ದೀನಬಂಧು ವಾಟ್ಸಾಪ್ ಗ್ರೂಪಿನಿಂದ ಸಮಾಜಸೇವೆ

ಬಂಟ್ವಾಳ ತಾಲೂಕು ಬಡಗ ಬೆಳ್ಳೂರು ಗ್ರಾಮದ ಕೊಳತ್ತಮಜಲು ವಿಷ ಚಿಕಿತ್ಸಕ ಜರ್ನಾಧನ ಎಚ್.ಎಸ್. ಇವರು ತಮ್ಮಸ್ನೇಹಿತರೊಳಗೊಂಡು ಸಮಾನ ಮನಸ್ಕರು ಸೇರಿಕೊಂಡು ಪ್ರಾರಂಭಿಸಿದ ದೀನಬಂಧು ವಾಟ್ಸ್‌ಪ್ ಗ್ರೂಪಿನ ವಾರ್ಷಿಕ ಸಭೆಯು ಶ್ರೀ ಆದಿಶಕ್ತಿ ಚಾಮುಂಡೇಶ್ವರೀ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆಯಿತು.

ಜಾಹೀರಾತು

ಈ ಗ್ರೂಪಿನಲ್ಲಿ ಸೂಮಾರು 115 ಮಂದಿ ಸದಸ್ಯರು ಇದ್ದಾರೆ. ಪ್ರತಿಯೊಬ್ಬರೂ ತಮ್ಮ ತಿಂಗಳ ಉಳಿತಾಯ ಕನಿಷ್ಠ ರೂ.100 ನ್ನು ಒಟ್ಟುಮಾಡಿ ಊರಿನಲ್ಲಿರುವ ಬಡವರಿಗೆ ತಲಾ ರೂಪಾಯಿ 5000 ದಂತೆ ಸಹಾಯ ಮಾಡುತ್ತಾ ಬಂದಿರುತ್ತಾರೆ. ಈವರೆಗೆ ಸುಮಾರು 11  ಮಂದಿಗೆ ತಲಾ ರೂಪಾಯಿ ೫೦೦೦-೦೦ ದಂತೆ ಧನಸಹಾಯವನ್ನುನೀಡಿರುತ್ತಾರೆ. ಇದರಲ್ಲಿ ನಾಲ್ಕುಮಂದಿ ಕ್ಯಾನ್ಸರ್ ಪೀಡಿತರಿಗೆ ಸಹಾಯ ಮಾಡಲಾಯಿತು. ಕಿಡ್ನಿ ವೈಫಲ್ಯ ದಿಂದ ಬಳಲುತ್ತಿರುವ ವ್ಯಕ್ತಿಗೆ, ಪಕ್ಷಪಾತ ರೋಗಿಗೆ ಮತ್ತು ಬಡ ಕುಟುಂಬದ ಹುಡುಗಿ ಮದುವೆಗೆ , ಮರದಿಂದ ಬಿದ್ದು ಕಾಲು ಮುರಿತಕೊಳಗಾದ ವ್ಯಕ್ತಿಗೆ, ನೀರಲ್ಲಿ ಮುಳುಗಿ ಮರಣ ಹೊಂದಿದ ಯುವಕನ ಮನೆಯವರಿಗೆ, ಅಂಗವಿಕಲ ಮತ್ತು ಬುದ್ಧಿ ಮಾಂದ್ಯದಿಂದ ಬಳಲುತ್ತಿರುವ ಮಗುವಿನ ಮನೆಯವರಿಗೆ ಒಂದು ವರ್ಷದ ಅವಧಿಯಲ್ಲಿ ಧನ ಸಹಾಯವನ್ನು ನೀಡಿರುತ್ತಾರೆ.

ಧಾನಿಗಳಿಂದ ಹಣ ಸಂಗ್ರಹಿಸಿ ಅಥವಾ ತಮ್ಮ ಗ್ರೂಪಿನ ಸದಸ್ಯರ ಉಳಿತಾಯ ಹಣವನ್ನು ಸಂಗ್ರಹಿಸಿ ಅದನ್ನು ಬ್ಯಾಂಕಿನಲ್ಲಿ ಇಟ್ಟು ಅದರ ಬಡ್ಡಿಯಿಂದ ಬಡವರಿಗೆ ಧನಸಹಾಯವನ್ನು ಮಾಡುವ ತೀರ್ಮಾನಿಸಲಾಯಿತು.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ದೀನಬಂಧು ವಾಟ್ಸಾಪ್ ಗ್ರೂಪಿನಿಂದ ಸಮಾಜಸೇವೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*