- ಡಾ.ಎ.ಜಿ.ರವಿಶಂಕರ್
- ಅಂಕಣ: ಪಾಕಶಾಲೆಯೇ ವೈದ್ಯಶಾಲೆ
ಪುಲಾವ್, ಘೀ ರೈಸ್ ಎಂದಾಕ್ಷಣ ದಾಲ್ಚೀನಿ ತೊಗಟೆ ಅಥವಾ ಎಲೆಯನ್ನು ಹಾಕದೇ ಇರುವುದಿಲ್ಲ .ಇದರಿಂದ ಪರಿಮಳ ಹಾಗು ರುಚಿ ಎರಡೂ ಅಧಿಕವಾಗುತ್ತದೆ. ಹಾಗೆಯೇ ದೇಹದ ಸೌಂದರ್ಯ ಮತ್ತು ಆರೋಗ್ಯದ ವಿಷಯದಲ್ಲೂ ಸಹ ದಾಲ್ಚಿನಿ ತನ್ನದೇ ಆದ ಸ್ಥಾನವನ್ನು ಪಡೆದಿದೆ.
- ಸಣ್ಣ ತುಂಡು ದಾಲ್ಚೀನಿಯನ್ನು ಜಗಿಯುವುದರಿಂದ ಅಥವಾ ದಾಲ್ಚೀನಿ ಕಷಾಯದಲ್ಲಿ ಬಾಯಿ ಮುಕ್ಕಳಿಸುವುದರಿಂದ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.
- ಪ್ರತಿದಿನ ಬೆಳಗ್ಗೆ ದಾಲ್ಚೀನಿ ಕಷಾಯ ಕುಡಿಯುವುದರಿಂದ ಶರೀರದ ಬೇಡವಾದ ಕೊಬ್ಬು ಕಡಿಮೆಯಾಗುತ್ತದೆ.
- ದಾಲ್ಚೀನಿ ಕಷಾಯವು ಜೀರ್ಣಶಕ್ತಿಯನ್ನು ಅಧಿಕಗೊಳಿಸುತ್ತದೆ ಮತ್ತು ಹೊಟ್ಟೆಯಲ್ಲಿನ ವಾಯು ಹಾಗು ಉರಿಊತವನ್ನು ನಿವಾರಿಸುತ್ತದೆ
- ದಲ್ಚೀನಿ ಮತ್ತು ಜೇನುತುಪ್ಪದ ಮಿಶ್ರಣವು ಹೃದಯದ ತೊಂದರೆಗಳನ್ನು ತಡೆಕಟ್ಟಲು ಮತ್ತು ಶರೀರದ ಅಧಿಕ ತೂಕವನ್ನು ಇಳಿಸಲು ಸಹಕರಿಸುತ್ತದೆ.
- ದಿನಕ್ಕೆ 6 ಗ್ರಾಂ ನಷ್ಟು ದಲ್ಚೀನಿ ಬಳಕೆಯು ಮಧುಮೇಹವನ್ನು ಹತೋಟಿಯಲ್ಲಿಡಲು ಸಹಕರಿಸುತ್ತದೆ.
- ದಾಲ್ಚೀನಿಯನ್ನು ಜೇನುತುಪ್ಪ ಹಾಗು ಶುಂಠಿಯ ಜೊತೆ ಸೇರಿಸಿ ತಿಂದರೆ ಶೀತ, ನೆಗಡಿ ಕಡಿಮೆಯಾಗುತ್ತದೆ.
- ಮುಟ್ಟಿನ ಸಮಯದಲ್ಲಿ ಅಧಿಕ ರಕ್ತಸ್ರಾವ ಇದ್ದರೆ ದಲ್ಚೀನಿಯ ಕಷಾಯಮಾಡಿ ಕುಡಿಯಬೇಕು.
- ಒಂದು ಲೋಟ ತಣ್ಣಗಿರುವ ದಾಲ್ಚೀನಿ ಕಷಾಯಕ್ಕೆ 2 ಚಮಚ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ವಾತ ಸಂಬಂಧಿತ ಸಂಧುಗಳ ನೋವು ಕಡಿಮೆಯಾಗುತ್ತದೆ.
- ದಾಲ್ಚೀನಿ ಸ್ತ್ರೀಯರಲ್ಲಿ ಹಾರ್ಮೋನ್ಗಳ ಸಮತೋಲನವನ್ನು ಕಾಪಾಡುವುದರ ಮೂಲಕ ಬಂಜೆ ತನವನ್ನು ನಿವಾರಿಸುತ್ತದೆ.
- ಮೆದುಳಿಗೆ ಬಲವನ್ನು ನೀಡುವುದರ ಮೂಲಕ ಇದು ನರಸಂಬಂಧಿ ವ್ಯಾಧಿಗಳಾದ ಮರೆಗುಳಿತನ, ಪಾರ್ಕಿನ್ಸನ್ ಇತ್ಯಾದಿಗಳನ್ನು ಹತೋಟಿಯಲ್ಲಿಡಲು ಸಹಕರಿಸುತ್ತದೆ.
- ದಾಲ್ಚೀನಿ ಕರುಳಿನ ಆರೋಗ್ಯಕ್ಕೆ ಉತ್ತಮ ದ್ರವ್ಯವಾಗಿದ್ದು ಮಲಬದ್ದತೆ, ನೋವು, ವಾಯುವಿನ ಒತ್ತಡ, Irritable Bowel Syndrome, ಇತ್ಯಾದಿಗಳನ್ನು ಹೋಗಲಾಡಿಸುತ್ತದೆ.
- ಇದು ಶರೀರದ ರಕ್ತಸಂಚಾರವನ್ನು ಅಧಿಕಗೊಲಿಸುವುದರ ಮೂಲಕ ಶರೀರವನ್ನು ಬೆಚ್ಚಗೆ ಇಡಲು ಸಹಕರಿಸುತ್ತದೆ. ಆದುದರಿಂದ ಚಳಿಗಾಲದಲ್ಲಿ ದಾಲ್ಚೀನಿ ಕಷಾಯವು ಉತ್ತಮ ದ್ರವ ಆಹಾರವಾಗಿದೆ.
- ದಾಲ್ಚೀನಿ ಸ್ಮರಣ ಶಕ್ತಿಯನ್ನು ವೃದ್ಧಿಸುತ್ತದೆ ಮತ್ತು ಶರೀರಕ್ಕೆ ಉಲ್ಲಾಸವನ್ನು ನೀಡುತ್ತದೆ.
- ರಾತ್ರಿ ಸಮಯದಲ್ಲಿ ಹಾಲಿಗೆ ದಾಲ್ಚೀನಿ ಹಾಕಿ ಕುದಿಸಿ ಕುಡಿಯುವುದರಿಂದ ನಿದ್ರಾಹೀನತೆಯನ್ನು ಹೋಗಲಾಡಿಸಬಹುದು.
- ದಾಲ್ಚೀನಿ ಹುಡಿಯನ್ನು ಜೇನುತುಪ್ಪದಲ್ಲಿ ಕಲಸಿ ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಮಾಯವಾಗುತ್ತದೆ ಮತ್ತು ಚರ್ಮದ ಕಾಂತಿ ಅಧಿಕವಾಗುತ್ತದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಸೌಂದರ್ಯವರ್ಧಕ, ಆರೋಗ್ಯರಕ್ಷಕ ದಾಲ್ಚೀನಿ"