ಕಣ್ಮರೆಯಾಗುತ್ತಿರುವ ತುಳುನಾಡಿದ ಆಹಾರ ಸಂಸ್ಕೃತಿ: ವಿಚಾರಸಂಕಿರಣ

ಕಣ್ಮರೆಯಾಗುತ್ತಿರುವ ತುಳುನಾಡಿದ ಆಹಾರ ಸಂಸ್ಕೃತಿ ಕುರಿತು ವಿಚಾರಸಂಕಿರಣ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಸಂಚಯಗಿರಿಯ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯ, ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಹಯೋಗದಲ್ಲಿ ಭಾನುವಾರ ನಡೆಯಿತು.

OPTIC WORLD

ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ.ಶಿವರಾಮ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿ, ಮನುಷ್ಯನ ಆಹಾರ ಸಂಸ್ಕೃತಿ ನಿಸರ್ಗದಲ್ಲಿ ಆಗುವ ಬದಲಾವಣೆಗಳೊಂದಿಗೆ ಬೆಸೆದುಕೊಂಡಿದೆ. ತುಳುನಾಡಿನ ಆಹಾರ ಪದ್ಧತಿಗಳು ಆಯಾ ಕಾಲಕ್ಕೆ ಏನೇನು ಬೇಕು ಎಂಬುದನ್ನು ವಿವರಿಸುತ್ತದೆ ಎಂದರು.

VNR GOLD

ಆಟಿ ಆಮಾವಾಸ್ಯೆಗೆ ಮಾಡುವ ಹಾಲೆ ಮರದ ತೊಗಟೆಯ ರಸದ ಕಷಾಯದ ವಿಧಿ ನಿಷೇಧ ಕುರಿತು ವಿವರಿಸಿದ ಅವರು, ಮರದ ತೊಗಟೆ ಮದ್ದಾಗಿ ಪರಿವರ್ತನೆ ಆಗಬೇಕಿದ್ದರೆ ನಿಸರ್ಗದ ಪಾತ್ರವಿದೆ. ಇದೇ ರೀತಿ ಕೌಟುಂಬಿಕ ಜೀವನಕ್ಕೂ ಆಹಾರ ಪದ್ಧತಿಗೂ ಸಂಬಂಧವಿದೆ ಎಂದರು. ಕುಟುಂಬ ಸಂರಕ್ಷಣೆ, ಬಂಧುತ್ವ, ಸಮಾಜದ ಒಳಗೆ ಇರುವ ಜಾತಿಯ ವಿನ್ಯಾಸಗಳು ಆಹಾರ ಸಂಸ್ಕೃತಿಯ ಕುರಿತು ವಿವರಿಸಿದ ಅವರು ಇಡೀ ವಿಚಾರಸಂಕಿರಣ ಉತ್ತಮ ಮಂಥನಕ್ಕೆ ವೇದಿಕೆ ಒದಗಿಸಿದೆ ಎಂದರು.

ಜಾಹೀರಾತು

ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ನ ಕಾರ್ಯನಿರ್ವಾಹಕ ನಿರ್ದೇಶಕಿ ಮೇನಕಾ ರೋಡ್ರಿಗಸ್ ಉದ್ಘಾಟಿಸಿ ಮಾತನಾಡಿ, ಆಹಾರ ಸಂಸ್ಕೃತಿಯ ವೈವಿಧ್ಯವನ್ನು ಅರಿಯಲು ವಿಚಾರಸಂಕಿರಣ ಪೂರಕ ಪಾತ್ರ ವಹಿಸುತ್ತದೆ ಎಂದರು.

ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಸ್ಥಾಪಕ ಡಾ. ತುಕಾರಾಮ ಪೂಜಾರಿ ಮಾತನಾಡಿ, ಹಿಂದಿನ ಕಾಲದ ತುಳು ಬದುಕು, ಜನಜೀವನದ ಕುರಿತು ವಿವರಿಸಿ, ಪ್ರಸ್ತುತ ಸನ್ನಿವೇಶದಲ್ಲಿ ಪುನರಾವಲೋಕನ ನಡೆಸುವ ಅಗತ್ಯವನ್ನು ತಿಳಿಸಿದರು. ಈ ಸಂದರ್ಭ ಕೇಂದ್ರದ ಡಾ. ಆಶಾಲತಾ ಸುವರ್ಣ, ಕಾರ್ಯಕ್ರಮ ಸಂಯೋಜಕ ಅರವಿಂದ ಕುಡ್ಲ ಉಪಸ್ಥಿತರಿದ್ದರು.

ಮೊದಲ ಅಧಿವೇಶನದಲ್ಲಿ ತುಳುವ ಸಮಾಜ ಮತ್ತು ಆಹಾರ ಸಂಸ್ಕೃತಿ ಕುರಿತು ಸಂಶೋಧಕಿ ರಾಜಶ್ರೀ ಟಿ. ರೈ ಪೆರ್ಲ ಮತ್ತು ಪಾರಂಪರಿಕ ಆಹಾರ ತಜ್ಞ ಸುದರ್ಶನ ಭಟ್ ಬೆದ್ರಡಿ ಮಾತನಾಡಿದರು. ಎರಡನೇ ಅಧಿವೇಶನದಲ್ಲಿ ತುಳುವ ಸಂಸ್ಕೃತಿಯಲ್ಲಿ ಪಾತ್ರೆಗಳ ಮಹತ್ವ ಕುರಿತು ಪ್ರಾಚೀನ ವಸ್ತುಗಳ ಸಂಗ್ರಾಹಕ ಹಾಗೂ ದೃಶ್ಯ ಕಲಾವಿದ ಪುರುಷೋತ್ತಮ ಅಡ್ವೆ, ಮೂರನೇ ಅಧಿವೇಶನದಲ್ಲಿ ಬದಲಾಗುತ್ತಿರುವ ಆಧುನಿಕ ಯುಗದಲ್ಲಿ ಆಹಾರ ಮತ್ತು ಆರೋಗ್ಯದ ಕುರಿತು ವೈದ್ಯ ಡಾ. ಸುಪ್ರೀತ್ ಜೆ. ಲೋಬೊ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಅರವಿಂದ ಕುಡ್ಲ ನಿರೂಪಿಸಿದರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಿಂಧೂರ ಟಿ.ಪಿ. ವಂದಿಸಿದರು.  ಕಾರ್ಯಕ್ರಮದಲ್ಲಿ ಅಧ್ಯಯನ ಕೇಂದ್ರದ ಮಾಹಿತಿ ಕೈಪಿಡಿ ಬಿಡುಗಡೆಗೊಳಿಸಲಾಯಿತು.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಕಣ್ಮರೆಯಾಗುತ್ತಿರುವ ತುಳುನಾಡಿದ ಆಹಾರ ಸಂಸ್ಕೃತಿ: ವಿಚಾರಸಂಕಿರಣ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*