2025-2026ನೇ ಸಾಲಿಗೆ ಸಂಬಂಧಿಸಿದಂತೆ ಮುಂಗಾರು ಹಂಗಾಮಿನಲ್ಲಿ ಕರಾವಳಿ ಜೆಲ್ಲೆಯ ಮಳೆಯಾಶ್ರಿತ ಬೆಳೆಯಾದ ಭತ್ತ ಬೆಳೆಯನ್ನು ಬೆಳೆಸುವ ರೈತರಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ ವಿಮಾ ಯೋಜನೆ ಈ ವರ್ಷಕ್ಕೆ ಅನುಷ್ಠಾನಗೊಳಿಸಲಾಗಿದ್ದು ಭತ್ತದ ಬೆಳೆ ಬೆಳೆಯುವ ರೈತರು ತಾವು ಹೊಂದಿರುವ ಜಮೀನಿಗೆ ಅನುಗುಣವಾಗಿ ಪ್ರಿಮಿಯಂ ಕಂತು ಹಣವನ್ನು ಪಾವತಿಸಿ ಯೋಜನೆಯ ಪ್ರಯೋಜನ ಪಡೆಯಬೇಕು ಎಂದೂ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಪತ್ರಿಕಾ ಹೇಳಿಕೆ ಮೂಲಕ ವಿನಂತಿಸಿದ್ದಾರೆ.
ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಗೆ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ಭತ್ತದ ಬೆಳೆಗೆ ಮಾತ್ರ ಈ ಯೋಜನೆಯಲ್ಲಿ ವಿಮೆ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಪ್ರಾಥಮಿಕ ಕೃಷಿ ಸಹಕಾರ ಸಂಘಗಳಿಂದ ಬೆಳೆ ಸಾಲ ಪಡೆದ ರೈತರೆಲ್ಲರೂ ವಿಮಾ ಯೋಜನೆಗೆ ಒಳಪಡಿಸಲು ಅವಕಾಶ ಒದಗಿಸಲಾಗಿದ್ದು ರೈತರು ಕಡ್ಡಾಯವಾಗಿ ಫಾರ್ಮರ್ ಐಡಿ ಹೊಂದಿರಬೇಕು ಹಾಗೂ ಭೂಮಿ ದಾಖಲೆಗಳಲ್ಲಿ ಭತ್ತದ ಬೆಳೆ ನಮೂದಾಗಿರಬೇಕು. ವಿಮಾ ಪ್ರಿಮಿಯಂ ಹಣ ಪಾವತಿಸಲು ದಕ್ಷಿಣ ಕನ್ನಡಕ್ಕೆ ಅಗೋಸ್ಟ್ 15 ಕೊನೆಯ ದಿನಾಂಕವಾಗಿದ್ದು, ಉಡುಪಿ ಜೆಲ್ಲೆಗೆ ಜುಲೈ ತಿಂಗಳು ಅಂತಿಮ ದಿನ ವಾಗಿರುತ್ತದೆ. ಭತ್ತ ಬೆಳೆಯುವ ರೈತರು ತಾವು ಬೆಳೆ ಸಾಲ ಪಡೆದಿರುವ ತಮ್ಮ ವ್ಯಾಪ್ತಿಯ ಪ್ರಾಥಮಿಕ ಸಹಕಾರ ಸಂಘದ ಕಚೇರಿಯನ್ನು ಸಂಪರ್ಕಮಾಡಿ ನೋಂದಣಿ ಮಾಡುವಂತೆ ತಿಳಿಸಿದ್ದಾರೆ.
Be the first to comment on "ಭತ್ತದ ಬೆಳೆಗೆ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ವಿಮಾ ಪ್ರಿಮಿಯಂ ಕಟ್ಟಲು ಪ್ರಾರಂಭ :ಪ್ರಭಾಕರ ಪ್ರಭು"