ಹೊಳೆಯಾಗುತ್ತಿರುವ ಹೆದ್ದಾರಿ, ಸಮಸ್ಯೆಗಳೇನು?

ಬಿ.ಸಿ.ರೋಡ್ -ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ  ಸಮಸ್ಯೆ ಮುಂದುವರಿದೆ. ಹಿರಿಯ ಪತ್ರಕರ್ತ ಗಣೇಶ ಪ್ರಸಾದ ಪಾಂಡೇಲು ಬರೆಹವಿದು.

ಕಲ್ಲಡ್ಕದ ಸುದೀರ್ಘ ಮೇಲ್ಸೇತುವೆ( ಫ್ಲೈ ಓವರ್ )ಮುಕ್ತಾಯ ಬಳಿಕ ಕುದ್ರೆಬೆಟ್ಟು ದಾಸ ಕೋಡಿ, ಸೂರಿಕುಮೇರು ಮಾಣಿ,ಬುಡೋಳಿ, ಗಡಿಯಾರ, ಪೇರ ಮೊಗ್ರು,ಸತ್ತಿಕಲ್ಲು, ಬಿಳಿಯೂರು ಪೆರ್ನೆ ವರೆಗೆ ಮಳೆಗಾಲದ ಹೆದ್ದಾರಿಯ ಮತ್ತು ಸಂಪರ್ಕ ರಸ್ತೆಗಳ ಸಂಚಾರ ಜನರನ್ನು ಆತಂಕಕ್ಕೆ ತಳ್ಳಿವೆ. ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಕುಸಿಯುವ ಮಣ್ಣು ಒಂದೆಡೆಯಾದರೆ,  ಮಣ್ಣು, ಕಸ ಕಡ್ಡಿ ತ್ಯಾಜ್ಯಗಳಿಂದ ತುಂಬಿದ ಚರಂಡಿ ಯಿಂದಾಗಿ ಮಳೆ ನೀರು ರಸ್ತೆ ಮೇಲೆ ಹರಿದು ಹೆದ್ದಾರಿಯೋ ತೋಡೋ ಎಂದು ಅನುಮಾನ ಮೂಡಿಸುತ್ತದೆ.ಮುಖ್ಯ ರಸ್ತೆಯ ಮೇಲೆ ಹಾಗೂ ಸಂಪರ್ಕ ರಸ್ತೆಗಳ ಮೇಲೆ ನೀರು ಹರಿದು ಸಂಚಾರಕ್ಕೆ ಅಡ್ಡಿಯಾಗುತ್ತಿರುವುದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ.

Article By GANESHA PRASADA PANDELU

ಚತುಷ್ಪಥ ಕಾಮಗಾರಿ ವೇಗವಾಗಿ ನಡೆಯುತ್ತಿದೆ ತಿರುವು ಮುರುವು ರಸ್ತೆಗಳನ್ನು ನೇರಗೊಳಿಸಲಾಗುತ್ತದೆ. ಆದರೆ  ಕಾಮಗಾರಿಯ ಭರದಲ್ಲಿ ಗುಡ್ಡದ ಮಣ್ಣು ಕುಸಿದು ಬೀಳದಂತೆ ತಡೆಯುವ ಬಗ್ಗೆ , ನೀರು ಚರಂಡಿ ಗಳಲ್ಲಿ ಹರಿದು ಹೋಗುವ  ವ್ಯವಸ್ಥೆ ಬಗ್ಗೆ ಗಮನ ಹರಿಸುವುದಿಲ್ಲ ಎಂಬುದು ಸ್ಥಳೀಯರ ಅಳಲು ಹಾಗೂ ಆಕ್ರೋಶ.

ಪೆರ್ನೆಯಲ್ಲಿ ಆತಂಕದ ಸ್ಥಿತಿ

ಪೆರ್ನೆ ಬಿಳಿಯೂರಿನಲ್ಲಿ ನಿರಂತರ ಸುರಿಯುತ್ತಿರುವ ಮಳೆಗೆ ಮತ್ತೆ ಗುಡ್ಡ,ಧರೆಗಳು ಮನೆ ಮತ್ತು ರಸ್ತೆಗೆ ಕುಸಿಯುವ ಭೀತಿ ಎದುರಾಗಿದ್ದು. ಕಳೆದ ವಾರಗಳ ಹಿಂದೆಯಷ್ಟೇ ಈ ಪರಿಸರದಲ್ಲಿ ತುಂಬ ಹಾನಿಗಳು ಸಂಭವಿಸಿತ್ತು. ಜನಸಾಮಾನ್ಯರು, ,ಶಾಲಾ  ಕಾಲೇಜು ಮಕ್ಕಳು ಭಯದಲ್ಲಿ ರಸ್ತೆಗಳಲ್ಲಿ ನಡೆಯುವಂತಾಗಿದೆ.

ಹೂಳೆತ್ತುವುದಿಲ್ಲ ಯಾಕೆ?

ದಾಸಕೋಡಿಯಲ್ಲಿ ಎರಡು ದಿನಗಳ ಹಿಂದೆ ಸುರಿದ  ಬಾರೀ ಮಳೆಗೆ ಹೆದ್ದಾರಿ ಬದಿಯ ನೀರು  ಚರಂಡಿಯ ಬದಲು ತಗ್ಗುಪ್ರದೇಶ ಸೇರಿ ಅಲ್ಲಿದ್ದ ಗೋದಾಮು ಕಟ್ಟಡವನ್ನು ಮುಳುಗಿಸಿತ್ತು. ಅಲ್ಲೇ ಸುತ್ತಮುತ್ತವಿದ್ದ ಮನೆಯವರನ್ನು ಎರಡು ದಿನ ನಿದ್ದೆಗೆಡುವಂತೆ ಮಾಡಿತ್ತು. ಈಗಲೂ ಇಲ್ಲಿ ಅತಂಕ ತಪ್ಪಿಲ್ಲ.

ಈ ಸಂದರ್ಭದಲ್ಲಿ ಸೂರಿಕುಮೇರು ದಾಸಕೋಡಿ ನಡುವೆ ಹೆದ್ದಾರಿ ಸಂಪೂರ್ಣ ಹೊಳೆ ಯಾಗಿ ಪರಿವರ್ತನೆ ಆಗಿತ್ತು. ರಸ್ತೆ ಬದಿಯ ತ್ಯಾಜ್ಯಗಳು ಮತ್ತು ಗುಡ್ಡೆ ಕುಸಿದು ಬೀಳುವ ಮಣ್ಣು ಚರಂಡಿ ಮತ್ತು ರಸ್ತೆಯನ್ನು ಸೇರುತ್ತದೆ. ಆದರೆ ಸಂಬಙಸಿ ಇಲಾಖೆ ಹೂಳೆತ್ತುವ, ಚರಂಡಿಗಳಲ್ಲಿ ನೀರು ಸರಾಗವಾಗಿ ಹೋಗುವಂತೆ ಮಾಡುವ ಪ್ರಯತ್ನಕ್ಕೆ ಮುಂದಾಗಿಲ್ಲ.

After the completion of the long overbridge at Kaladka, traffic on the road during the monsoon season and connecting roads from Kudrebetta Dasa Kodi, Surikumeru Mani, Budoli, Gadiyara, Per Mogru, Sathikallu, and Biliyuru Perne has caused concern among the people. On one hand, soil slippage occurs beside the national highway, while on the other hand, rainwater flowing onto the highway raises doubts due to the drain filled with soil, waste, and debris. – A Report at BANTWALNEWS by GANESHA PRASADA PANDELU

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಹೊಳೆಯಾಗುತ್ತಿರುವ ಹೆದ್ದಾರಿ, ಸಮಸ್ಯೆಗಳೇನು?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*