ಮಾಣಿ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ ವತಿಯಿಂದ ನವರಾತ್ರಿ ಮಹೋತ್ಸವ

ಬಂಟ್ವಾಳ ತಾಲೂಕಿನ ಮಾಣಿಯ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರದ ವತಿಯಿಂದ ಶ್ರೀ ನವರಾತ್ರಿ ಮಹೋತ್ಸವ ಆರಂಭಗೊಂಡಿದ್ದು, 18ರವರೆಗೆ ನಡೆಯಲಿದೆ.

ಈ ಪ್ರಯುಕ್ತ ಪ್ರತಿದಿನ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 17ರಂದು ಬುಧವಾರ ಮಾಣಿ ದ.ಕ.ಹಿರಿಯ ಪ್ರಾಥಮಿಕ ಶಾಲೆ ಮಾಣಿಯಲ್ಲಿ ಶಾರದಾ ಮೂರ್ತಿ ಪ್ರತಿಷ್ಠೆ ಬೆಳಗ್ಗೆ ನಡೆಯಲಿದ್ದು, ಬಳಿಕ ಮಧ್ಯಾಹ್ನ 2ರಿಂದ ರಾವಣ ವಧೆ ಯಕ್ಷಗಾನ ತಾಳಮದ್ದಳೆ ನಡೆಯುವುದು. ರಾತ್ರಿ 7ರಿಂದ ಯುವಕ ಮಂಡಲ ನರಿಮೊಗರು ಇವರಿಂದ ಭಾರತ ವೈಭವ, ದಾಕ್ಷಾಯಿಣಿ ಕಂದೂರು, ಹರ್ಷಿತಾ ಕೆ. ಇವರಿಂದ ನೃತ್ಯ ವೈಭವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

18ರಂದು ಬೆಳಗ್ಗೆ ಸಾರ್ವಜನಿಕರಿಗೆ ಸ್ಪರ್ಧೆ ನಡೆಯಲಿದ್ದು, 11 ಗಂಟೆಯಿಂದ ಸಭಾ ಕಾರ್ಯಕ್ರಮ ಇರಲಿದೆ. ನ್ಯಾಯವಾದಿ ಮಹೇಶ್ ಕಜೆ ಅಧ್ಯಕ್ಷತೆಯಲ್ಲಿ ನ್ಯಾಯವಾದಿ ಸಹನಾ ಕುಂದರ್ ಉಪನ್ಯಾಸ ನೀಡುವರು.

ಮಧ್ಯಾಹ್ನ 1 ಗಂಟೆಗೆ ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಮತ್ತು ಭಕ್ತಾಭಿಮಾನಿಗಳಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಸಂಜೆ 4 ಗಂಟೆಗೆ ಆಯುಧ ಪೂಜಾ ಕಾರ್ಯಕ್ರಮ ಗಾಂಧಿ ಮೈದಾನದಲ್ಲಿ ನಡೆಯುವುದು. ಸಂಜೆ 7ರಿಂದ ಶ್ರೀ ಶಾರದೆಯ ಶೋಭಾಯಾತ್ರೆ ನಡೆಯಲಿದೆ.

ಅದ್ದೂರಿ ಸಂಗೀತ ರಸಮಂಜರಿ:

18ರಂದು ಗುರುವಾರ ಶಾರದಾ ಯುವ ವೇದಿಕೆ ಮಾಣಿ ವತಿಯಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು, ಸಿಂಚನ್ಸ್ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ಏರ್ಪಡಿಸಲಾಗಿದೆ. ರಾತ್ರಿ ಆಕರ್ಷಕ ವಿದ್ಯುತ್ ದೀಪಾಲಂಕಾರ, ಸುಡುಮದ್ದುಗಳೊಂದಿಗೆ ಭವ್ಯ ಶೋಭಾಯಾತ್ರೆ ನಡೆಯಲಿದೆ.

ತಾಳಮದ್ದಳೆ:

ಶ್ರೀ ಉಳ್ಳಾಲ್ತಿ ಯಕ್ಷಗಾನ ಬಯಲಾಟ ಸಮಿತಿ ಮಾಣಿ ವತಿಯಿಂದ ದಿ.ಕಿಟ್ಟಣ್ಣ ಶೆಟ್ಟಿ ಅರೆಬೆಟ್ಟು ನುಳಿಯಾಲುಗುತ್ತು ಸ್ಮರಣಾರ್ಥ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು,ರಾವಣ ವಧೆ ಪ್ರಸಂಗ ಇರಲಿದೆ. ಮಧ್ಯಾಹ್ನ 1.30ರಿಂದ ನಡೆಯುವ ತಾಳಮದ್ದಳೆಯಲ್ಲಿ ಪದ್ಯಾಣ ಗಣಪತಿ ಭಟ್, ಕಾವ್ಯಶ್ರೀ ಅಜೇರು ಭಾಗವತರಾಗಿರುವರು. ವಿನಯ ಆಚಾರ್ಯ ಕಡಬ, ಅಡೂರು ಗಣೇಶ ರಾವ್ ಮದ್ದಳೆ, ಚೆಂಡೆಯಲ್ಲಿ ಭಾಗವಹಿಸುವರು. ಮುಮ್ಮೇಳದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್, ವಾಸುದೇವ ರಂಗ ಭಟ್, ಗಣೇಶ ಶೆಟ್ಟಿ ಕನ್ನಡಿಕಟ್ಟೆ, ಪ್ರಶಾಂತ ಕುಮಾರ್ ಮತ್ತು ಪ್ರಜ್ವಲ್ ಗುರುವಾಯನಕೆರೆ ಭಾಗವಹಿಸಲಿದ್ದಾರೆ.

ಸಾರ್ವಜನಿಕ ಕಬಡ್ಡಿ, ಹಗ್ಗಜಗ್ಗಾಟ:

ಮಾಣಿ ಗಾಂಧಿ ಮೈದಾನದದಲ್ಲಿ 14ರಂದು ಸಾರ್ವಜನಿಕ ಕಬಡ್ಡಿ ಮತ್ತು ಹಗ್ಗಜಗ್ಗಾಟ ಪಂದ್ಯ ನಡೆಯಲಿದ್ದು, 1ನೇ ತರಗತಿಯಿಂದ 8ನೇ ತರಗತಿವರೆಗೂ ಕಬಡ್ಡಿ ಪಂದ್ಯಾಟಗಳಿವೆ. ಮಧ್ಯಾಹ್ನ 2 ಗಂಟೆಗೆ ಮಹಿಳೆಯರಿಗೆ ಆಟೋಟ ಸ್ಪರ್ಧೆಗಳು ನಡೆಯಲಿವೆ.

ಹೆಚ್ಚಿನ ವಿವರಗಳು ಇಲ್ಲಿವೆ.

 

 

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.

ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ 

  

 

Be the first to comment on "ಮಾಣಿ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರ ವತಿಯಿಂದ ನವರಾತ್ರಿ ಮಹೋತ್ಸವ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*