ಸ್ಥಾನ ಬಲ ಏರಿಸಿಕೊಂಡ ಬಿಜೆಪಿ – ಬಂಟ್ವಾಳ ಪುರಸಭೆಯಲ್ಲೀಗ 11 ಸದಸ್ಯರು

ಜಾಹೀರಾತು

www.bantwalnews.comಸಂಪಾದಕ: ಹರೀಶ ಮಾಂಬಾಡಿ

23 ವಾರ್ಡುಗಳಿದ್ದಾಗ ಬಿಜೆಪಿ 5 ಸ್ಥಾನಗಳನ್ನು ಗಳಿಸಿತ್ತು. ಈ ಬಾರಿ ನಾಲ್ಕು ಸೀಟುಗಳು ಜಾಸ್ತಿ. ಬಿಜೆಪಿಯ ಸದಸ್ಯ ಬಲವೂ ವೃದ್ಧಿಯಾಗಿದೆ. ಸೋಮವಾರ ಪ್ರಕಟಗೊಂಡ ಫಲಿತಾಂಶದಲ್ಲಿ ಒಟ್ಟು 27 ಸದಸ್ಯರ ಪೈಕಿ ಬಿಜೆಪಿಯಿಂದ 11, ಕಾಂಗ್ರೆಸ್ ನಿಂದ 12, ಎಸ್.ಡಿ.ಪಿ.ಐ.ನಿಂದ 4 ಸದಸ್ಯರು ಗೆದ್ದಿದ್ದಾರೆ. ಇದು ಗಮನಾರ್ಹ ಸಾಧನೆ ಎನ್ನುತ್ತಾರೆ ಬಂಟ್ವಾಳನ್ಯೂಸ್ ಜೊತೆ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ.

ಬಿಜೆಪಿಯಿಂದ ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಗಳಿಸಿರುವ ಎ.ಗೋವಿಂದ ಪ್ರಭು ಜಯದ ನಗೆ ಬೀರಿ ಏಳನೇ ಬಾರಿ ಪುರಸಭೆ ಪ್ರವೇಶಿಸಲಿದ್ದಾರೆ. ಅವರೊಂದಿಗೆ ಪುರಸಭೆಯಲ್ಲಿ ಕುಳಿತುಕೊಳ್ಳುವವರು ಎಲ್ಲರೂ ಹೊಸಬರೇ. ಅವರ ಪೈಕಿ, ವಿದ್ಯಾವತಿ ಪ್ರಮೋದ್ ಕುಮಾರ್ ಬಹಳ ಹಿಂದೆ ಪಟ್ಟಣ ಪಂಚಾಯತ್ ಸದಸ್ಯೆಯಾಗಿದ್ದವರು. ಜನಪ್ರತಿನಿಧಿಯಾಗಿ ಅನುಭವಿ.  ಹೀಗಾಗಿ ಬಿಜೆಪಿ ಟೀಮ್ ಗೆ ಗೋವಿಂದ ಪ್ರಭುಗಳೇ ಲೀಡರ್.

ಬಿಜೆಪಿ ಗೆದ್ದ ವಾರ್ಡುಗಳು ಇವು.

ವಾರ್ಡ್ 3 -ಮಣಿ:  ಮೀನಾಕ್ಷೀ ಜೆ .ಗೌಡ (ಬಿಜೆಪಿ).

ವಾರ್ಡ್ 4-ಕಾಲೇಜು ರಸ್ತೆ:  ರೇಖಾ ರಮಾನಾಥ ಪೈ (ಬಿಜೆಪಿ).

ವಾರ್ಡ್ 6-ಹೊಸ್ಮರ್: ದೇವಕಿ ಶಿವಪ್ಪ ಪೂಜಾರಿ (ಬಿಜೆಪಿ).

ವಾರ್ಡ್ 7-ಬಂಟ್ವಾಳ ಪೇಟೆ:  ಶಶಿಕಲಾ ಪ್ರಭಾಕರ್ (ಬಿಜೆಪಿ),

ವಾರ್ಡ್ 9-ಭಂಡಾರಿಬೆಟ್ಟು:  ಹರಿಪ್ರಸಾದ್ (ಬಿಜೆಪಿ).

ವಾರ್ಡ್ 10-ಕಾಮಾಜೆ: ಶೋಭಾ ಹರಿಶ್ಚಂದ್ರ (ಬಿಜೆಪಿ).

ವಾರ್ಡ್ 11-ಸಂಚಯಗಿರಿ:  ಜಯಂತಿ ವಸಂತ ಕುಲಾಲ್ (ಬಿಜೆಪಿ).

ವಾರ್ಡ್ 12-ಅಜ್ಜಿಬೆಟ್ಟು:  ವಿದ್ಯಾವತಿ ಪ್ರಮೋದ್ ಕುಮಾರ್ (ಬಿಜೆಪಿ).,

ವಾರ್ಡ್ 15-ಎಪಿಎಂಸಿ ಕೈಕುಂಜೆ: ಅರ್ಲ ಗೋವಿಂದ ಪ್ರಭು (ಬಿಜೆಪಿ),

ವಾರ್ಡ್ 22-ಪಲ್ಲಮಜಲು:  ಚೈತನ್ಯ ಎ.ದಾಸ್ (ಬಿಜೆಪಿ)

ವಾರ್ಡ್ 27-ಬೊಂಡಾಲ:  ಜಯರಾಮ ನಾಯ್ಕ (ಬಿಜೆಪಿ)

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
ಜಾಹೀರಾತು
ಜಾಹೀರಾತು

Be the first to comment on "ಸ್ಥಾನ ಬಲ ಏರಿಸಿಕೊಂಡ ಬಿಜೆಪಿ – ಬಂಟ್ವಾಳ ಪುರಸಭೆಯಲ್ಲೀಗ 11 ಸದಸ್ಯರು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*