ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗ್ಗಿನ ಅವಧಿಯಲ್ಲಿ ಬೆಳ್ತಂಗಡಿ ತಾಲೂಕು ಮುಂಡೂರು ಗ್ರಾಮದ ಕೋಟಿಕಟ್ಟೆ ಎಂಬಲ್ಲಿ ಉಪನ್ಯಾಸಕ ವಿಕ್ರಮ್ ಜೈನ್ (40) ಎಂಬವರನ್ನು ಬರ್ಬರವಾಗಿ ಕಡಿದು ಕೊಂದ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಬೆಳ್ತಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ ಉಜ್ರೆಬೈಲು ಮನೆ, ಮುಂಡೂರು ಗ್ರಾಮದ ನಾಗೇಶ್ ಪೂಜಾರಿ (32), ಪರನೀರು ಮನೆ, ಮುಂಡೂರು ಗ್ರಾಮದ ಡೀಕಯ್ಯ ನಲ್ಕೆ (39) ಅವರನ್ನು ರೈಲಿನಲ್ಲಿ ಮುಂಬಯಿಗೆ ಪರಾರಿಯಾಗುತ್ತಿರುವ ವೇಳೆ ಬೈಂದೂರು ರೈಲ್ವೇ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಯಿತು.
ಇಬ್ಬರಿಗೂ ಆರೋಪಿಯೊಂದಿಗೆ ಬೇರೆ ಬೇರೆ ಕಾರಣಗಳಿಂದ ದ್ವೇಷ ಇತ್ತು. ಸಮಾನವಾದ ಉದ್ದೇಶದಿಂದ ರಾತ್ರಿ ಬೆಳ್ತಂಗಡಿ ತಾಲೂಕಿನ ಮುಂಡೂರು ಗ್ರಾಮದ ಕೋಟಿಕಟ್ಟೆ ಎಂಬಲ್ಲಿಗೆ ವಿಕ್ರಮ್ ಜೈನ್ ಅವರನ್ನು ಬರಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ವಿಕ್ರಮ್ ಜೈನ್ ರವರು ಸ್ಥಳಕ್ಕೆ ತೆರಳಿದ ಸಂದರ್ಭ, ಸಮಯದಲ್ಲಿ ಆರೋಪಿಗಳು ಚಾಕು ಹಾಗೂ ತಲವಾರುಗಳಿಂದ ಚುಚ್ಚಿ ಕಡಿದು ಕೊಲೆ ಮಾಡಿರುವುದಾಗಿ ಪೊಲೀಸರು ಪತ್ತೆಹಚ್ಚಿದ್ದು, ತನಿಖೆ ಮುಂದುವರೆದಿರುತ್ತದೆ.
ಐಟಿಐ ಉಪನ್ಯಾಸಕನ ಮಾರಕಾಸ್ತ್ರಗಳಿಂದ ಇರಿದು ಕೊಲೆ
ಜಾಹೀರಾತು

Be the first to comment on "ಉಪನ್ಯಾಸಕನ ಮರ್ಡರ್ – ಇಬ್ಬರು ಆರೋಪಿಗಳು ಅರೆಸ್ಟ್"