ಬಂಟ್ವಾಳದಲ್ಲಿ ಟ್ರಾಫಿಕ್ ಜಾಮ್, ಬಿ.ಸಿ.ರೋಡಿನಲ್ಲಿ ಜನದಟ್ಟಣೆ

ಬಂಟ್ವಾಳ ಪೇಟೆಯಲ್ಲಿ ಟ್ರಾಫಿಕ್ ಜಾಮ್ ಸೋಮವಾರ ಕಂಡುಬಂದರೆ, ಬಿ.ಸಿ.ರೋಡಿನಲ್ಲಿ ಜನದಟ್ಟಣೆ ಇತ್ತು. ಲಾಕ್ ಡೌನ್ ವದಂತಿಗಳ ಹಿನ್ನೆಲೆಯಲ್ಲಿ ಸೋಮವಾರ ಬೆಳಗಿನ ಹೊತ್ತು ದಿನಸಿ, ಮೆಡಿಕಲ್, ಬೇಕರಿ ಅಂಗಡಿಗಳ ಮುಂದೆ ಸಾಲು ಕಂಡುಬಂತು. ನಾಳೆ ಎಲ್ಲ ಬಂದ್ ಆಗ್ತದಾ ಎಂಬ ಮಾತಿನೊಂದಿಗೆ ವ್ಯವಹರಿಸುತ್ತಿದ್ದ ಜನರು ಕಂಡುಬಂದರೆ, ಇಡೀ ಬಿ.ಸಿ.ರೋಡಿನಲ್ಲಿ ವಾಹನಗಳು ಅಲ್ಲಲ್ಲಿ ಪಾರ್ಕ್ ಮಾಡಿ, ಟ್ರಾಫಿಕ್ ಜಾಮ್ ಗೂ ಕಾಣಿಕೆ ನೀಡಿದವು.

ಮೊದಲೇ ಅಗಲಕಿರಿದಾದ ಬಂಟ್ವಾಳ ಪೇಟೆಯಲ್ಲಿ ಸೋಮವಾರ ಬೆಳಗ್ಗಿನ ಪೀಕ್ ಅವರ್ ವಾಹನಗಳ ಸಂಚಾರ ಇತ್ತು. ಗ್ರಾಮೀಣ ಭಾಗದ ಜನರು ತಮ್ಮ,ತಮ್ಮ ವಾಹನದಲ್ಲಿ ಮತ್ತು ಬಾಡಿಗೆ ವಾಹನದ ಮೂಲಕ ಅಗತ್ಯ ಸಾಮಾಗ್ರಿ ಖರೀದಿ,ಬ್ಯಾಂಕ್ ವ್ಯವಹಾರಕ್ಕಾಗಿ ಪೇಟೆಗೆ ಅಗಮಿಸಿದ್ದು ,ಇದರಿಂದಾಗಿ ವಾಹನ ಸಂಚಾರದ ಒತ್ತಡ ಹೆಚ್ಚಾಗಿತ್ತು.

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಬಂಟ್ವಾಳದಲ್ಲಿ ಟ್ರಾಫಿಕ್ ಜಾಮ್, ಬಿ.ಸಿ.ರೋಡಿನಲ್ಲಿ ಜನದಟ್ಟಣೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*