
ಬಂಟ್ವಾಳ ತಾಲೂಕು ಟೂರಿಸ್ಟ್ ಕಾರು ಚಾಲಕ ಮತ್ತು ಮಾಲೀಕರ ಸಂಘದ ವಾರ್ಷಿಕ ಮಹಾಸಭೆ ಮಂಗಳವಾರ ಬಿ.ಸಿ.ರೋಡ್ ನ ಪ್ರೀತಿ ಕಾಂಪ್ಲೆಕ್ಸ್ ನಲ್ಲಿ ಸಂಘದ ಅಧ್ಯಕ್ಷ ರಾಘವೇಂದ್ರ ರಾವ್ ಅಧ್ಯಕ್ಷತೆಯಲ್ಲಿ ನಡೆಯಿತು.

ಟೂರಿಸ್ಟ್ ಕಾರು ಚಾಲಕರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಟೂರಿಸ್ಟ್ ಕಾರು ಚಾಲಕರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಬೇಕು ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಹಿರಿಯ ಸದಸ್ಯ ಸುರೇಶ್ ಬಂಗೇರ ಹೇಳಿದರು.

ಗೌರವಾಧ್ಯಕ್ಷರಾದ ಇಕ್ಬಾಲ್ ಬಿ.ಸಿ.ರೋಡ್ ಅವರು ಮಾತನಾಡಿ, ಸಂಘ ಮತ್ತಷ್ಟು ಬಲಿಷ್ಠವಾಗಲಿ ಎಂದು ಆಶಿಸಿದರು. ಇತ್ತೀಚೆಗೆ ನಿಧನ ಹೊಂದಿದ ಸಂಘದ ಹಿರಿಯ ಸದಸ್ಯ ಹುಸೈನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಿರ್ಗಮನ ಅಧ್ಯಕ್ಷರಾದ ರಾಘವೇಂದ್ರ ರಾವ್ ಮಾತನಾಡಿ, ನಿರಂತರ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿರುತ್ತೇನೆ, ಸರ್ವಸದಸ್ಯರ ಸಹಕಾರಕ್ಕೆ ಧನ್ಯವಾದಗಳು ಎಂದು ಸಂಘಕ್ಕೆ ಶುಭ ಕೋರಿದರು.
ಹಿರಿಯ ಸದಸ್ಯರಾದ ರಾಮಣ್ಣ ಗಾಂದೋಡಿ ಅವರು ಪಾರ್ಕಿಂಗ್ ಅವ್ಯವಸ್ಥೆ ಕುರಿತು ಬೆಳಕು ಚೆಲ್ಲಿದರು. ಇನ್ನೋರ್ವ ಹಿರಿಯ ಸದಸ್ಯ ವಿನ್ಸೆಂಟ್ ರೋಡ್ರಿಗಸ್ ಪರ್ಲ ಅವರು ಸ್ವಾಗತಿಸಿ, 2025-26ರ ಲೆಕ್ಕಪತ್ರ ಮಂಡಿಸಿದರು. ಸುರೇಶ್ ಬಂಗೇರ ವಂದಿಸಿದರು. ಈ ವೇಳೆ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಪುರುಷೋತ್ತಮ ಕುಂದರ್ ಆಯ್ಕೆಗೊಂಡರು. ಗೌರವಾಧ್ಯಕ್ಷರಾಗಿ ಇಕ್ಬಾಲ್ ಬಿ.ಸಿ.ರೋಡ್, ಉಪಾಧ್ಯಕ್ಷರಾಗಿ ಫೆಲಿಕ್ಸ್ ಪಿರೇರ, ಕಾರ್ಯದರ್ಶಿಯಾಗಿ ಹರಿಕಿರಣ್ ನಾಯಕ್, ಕೋಶಾಧಿಕಾರಿ ಪ್ರಕಾಶ್ ಕುಲಾಲ್ ಆಯ್ಕೆಗೊಂಡರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುರೇಶ್ ಬಂಗೇರ, ವಿನ್ಸೆಂಟ್ ರೋಡ್ರಿಗಸ್ ಫರ್ಲಾ, ಸತೀಶ್ ಪೂಜಾರಿ ಸಜಿಪ, ತಿಮ್ಮಪ್ಪ ಸಾಲಿಯಾನ್ ಸಿದ್ಧಕಟ್ಟೆ, ತಿಕ್ಕೇಶ್ ವಕ್ಕ, ರಾಮಣ್ಣ ಗಾಂದೋಡಿ, ಸಿರಿಲ್ ಪಚ್ಚಿನಡ್ಕ, ಅವಿನಾಶ್ ಕಾಮಾಜೆ, ಸೋಮನಾಥ ಚಂಡ್ತಿಮಾರ್, ಸಂತೋಷ್ ಪೂಜಾರಿ ಲೊರೆಟ್ಟೊ ಆಯ್ಕೆಗೊಂಡರು.


Be the first to comment on "ಬಂಟ್ವಾಳ ತಾಲೂಕು ಟೂರಿಸ್ಟ್ ಕಾರು ಚಾಲಕ, ಮಾಲೀಕರ ಸಂಘದ ಮಹಾಸಭೆ: ನೂತನ ಅಧ್ಯಕ್ಷರಾಗಿ ಪುರುಷೋತ್ತಮ ಕುಂದರ್ ಆಯ್ಕೆ"