ರೈತರ ಬೆಳೆ ವಿಮೆ, ಬೆಳೆ ಸಾಲಕ್ಕೆ ಕಡ್ಡಾಯ ಬೆಳೆ ಸಮೀಕ್ಷೆ ಕೈಗೊಳ್ಳಲು ಮನವಿ, ವಿವರಗಳು ಇಲ್ಲಿವೆ
2024-25ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ಆಗಸ್ಟ್ 16 ರಿಂದ ಚಾಲನೆ ನೀಡಲಾಗಿದ್ದು, ರೈತರು ತಮ್ಮ ಅಂಡ್ರೋಯ್ಡ್ ಮೊಬೈಲಿನ ಮೂಲಕ ತಮ್ಮ ಜಮೀನಿನ ಬೆಳೆ ಸಮೀಕ್ಷೆ ಕೈಗೊಳ್ಳಲು ಮೊಬೈಲ್ ಆಪ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ರೈತರು ಗೂಗಲ್ ಪ್ಲೇ ಸ್ಟೋರ್ ನಿಂದ https://play.google.com/store/apps/details? Id=com, csk khariffarmer 23_24cropsurvey ಈ ಲಿಂಕ್ ಬಳಸಿ ಅಥವಾ ಕೆಳಗೆ ನೀಡಿದ QR code ಬಳಸಿ kharif Season Farmer Crop Survey 2024-25 App ನ್ನು ಡೌನ್ ಲೋಡ್ ಮಾಡಿ ಸಪ್ಟೆಂಬರ್ 25 ರ ಒಳಗಾಗಿ ರೈತರೇ ತಮ್ಮ ಜಮೀನಿನ ಬೆಳೆ ಸಮೀಕ್ಷೆಯನ್ನು ಕಡ್ಡಾಯವಾಗಿ ಮಾಡಲು ವಿನಂತಿಸಿದೆ. ಜಂಟಿ ಖಾತೆ ಹೊಂದಿದ ರೈತರಿಗೆ ಆಯಾ ಗ್ರಾಮಗಳಿಗೆ ಕಂದಾಯ ಇಲಾಖೆಯಿಂದ ನಿಯೋಜಿಸಲಾದ ಖಾಸಗೀ ನಿವಾಸಿ (PR) ಗಳ ಮೂಲಕ ಬೆಳೆ ಸಮೀಕ್ಷೆ ಮಾಡಿಸಲು ಅವಕಾಶವಿರುತ್ತದೆ. ಬಂಟ್ವಾಳ ತಾಲೂಕಿನ ಬಂಟ್ವಾಳ ಹೋಬಳಿಯ, ರಾಯಿ, ಉಳಿ, ಸಂಗಬೆಟ್ಟು, ಪಿಲಿಮೊಗರು, ದೇವಶ್ಯಮೂಡೂರು, ದೇವಸ್ಯಪಡೂರು, ಅರಳ, ಸರಪಾಡಿ ಗ್ರಾಮಗಳು ಮತ್ತು ಪಾಣೆಮಂಗಳೂರು ಹೋಬಳಿಯ ಕಳ್ಳಿಗೆ, ಅಮ್ಮುಂಜೆ, ಅಮ್ಟೂರು, ಬಡಗಬೆಳ್ಳೂರು, ಬಿ.ಮೂಡ, ಬರಿಮಾರು, ಕಡೇಶ್ವಾಲ್ಯ, ಕೊಡ್ಮಾಣ್, ನರಿಕೊಂಬು,ಪುದು, ಸಜಿಪಮೂಡ, ಸಜಿಪಮೂನ್ನೂರು, ಶಂಭೂರು, ತುಂಬೆ ಗ್ರಾಮಗಳು ಮತ್ತು ವಿಟ್ಲ ಹೋಬಳಿಯ ವಿಟ್ಲಕಸಬಾ, ಅಳಿಕೆ, ಮಾಣಿ, ವೀರಕಂಬ ಗ್ರಾಮಗಳಲ್ಲಿ ಸಮೀಕ್ಷೆ ಆರಂಭಗೊಂಡ ದಿನಾಂಕ ಆಗಸ್ಟ್ 16 ರಿಂದ ಈ ದಿನಾಂಕದವರೆಗೆ ಒಟ್ಟು 24 ದಿನಗಳಲ್ಲಿ ಶೇಕಡಾ 5 ಕ್ಕಿಂತಲೂ ಕಡಿಮೆ ಪ್ರಗತಿಯಾಗಿರುತ್ತದೆ. ಮುಂಬರುವ 2025-26 ನೇ ಸಾಲಿನ ಹವಾಮಾನ ಆಧಾರಿತ ಅಡಿಕೆ ಮತ್ತು ಕಾಳುಮೆಣಸು ಬೆಳೆಗೆ ಬೆಳೆ ವಿಮೆ ನೋಂದಣಿ ಮಾಡಲು ರೈತರಿಗೆ 2024-25ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಆಗಿದ್ದಲ್ಲಿ ಮಾತ್ರ ಅವಕಾಶವಿರುತ್ತದೆ. ಹಾಗೂ 2024-25ನೇ ಸಾಲಿನ ಬೆಳೆ ವಿಮೆ ಪರಿಹಾರ ಮೊತ್ತ ಪಾವತಿಗೆ ಕೂಡ ಈ ಸಾಲಿನ ಬೆಳೆ ಸಮೀಕ್ಷೆ ದತ್ತಾಂಶದ ಆಧಾರದ ಮೇಲೆ ಜರುಗುವುದರಿಂದ ತಾಲೂಕಿನ ಎಲ್ಲಾ ರೈತ ಭಾಂದವರು ತಪ್ಪದೇ ತಾವೇ ಖುದ್ದು ಅಥವಾ ಖಾಸಗೀ ನಿವಾಸಿಗಳ ಮೂಲಕ ಬೆಳೆ ಸಮೀಕ್ಷೆ ಕಾರ್ಯವನ್ನು ನಿಗಧಿತ ಅವಧಿಯೊಳಗೆ ಪೂರೈಸಲು ವಿನಂತಿಸಲಾಗಿದೆ. ತಮ್ಮ ಗ್ರಾಮದ ಖಾಸಗೀ ನಿವಾಸಿಗಳ ವಿವರಗಳನ್ನು ತಮ್ಮ ಗ್ರಾಮದ ಗ್ರಾಮ ಆಡಳಿತಾಧಿಕಾರಿ ಅವರನ್ನು ಸಂಪರ್ಕಿಸಿ ಅಥವಾ ಬೆಳೆ ದರ್ಶಕ್ 2024-25 APP ಡೌನ್ ಲೋಡ್ ಮಾಡಿ ಗ್ರಾಮದ ಬೆಳೆ ಸಮೀಕ್ಷೆಗಾರರ ವಿವರಗಳನ್ನು ಪಡೆಯಬಹುದಾಗಿರುತ್ತದೆ. ಬಂಟ್ವಾಳ ತಾಲೂಕಿನ ಇದುವರೆಗಿನ ಬೆಳೆ ಸಮೀಕ್ಷೆ ವರದಿಗಳು ಈ ಕೆಳಕಂಡಂತಿದೆ.
ಬಂಟ್ವಾಳ ಹೋಬಳಿಯಲ್ಲಿ ಒಟ್ಟು ಸಮೀಕ್ಷೆಗೆ ಒಳಪಡುವ ತಾಕುಗಳು 50853, ನಿಯೋಜಿಸಲಾದ ಖಾಸಗಿ ನಿವಾಸಿಗಳು 48, ರೈತರ ಬೆಳೆ ಸಮೀಕ್ಷೆ 981, ಖಾಸಗಿ ನಿವಾಸಿಗಳ ಬೆಳೆ ಸಮೀಕ್ಷೆ 7825, ಒಟ್ಟು ಸಮೀಕ್ಷೆಗೆ ಒಳಪಡುವ ತಾಕುಗಳು 8806, ಸಮೀಕ್ಷೆಗೆ ಬಾಕಿ ಇರುವ ತಾಕುಗಳು 42047, ಶೇಕಡಾ 17.32
ಪಾಣೆಮಂಗಳೂರು ಹೋಬಳಿಯಲ್ಲಿ ಒಟ್ಟು ಸಮೀಕ್ಷೆಗೆ ಒಳಪಡುವ ತಾಕುಗಳು 51429, ನಿಯೋಜಿಸಲಾದ ಖಾಸಗಿ ನಿವಾಸಿಗಳು 48, ರೈತರ ಬೆಳೆ ಸಮೀಕ್ಷೆ 562, ಖಾಸಗಿ ನಿವಾಸಿಗಳ ಬೆಳೆ ಸಮೀಕ್ಷೆ 4503, ಒಟ್ಟು ಸಮೀಕ್ಷೆಗೆ ಒಳಪಡುವ ತಾಕುಗಳು 5065, ಸಮೀಕ್ಷೆಗೆ ಬಾಕಿ ಇರುವ ತಾಕುಗಳು 46364, ಶೇಕಡಾ 9.85
Be the first to comment on "ರೈತರ ಬೆಳೆ ವಿಮೆ, ಬೆಳೆ ಸಾಲಕ್ಕೆ ಕಡ್ಡಾಯ ಬೆಳೆ ಸಮೀಕ್ಷೆ ಕೈಗೊಳ್ಳಲು ಮನವಿ, ವಿವರಗಳು ಇಲ್ಲಿವೆ"