ಬಂಟ್ವಾಳ ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ ಸಿ ರೋಡು ಆಶ್ರಯದ ಸಾರ್ವಜನಿಕ ಗಣೇಶ ವಿಗ್ರಹ ಶೋಭಾ ಯಾತ್ರೆ ಪೂರ್ವದಲ್ಲಿ ಶ್ರೀ ಗಣೇಶನಿಗೆ ಶ್ರೀ ರಾಮ ಗೆಳೆಯರ ಬಳಗ ಕೈಕಂಬ ಬಿ.ಸಿ.ರೋಡು ಅವರಿಂದ 3,500 ಎಳ್ಳುಂಡೆಗಳಿರುವ ಬೃಹದಾಕಾರದ ಹಾರವನ್ನು ಅರ್ಪಿಸಿದರು.
ಎಳ್ಳುಂಡೆ ಮಾಲೆಯು ಹತ್ತು ಅಡಿಗಳಷ್ಟು ಉದ್ದವಾಗಿದ್ದು ಎಳ್ಳುಂಡೆ ಹಾರವನ್ನು ಕೈಕಂಬ ಪೊಳಲಿ ದ್ವಾರದಿಂದ ಮೆರವಣಿಗೆಯಲ್ಲಿ ತಂದು ಅರ್ಪಿಸಲಾಗಿತ್ತು.
ಈ ಸಂದರ್ಭದಲ್ಲಿ ಶ್ರೀ ರಾಮ ಗೆಳೆಯರ ಬಳಗದ ಅಧ್ಯಕ್ಷರಾದ ಸದಾಶಿವ ಕೈಕಂಬ ಹಾಗೂ ಸಂಘದ ಮೊದಲಾದವರು ಪಾಲ್ಗೊಂಡಿದ್ದರು.
Be the first to comment on "ಶೋಭಾಯಾತ್ರೆ ವೇಳೆ ಬಿ.ಸಿ.ರೋಡ್ ಗಣಪನಿಗೆ ಎಳ್ಳುಂಡೆ ಮಾಲೆ ಅರ್ಪಣೆ"