ಕಾಂಗ್ರೆಸ್ ಗೆ ಬಿಜೆಪಿಗಿಂತ ಒಂದು ಸೀಟ್ ಜಾಸ್ತಿ ಗಳಿಸಿದ ಹೆಗ್ಗಳಿಕೆ

www.bantwalnews.comಸಂಪಾದಕ: ಹರೀಶ ಮಾಂಬಾಡಿ

ಸೋಮವಾರ ನಡೆದ ಬಂಟ್ವಾಳ ಪುರಸಭೆ ಚುನಾವಣೆ ಫಲಿತಾಂಶ ಪ್ರಕ್ರಿಯೆ ಹಲವು ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಅವುಗಳಲ್ಲಿ ಒಂದು ಉಪಾಧ್ಯಕ್ಷರಾಗಿದ್ದ ಮಹಮ್ಮದ್ ನಂದರಬೆಟ್ಟು 4 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ 25 ಮಂದಿಯಲ್ಲಿ 12 ಮಂದಿ ಗೆಲುವು ಸಾಧಿಸಿದ್ದಾರೆ. (ಉಳಿದ ಪಕ್ಷಗಳ ಬಲಾಬಲ: ಬಿಜೆಪಿ 11, ಎಸ್.ಡಿ.ಪಿ.ಐ. 4). ಕಳೆದ ಬಾರಿ 23ರಲ್ಲಿ 13 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ ಈ ಬಾರಿ 27ರಲ್ಲಿ 12 ಸ್ಥಾನ ಗಳಿಸಿದ್ದು ಒಟ್ಟಾರೆಯಾಗಿ ನೋಡುವುದಾದರೆ ಸಂಖ್ಯಾಬಲದಲ್ಲಿ ಕಡಿಮೆ ಎನಿಸಿದೆ. ಆದರೆ ಇತರ ಪಕ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್ ಆಯ್ಕೆಯಾದವರಲ್ಲಿ ಹೆಚ್ಚು ಸ್ಥಾನ ಗಳಿಸಿದ ಪಕ್ಷ.

ಕಳೆದ ಬಾರಿಯ ವಿಧಾನಸಭೆ ಚುನಾವಣೆಯ ಫಲಿತಾಂಶದ ಬಳಿಕ ನಡೆದ ಪ್ರಥಮ ಮತದಾನ ಇದು. ಕಾಂಗ್ರೆಸ್ ಪರ ಜನರು ಬೆಂಬಲಕ್ಕಿರುವುದನ್ನು ಇದು ತೋರಿಸಿಕೊಟ್ಟಿದೆ ಎನ್ನುತ್ತಾರೆ ಬಂಟ್ವಾಳ ನ್ಯೂಸ್ ಜೊತೆ ಮಾತನಾಡಿದ ಮಾಜಿ ಸಚಿವರೂ ಚುನಾವಣೆಯಲ್ಲಿ ಪಕ್ಷದ ಸಾರಥ್ಯ ವಹಿಸಿದವರೂ ಆಗಿರುವ ಬಿ.ರಮಾನಾಥ ರೈ.

ಕಾಂಗ್ರೆಸ್ ನಿಂದ ಕಳೆದ ಸಾಲಿನ ಸದಸ್ಯರಾದ ರಾಮಕೃಷ್ಣ ಆಳ್ವ (ಮಾಜಿ ಅಧ್ಯಕ್ಷ), ಮಹಮ್ಮದ್ ನಂದರಬೆಟ್ಟು (ಮಾಜಿ ಉಪಾಧ್ಯಕ್ಷ), ವಾಸು ಪೂಜಾರಿ (ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ), ಗಂಗಾಧರ ಪೂಜಾರಿ, ಮಹಮ್ಮದ್ ಶರೀಫ್, ಜೆಸಿಂತಾ ಡಿಸೋಜ ಗೆದ್ದಿದ್ದಾರೆ. ನಾಮನಿರ್ದೇಶಿತ ಸದಸ್ಯರಾಗಿದ್ದ ಸಿದ್ದೀಕ್ ಗುಡ್ಡೆಯಂಗಡಿ ಬೃಹತ್ ಅಂತರದಲ್ಲಿ ಗೆದ್ದಿರುವುದು ವಿಶೇಷ. ಒಟ್ಟು 6 ಮಂದಿ ಮತ್ತೆ ಪುರಸಭೆಗೆ ಆಯ್ಕೆಗೊಂಡವರು.

ವಾರ್ಡ್ 1-ಲೊರೆಟ್ಟೊಪದವು: ಬಿ.ವಾಸು ಪೂಜಾರಿ (ಕಾಂಗ್ರೆಸ್),

ವಾರ್ಡ್ 2-ಮಂಡಾಡಿ: ಗಂಗಾಧರ ಪೂಜಾರಿ ಮಂಡಾಡಿ, (ಕಾಂಗ್ರೆಸ್),

ವಾರ್ಡ್ 5 ಜಕ್ರಿಬೆಟ್ಟು: ಜನಾರ್ಧನ ಚೆಂಡ್ತಿಮಾರ್ (ಕಾಂಗ್ರೆಸ್),

ವಾರ್ಡ್ 16-ನಂದರಬೆಟ್ಟು: ಮುಹಮ್ಮದ್ ನಂದರಬೆಟ್ಟು (ಕಾಂಗ್ರೆಸ್),

ವಾರ್ಡ್ 17-ಪರ್ಲಿಯಾ: ಲುಕ್ಮಾನ್ (ಕಾಂಗ್ರೆಸ್),

ವಾರ್ಡ್ 18-ಶಾಂತಿ ಅಂಗಡಿ: ಹಸೈನಾರ್ (ಕಾಂಗ್ರೆಸ್),

ವಾರ್ಡ್ 19-ಅದ್ದೇಡಿ: ಮುಹಮ್ಮದ್ ಶರೀಫ್ (ಕಾಂಗ್ರೆಸ್),

ವಾರ್ಡ್ 20-ಮೊಡಂಕಾಪು: ಲೋಲಾಕ್ಷ ಶೆಟ್ಟಿ 

ವಾರ್ಡ್ 21-ತಲಪಾಡಿ: ರಾಮಕೃಷ್ಣ ಆಳ್ವ (ಕಾಂಗ್ರೆಸ್)

ವಾರ್ಡ್ 24-ಆಲಡ್ಕ: ಅಬೂಬಕರ್ ಸಿದ್ದೀಕ್ ಗುಡ್ಡೆಅಂಗಡಿ (ಕಾಂಗ್ರೆಸ್),

ವಾರ್ಡ್ 25-ಬೋಳಂಗಡಿ: ಜೆಸಿಂತಾ ಡಿಸೋಜ (ಕಾಂಗ್ರೆಸ್),

ವಾರ್ಡ್ 26-ಮೆಲ್ಕಾರ್: ಗಾಯತ್ರಿ ಪ್ರಕಾಶ್ (ಕಾಂಗ್ರೆಸ್),

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ.
  


  

  

Be the first to comment on "ಕಾಂಗ್ರೆಸ್ ಗೆ ಬಿಜೆಪಿಗಿಂತ ಒಂದು ಸೀಟ್ ಜಾಸ್ತಿ ಗಳಿಸಿದ ಹೆಗ್ಗಳಿಕೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*