ಬಂಟ್ವಾಳ: ಸಿಡಿಲು ಬಡಿದು ಹಾನಿಗೊಳಗಾದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬೇಟಿ ಪರಿಶೀಲನೆ ನಡೆಸಿದರು.

ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನದ ದೇವರ ಗರ್ಭಗುಡಿಯ ಪ್ರಾಕಾರಕ್ಕೆ ತೀವ್ರ ಸ್ವರೂಪದಲ್ಲಿ ಹಾನಿಯಾಗಿದ್ದು, ತಹಸೀಲ್ದಾರ್ ಮಂಜುನಾಥ್ ಜೊತೆ ಆಗಮಿಸಿ ನಷ್ಟದ ಅಂದಾಜು ಪರಿಶೀಲನೆ ನಡೆಸಿದರು.

ದೇವಸ್ಥಾನದ ಗರ್ಭಗುಡಿಯ ಪುನರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುಂದುವರಿಯಲು ಗ್ರಾಮಸ್ಥರ ಕೂಡುವಿಕೆಯಲ್ಲಿ ಸ್ಥಳದಲ್ಲಿ ಪ್ರಶ್ನಾಚಿಂತನೆ ನಡೆಸುವುದರ ಬಗ್ಗೆ ಚರ್ಚಿಸಿದರು. ಪ್ರಮುಖರಾದ ಸಂಪತ್ ಕುಮಾರ್ ಶೆಟ್ಟಿ ಮುಂಡ್ರೇಲುಗುತ್ತು, ಶಿವರಾಮ ಶೆಟ್ಟಿ, ಲಾವಣ್ಯ ಬಲ್ಲಾಳ್, ಶಿವಪ್ಪ ಪೂಜಾರಿ, ಜಯ ನಾಯ್ಕ್,ಲಿಂಗಪ್ಪ ಪೂಜಾರಿ, ಸುದರ್ಶನ ಬಜ, ಶಾಂತಪ್ಪ ಪೂಜಾರಿ, ಧನಂಜಯ ಶೆಟ್ಟಿ ಸರಪಾಡಿ, ಶಶಿಕಾಂತ್ ಶೆಟ್ಟಿ ಆರ್ಮುಡಿ, ರಾಮಕೃಷ್ಣ ಮಯ್ಯ, ಪ್ರಕಾಶ್ ಅಂಚನ್, ಸುರೇಖಾ ಹೆಗ್ಡೆ, ಶಿವಪ್ಪ ಪೂಜಾರಿ ಜೇಡರಬೆಟ್ಟು, ಜಯರಾಮ ಅಡಪ ದೆಚ್ಚಾರು, ತಿಲಕ್ ಬಂಗೇರ, ಮೋನಪ್ಪ ಪೂಜಾರಿ, ಸಂಜೀವ ಪೂಜಾರಿ, ವಸಂತ ದೆಚ್ಚಾರು, ಆನಂದ ಪೂಜಾರಿ ಅಲ್ಲಂಗಾರು, ಸಂತೋಷ್ ಕುಲಾಲ್, ಸುಜಿತ್ ಕಡಮಾಜೆ ಮತ್ತಿತರರು ಉಪಸ್ಥಿತರಿದ್ದರು


Be the first to comment on "ಸಿಡಿಲು ಬಡಿದು ಇಳಿಯೂರು ದೇವಸ್ಥಾನಕ್ಕೆ ಹಾನಿ: ಶಾಸಕ ರಾಜೇಶ್ ನಾಯ್ಕ್ ಭೇಟಿ, ಪರಿಶೀಲನೆ"