ಯವಸ್ಥೆ, ಸ್ನೇಹಾಂಜಲಿ ಸೇವಾ ಸಂಘದ ವತಿಯಿಂದ ಸಿಹಿತಿಂಡಿ ಒದಗಿಸಲಾಯಿತು.

OPTIC WORLD

ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ ಕೆ. ಸ್ವಾಗತಿಸಿದರು. ಸಹಶಿಕ್ಷಕಿ ತಾಹಿರಾ ವಂದಿಸಿದರು. ನಶಾಮುಕ್ತ ಭಾರತ ಪ್ರತಿಜ್ಞೆ ಸಹಶಿಕ್ಷಕಿ ವಿಮಲಾ ಬೋಧಿಸಿದರು.  ಸಹಶಿಕ್ಷಕಿ ಸುಶೀಲಾ ಲಿಂಗಪ್ಪ ಕಾರ್ಯಕ್ರಮ ನಿರ್ವಹಿಸಿದರು.

ಉಮೇಶ್ ಬೊಳಂತೂರು
ಲಾದ್ರು ಮಿನೇಜಸ್
ಎ.ಬಿ.ಅಬ್ದುಲ್ಲಾ ಕೊಳ್ನಾಡು

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ: ಬ್ಯಾಂಡ್ ಸೆಟ್ ಹಸ್ತಾಂತರ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*