ಮಾಣಿ, ಸೂರಿಕುಮೇರು, ದಾಸಕೋಡಿ, ಕುದ್ರೆಬೆಟ್ಟಿನಲ್ಲಿ ಸಮಸ್ಯೆ ಕುರಿತು ವಿವರಿಸುತ್ತಾರೆ ಹಿರಿಯ ಪತ್ರಕರ್ತ ಗಣೇಶ ಪ್ರಸಾದ ಪಾಂಡೇಲು
- ಗಣೇಶ ಪ್ರಸಾದ ಪಾಂಡೇಲು
ಚತುಷ್ಪಥ ಕಾಮಗಾರಿ ಆರಂಭ ಆದ ನಾಲ್ಕು ವರ್ಷಗಳಿಂದ ಇಲ್ಲಿ ರಾಷ್ಟ್ರೀ ಹೆದ್ದಾರಿ ದಾಟುವುದು ಸಮಸ್ಯೆಯಾಗಿದೆ. ಈಗ ಹೆದ್ದಾರಿ ವಿಸ್ತರಣೆ, ಅಂಡರ್ ಪಾಸ್ ನಿರ್ಮಾಣ ಆದ ಮೇಲಂತೂ ರಸ್ತೆ ದಾಟುವ ವಿದ್ಯಾರ್ಥಿಗಳ ಗೋಳು ಹೇಳಲು ಅಸಾಧ್ಯ. ಇದು ಅಡ್ಡಹೊಳೆ- ಬಿ. ಸಿ. ರೋಡ್ ರಾಷ್ಟ್ರೀಯ ಹೆದ್ದಾರಿಯ ಕುದ್ರೆಬೆಟ್ಟು,ದಾಸಕೋಡಿ, ಸೂರಿಕುಮೇರು ಪೇಟೆ ಮತ್ತು ಮಾಣಿ ಜಂಕ್ಷನ್ ನ ಶೋಚನೀಯ ಪರಿಸ್ಥಿತಿ.
ಯಾವುದೇ ಸುರಕ್ಷತೆ ಕ್ರಮಗಳು ಇಲ್ಲದ ಇಲ್ಲಿ ಮಕ್ಕಳು ರೋಡ್ ಕ್ರಾಸಿಂಗಿಗೆ ಪರದಾಡುತ್ತಿದ್ದಾರೆ. ಸೂರಿಕುಮೇರಿನಲ್ಲಿ ಸರ್ವೀಸ್ ರಸ್ತೆಗಳಲ್ಲಿ ಕೂಡ ವಾಹನ ಮಿತಿ ಮೀರಿದ ವೇಗದ ಓಡಾಟ ರಸ್ತೆಗಳ ಮಧ್ಯೆ ಎಲ್ಲೆಂದರಲ್ಲಿ ನಿಲ್ಲುವ ,ನಿಲ್ಲಿಸುವ ಟ್ಯಾಂಕರ್ ಗಳು ಟಿಪ್ಪರ್ ಗಳು ಬಾಡಿಗೆ ವಾಹನಗಳು ವಿದ್ಯಾರ್ಥಿಗಳಲ್ಲಿ ಮತ್ತು ಹೆತ್ತವರಲ್ಲಿ ಭಯ ಮತ್ತುಆತಂಕ ಮೂಡುವಂತೆ ಮಾಡಿದೆ. ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಮಂಗಳೂರು, ಪುತ್ತೂರು ಉಪ್ಪಿನಂಗಡಿ, ಕಲ್ಲಡ್ಕ ಹಾಗೂ ಸ್ಥಳೀಯ ಶಾಲೆಗಳಿಗೆ ಮತ್ತು ಅಕ್ಕದ ಪಕ್ಕದ ಶಾಲೆ ಕಾಲೇಜುಗಳಿಗೆ ತೆರಳುವವರೂ ಇದ್ದಾರೆ.
ಜನ ನಿಬಿಡ ಪ್ರದೇಶ, ವಾಹನ ದಟ್ಟಣೆ
ಬಿ. ಸಿ. ರೋಡ್- ಅಡ್ಡಹೊಳೆ ನಡುವಣ ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕ ಮೇಲ್ಸೇತುವೆ ಪೂರ್ಲಿಪಾಡಿಯಲ್ಲಿ ಮುಕ್ತಾಯಗೊಂಡ ತಕ್ಷಣ ಕುದ್ರೆಬೆಟ್ಟು ಸಿಗುತ್ತದೆ. ಪರಿಸರದಲ್ಲಿ ಅಂಗನವಾಡಿ ಕೇಂದ್ರ ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇವೆ. ಕುದ್ರೆಬೆಟ್ಟು ನಲ್ಲಿ ಹೆದ್ದಾರಿ ಪಕ್ಕದ ಖಾಸಗಿ ಹೊಟೇಲ್ ಮುಂಭಾಗ ಬೆಳಗ್ಗೆ ಮಧ್ಯಾಹ್ನ ಸಂಜೆ ರಾತ್ರಿ ಎಂಬ ವ್ಯತ್ಯಾಸ ಇಲ್ಲದೇ ಊಟೋಪಹಾರಕ್ಕಾಗಿ ವಾಹನಗಳು ನಿಲುಗಡೆ ಆಗುತ್ತವೆ ಜತೆಗೆ ವೇಗವಾಗಿ ಬರುವ ವಾಹನಗಳು ಶಾಲೆ ಮಕ್ಕಳು ರಸ್ತೆ ದಾಟಲು ಸವಾಲಾಗಿವೆ. ದಾಸಕೋಡಿಯಲ್ಲಿ ಮತ್ತು ಸೂರಿಕುಮೇರಿಲ್ಲಿ ಕೂಡ ಇದೇ ಪರಿಸ್ಥಿತಿ. ಇಲ್ಲಿ ಶಾಲೆಗಳು ಇರದಿದ್ದರೂ ಅಂಗನವಾಡಿಗಳು ಇವೆ ಸೂರಿಕುಮೇರು ಪೇಟೆ ಹತ್ತೂರಿನ ವಿದ್ಯಾರ್ಥಿಗಳು ಸೇರುವ ಜಾಗ. ಮಾಣಿ ಜಂಕ್ಷನ್ ನ ಸ್ಥಿತಿ ಕರುಣಾಜನಕ. ಇಲ್ಲಿ ಅಂಗನವಾಡಿ, ಸರಕಾರಿ ಪ್ರಾಥಮಿಕ ಅನುದಾನಿತ ಪ್ರೌಢಶಾಲೆ ಹಾಗೂ ಖಾಸಗಿ ಪ್ರೌಢಶಾಲೆಗಳು ಇವೆ.ಇಲ್ಲೆಲ್ಲ ರಸ್ತೆ ದಾಟಲಾಗದ ಸ್ಥಿತಿಯಿದೆ.
ನಿರ್ವಹಣೆಗೆ ಕಷ್ಟಪಡಬೇಕಾಗುತ್ತದೆ:
ಶಾಲೆಯಲ್ಲಿ ಮಕ್ಕಳನ್ನು ಉಳಿಸಿಕೊಳ್ಳುವ ಸಲುವಾಗಿ ಸ್ಥಳೀಯ ಶಾಲೆಗಳು ಶಾಲಾ ಬಸ್ ವ್ಯವಸ್ಥೆ ಮಾಡಿವೆ. ಬೆಳಗ್ಗೆ ಸಮಯಕ್ಕೆ ಸರಿಯಾಗಿ ಮಕ್ಕಳನ್ನು ಕರೆದು ತರುವುದು, ನಂತರ ಸಂಜೆ ಸಮಯಕ್ಕೆ ಸರಿಯಾಗಿ ಮನೆಗೆ ತಲುಪಿಸುವುದು ಸಹಿತ ಅವುಗಳ ನಿರ್ವಹಣೆಗೆ ತುಂಬಾ ಕಷ್ಟ ಪಡಬೇಕಿದೆ ಎನ್ನುತ್ತಾರೆ ಖಾಸಗಿ ಶಾಲೆ ಶಿಕ್ಷಕ ರಮೇಶ್ ಕುಮಾರ್ ಹಳೀರ
ಸ್ಕೈವಾಕಿಂಗ್ ರೀತಿ ವ್ಯವಸ್ಥೆ ಬೇಕು:
ಸ್ಕೈವಾಕಿಂಗ್ ಅಥವಾ ಆ ತರಹದ ವ್ಯವಸ್ಥೆ ಕುದ್ರೆಬೆಟ್ಟು, ದಾಸಕೋಡಿ, ಸೂರಿಕುಮೇರು ಮತ್ತು ಮಾಣಿಗಳಲ್ಲಿ ಅತ್ಯಗತ್ಯ. ಇಲ್ಲಿ ತಂಗುದಾಣಗಳೀ ಇಲ್ಲ. ಹಾಗಾಗಿ ಈ ಎಲ್ಲಾ ಕಡೆ ರಸ್ತೆಗಳ ಇಕ್ಕೆಲಗಳಲ್ಲಿ ಮಳೆ ಗಾಳಿ ಬಿಸಿಲ ರಕ್ಷಣೆಗೆ ತಂಗುದಾಣ ನಿರ್ಮಿಸಬೇಕಿದೆ ಎನ್ನುತ್ತಾರೆ ಲಕ್ಕಪ್ಪಕೋಡಿ ಮಾಣಿಯ ಶರ್ಮಿಳಾಚಂದ್ರ.
ರಾಷ್ಟ್ರೀಯ ಹೆದ್ದಾರಿ ಕಾನೂನಿನಲ್ಲಿ ನಿಯಮಗಳಿವೆ, ಇದರ ಸಮರ್ಪಕ ಅನುಷ್ಠಾನ ಬಗ್ಗೆ ಸಂಬಂಧಿತ ಇಲಾಖೆಗಳು ಹೊಂದಾಣಿಕೆಯೊಂದಿಗೆ ಕೆಲಸ ಮಾಡಿದಲ್ಲಿ ಸಮಸ್ಯೆಗಳು ಉಂಟಾಗುವುದನ್ನು ತಡೆಯಬಹುದು. ಒಳ್ಳೆಯ ಲೇಖನ.
thank you for quick response
– Editor