ಅಧಿಕಾರ ಗದ್ದುಗೆಗೆ ಏರುತ್ತಾ ಎಸ್.ಡಿ.ಪಿ.ಐ ಅಥವಾ ಕಿಂಗ್ ಮೇಕರ್ ಆಗುತ್ತಾ?

ಜಾಹೀರಾತು

www.bantwalnews.com – ಸಂಪಾದಕ: ಹರೀಶ ಮಾಂಬಾಡಿ

ಪರಿಸ್ಥಿತಿ ಹೇಗೆ ಬೇಕಾದರೂ ಆಗಬಹುದು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾರೆ, ಅವರ ಪಕ್ಷ ಗಳಿಸಿದ ಸ್ಥಾನವನ್ನು ಗಮನಿಸಿ. ಹೀಗೆ ನಾವು 12 ಸ್ಥಾನಗಳಲ್ಲಷ್ಟೇ ಸ್ಪರ್ಧಿಸಿರಬಹುದು. ಆದರೆ ರಾಜಕೀಯವೇ ಬೇರೆ. ಅಧಿಕಾರ ಪಡೆಯಲು ನಾವು ಗೆಲ್ಲುವ ಸ್ಥಾನಗಳೂ ನಿರ್ಣಾಯಕ. ಫಲಿತಾಂಶ ಬಂದಾಗ ನೋಡಿ ಎಂದು ಕೆಲ ದಿನಗಳ ಹಿಂದಷ್ಟೇ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಧ್ಯಮ ಸಂವಾದದಲ್ಲಿ  ಎಸ್.ಡಿ.ಪಿ.ಐ. ಬಂಟ್ವಾಳ ಪುರಸಭೆ ಘಟಕ ಅಧ್ಯಕ್ಷ ಮೊನೀಶ್ ಆಲಿ ಹೇಳಿದಾಗ ಪಕ್ಕದಲ್ಲೇ ಇದ್ದ ಕಾಂಗ್ರೆಸ್, ಬಿಜೆಪಿಯ ಪ್ರತಿನಿಧಿಗಳು ನಾವು ಬಹುಮತ ಇಲ್ಲದಿದ್ದರೆ ವಿರೋಧ ಪಕ್ಷದಲ್ಲಿ ಕೂರಲು ಸಿದ್ಧ ಎಂದಿದ್ದರು. ಆದರೆ ಪರಿಸ್ಥಿತಿ ಹೇಗಿದೆ ಎಂದರೆ ಬಿಜೆಪಿ 11, ಕಾಂಗ್ರೆಸ್ 12, ಎಸ್.ಡಿ.ಪಿ.ಐ. 4 ಸ್ಥಾನಗಳನ್ನು ಗಳಿಸಿದೆ. ಸೋಮವಾರದ ಫಲಿತಾಂಶದ ಚಿತ್ರಣ ಬಂಟ್ವಾಳದ ರಾಜಕೀಯ ಚಿತ್ರಣವನ್ನು ಬದಲಿಸಲೂಬಹುದು.

ಎಂಎಲ್ಎ ಮತ್ತು ಎಂಪಿ ಅವರ ಮತಗಳನ್ನು ಸೇರಿಸಿದರೆ ಬಿಜೆಪಿ 13, ಕಾಂಗ್ರೆಸ್ 12 ಮತ್ತು ಎಸ್.ಡಿ.ಪಿ.ಐ. 4 ಸ್ಥಾನ ಪಡೆಯುತ್ತದೆ. ಆದರೂ ಬಹುಮತ ಗಳಿಸಲು ಎಸ್.ಡಿ.ಪಿ.ಐ. ಕೈಗೊಳ್ಳುವ ನಿರ್ಧಾರ ನಿರ್ಣಾಯಕ. ಹೀಗಾಗಿ ಅಧಿಕಾರ ಗದ್ದುಗೆಗೆ ಎಸ್.ಡಿ.ಪಿ.ಐ ತಾನೇ ಏರುತ್ತಾ, ಅಥವಾ ಕಿಂಗ್ ಮೇಕರ್ ಆಗುತ್ತಾ ಎಂಬುದು ಕುತೂಹಲಕಾರಿ.

ಎಸ್.ಡಿ.ಪಿ.ಐ. ನಲ್ಲಿ ಕಳೆದ ಸಾಲಿನ ಸದಸ್ಯ ಮೊನೀಶ್ ಆಲಿ ಗೆದ್ದಿದ್ದರೆ, ಉಳಿದವರು ಹೊಸಬರು. ಕಳೆದ ಬಾರಿ 3 ಸ್ಥಾನ ಗಳಿಸಿದ್ದ ಪಕ್ಷ ಈ ಬಾರಿ ಬಲವರ್ಧನೆ ಮಾಡಿಕೊಂಡಿದೆ. ಹಾಗೂ ಕೆಲವು ಸ್ಥಾನಗಳಲ್ಲಿ ಉತ್ತಮ ಫೈಟ್ ಕೊಟ್ಟಿದೆ.

ಗೆದ್ದವರು ಇವರು.

ಮೊನೀಶ್ ಆಲಿ (8ನೇ ವಾರ್ಡ್)

ಇದ್ರಿಸ್ (23ನೇ ವಾರ್ಡ್)

ಸಂಶಾದ್ (ವಾರ್ಡ್ 13)

ಝೀನತ್ ಫಿರೋಜ್ (ವಾರ್ಡ್ 14)

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
ಜಾಹೀರಾತು
ಜಾಹೀರಾತು

Be the first to comment on "ಅಧಿಕಾರ ಗದ್ದುಗೆಗೆ ಏರುತ್ತಾ ಎಸ್.ಡಿ.ಪಿ.ಐ ಅಥವಾ ಕಿಂಗ್ ಮೇಕರ್ ಆಗುತ್ತಾ?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*