
ಸಜೀಪಮೂಡ ಗ್ರಾಮದ ಶ್ರೀ ಮಹಾಗಣಪತಿ ದೇವಸ್ಥಾನದ ಜೀಣೋದ್ದಾರದ ಅಂಗವಾಗಿ ನೂತನ ಶಿಲಾಮಯ ಗರ್ಭಗುಡಿ, ತೀರ್ಥಮಂಟಪ, ಸುತ್ತುಪೌಳಿ, ತೀರ್ಥಬಾವಿಯೊಂದಿಗೆ ಪುನರ್ ನಿರ್ಮಾಣ ಮಾಡಿ ಪುನರ್ ಪ್ರತಿಷ್ಠಾಪನ ಅಷ್ಟಬಂಧ ಬ್ರಹ್ಮಕಲಶೋತ್ಸವವನ್ನು ನಡೆಸುವ ಬಗ್ಗೆ ಭಕ್ತಾಭಿಮಾನಿಗಳ ವಿಶೇಷ ಸಭೆ ದೇವಾಲಯದ ವಠಾರದಲ್ಲಿ ನಡೆಯಿತು. ಆಡಳಿತ ಸಮಿತಿಯ ಅಧ್ಯಕ್ಷ ಯಶವಂತ ದೇರಾಜೆ ಅಧ್ಯಕ್ಷತೆ ವಹಿಸಿದ್ದರು.
ಪದಾಧಿಕಾರಿಗಳಾದ ಶ್ರೀಕಾಂತ ಶೆಟ್ಟಿ, ಎಂ.ಸುಬ್ರಹ್ಮಣ್ಯ ಭಟ್, ಜಯಪ್ರಕಾಶ್ ಪಿ., ಸುರೇಶ್ ಬಿ., ರಮೇಶ್ ಎ., ಲಿಂಗಪ್ಪ ಕುಲಾಲ್, ಅರವಿಂದ ಭಟ್, ಅಶೋಕ್ ಕಾರ್ಕಳ, ಸಜೀಪಮೂಡ ಗ್ರಾ.ಪಂ.ಅಧ್ಯಕ್ಷ ವಿಶ್ವನಾಥ ಬೆಳ್ಚಡ, ಗಿರೀಶ್ ಕುಮಾರ್ ಪಿ, ನರೇಂದ್ರ ಆಳ್ವ, ಚಂದ್ರಶೇಖರ ಗಟ್ಟಿ, ಚಂದ್ರಹಾಸ ಎಸ್., ಬಾಲಕೃಷ್ಣ ಎಸ್., ವಿಶ್ವನಾಥ ಕೊಟ್ಟಾರಿ, ಧ.ಗ್ರಾ. ಯೋ. ಸೇವಾ ನಿರತೆ ಕುಸುಮ, ಪುಷ್ಪಾ, ದಿವಾಕರ, ಮೋನಪ್ಪ ಮೊದಲಾದವರು ಉಪಸ್ಥಿತರಿದ್ದರು.


Be the first to comment on "ಮಹಾಗಣಪತಿ ದೇವಸ್ಥಾನ: ಭಕ್ತರ ಸಭೆ"