ಹಾಲು ಹೇಗೆ ಒಳ್ಳೆಯದು?

ಹಾಲು ಎಂದಾಕ್ಷಣ ಎಲ್ಲರಿಗೂ ಅದ ಆರೋಗ್ಯಕ್ಕೆ ಒಳ್ಳೆಯದು ಎಂದಷ್ಟೇ ತಿಳಿದಿದಿದೆ. ಆದರೆ ಬಹು ಪಾಲು ಜನರಿಗೆ ಯಾವ ಸಂದರ್ಭದಲ್ಲಿ, ಯಾವ ರೀತಿಯಾಗಿ ಉಪಯೋಗಕ್ಕೆ ಬರುತ್ತದೆ ಎಂದು ತಿಳಿದಿಲ್ಲ. ಹಾಲು ಒಂದು ಸಮತೋಲಿತ ಆಹಾರವಾಗಿದೆ.

ಜಾಹೀರಾತು
 1. ಬಳಲಿ ಬಾಯಾರಿ ಮನೆಗೆ ಬಂದಾಗ 1 ಲೋಟ ಹಾಲು ಕುಡಿದರೆ ಶರೀರಕ್ಕೆ ಮುದ ನೀಡುತ್ತದೆ,ಆಯಾಸ ನಿವಾರಿಸುತ್ತದೆ ಮತ್ತು ಶರೀರದ ಧಾತುಗಳಿಗೆ ಕೂಡಲೇ ಬಲವನ್ನು ನೀಡುತ್ತದೆ.
 2. ಹಾಲಿನಲ್ಲಿ ಯಥೇಷ್ಟವಾಗಿ ಕ್ಯಾಲ್ಸಿಯಂ ಅಂಶ ಇರುವುದರಿಂದ ಇದು ಮಕ್ಕಳಲ್ಲಿ ಮೂಳೆಯ ಹಾಗು ಹಲ್ಲುಗಳ  ಬೆಳವಣಿಗೆಗೆ ಹಾಗು ವಯಸ್ಕರಲ್ಲಿ ಮೂಳೆಯ ದೃಢತೆಗೆ ಸಹಕಾರಿಯಾಗಿದೆ.
 3. ಒಣ ಚರ್ಮ ಇದ್ದು ,ಚರ್ಮದ ಮೇಲ್ಪದರ ಬಿರಿಯುವುದಿದ್ದರೆ ಚರ್ಮದ ಮೇಲೆ ಹಸಿ ಹಾಲನ್ನು ಹಚ್ಚಬೇಕು.ಇದರಿಂದ ಚರ್ಮವು ನುಣುಪಾಗಿ ಕಾಂತಿ ಅಧಿಕವಾಗುತ್ತದೆ.
 4. ಕಾಲಿನ ಹಿಮ್ಮಡಿ ಒಡೆಯುವುದಿದ್ದರೆ ಕಾಲನ್ನು ಪ್ರತಿನಿತ್ಯ ಹದಾ ಬೆಚ್ಚಗಿರುವ ಹಾಲಿನಲ್ಲಿ ಮುಳುಗಿಸಿ ಇಡಬೇಕು.
 5. ಮೈಗ್ರೈನ್ ತಲೆ ನೋವಿನಿಂದ ಬಳಲಿತ್ತಿರುವವರು ಕುದಿಸಿ ಆರಿಸಿದ ಹಾಲಿಗೆ ಸಕ್ಕರೆ ಹಾಕಿ ಕುಡಿಯಬೇಕು
 6. ಮುಟ್ಟಿನ ಮೊದಲು ಆಯಾಸ ಹಾಗು ಮಾನಸಿಕ ಕಿರಿಕಿರಿಯಾಗುತ್ತಿದ್ದರೆ ಒಂದು ಲೋಟ ಹಾಲು ಸೇವಿಸಬೇಕು.
 7. ಅತಿಯಾದ ಖಾರ ಅಥವಾ ಮಸಾಲೆ ಪದಾರ್ಥ ಸೇವಿಸಿ ಹೊಟ್ಟೆ ಹಾಗೆ ಎದೆ ಉರಿ ಇದ್ದರೆ ಕುದಿಸಿ ಆರಿಸಿದ ತಂಪಾದ ಹಾಲನ್ನು ಕುಡಿಯಬೇಕು.
 8. ಹಾಲು ಜಠರ ಹಾಗು ಕರುಳಿಗೆ ತೇವಾಂಶವನ್ನು ನೀಡುವುದರ ಮೂಲಕ ಜೀರ್ಣ ಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಮಲಬದ್ದತೆಯನ್ನು ನಿವಾರಿಸುತ್ತದೆ.
 9. ಹೊಟ್ಟೆಯಲ್ಲಿ ಹುಣ್ಣು ಇರುವವರು ಪ್ರತಿದಿನ ಹಾಲು ಕುಡಿಯುವುದರಿಂದ ಹುಣ್ಣು ವಾಸಿಯಾಗಲು ಸಹಕರಿಸುತ್ತದೆ.
 10. ಹಾಲು ರಕ್ತ ಹೆಪ್ಪು ಕಟ್ಟುವುದನ್ನು ತಡೆಯುವುದರ ಮೂಲಕ ರಕ್ತ ನಾಳಗಳಲ್ಲಿ ಸರಾಗವಾಗಿ ರಕ್ತ ಪರಿಚಲನೆಯಾಗಲು ಸಹಕರಿಸುತ್ತದೆ.
 11. ತಂಪಾದ ಹಾಲನ್ನು ಕುಡಿಯುವುದರಿಂದ ಮೂಗಿನ ರಕ್ತಸ್ರಾವ, ಮುಟ್ಟಿನ ಅತಿಯಾದ ರಕ್ತಸ್ರಾವ ಇತ್ಯಾದಿಗಳು ಕಡಿಮೆಯಾಗುತ್ತದೆ.
 12. ಹಾಲನ್ನು ತಲೆಗೆ ಧಾರೆ ಎರೆಯುವುದರಿಂದ ನಿದ್ರಾಹೀನೆತೆ, ತಲೆನೋವು ಕಡಿಮೆಯಾಗುತ್ತದೆ.
 13. ದನದ ಹಾಲು ದೊಡ್ಡ ಕರುಳಿನ ಸ್ನೇಹಿಯಾಗಿದ್ದು ಕರುಳಿನ ಕ್ಯಾನ್ಸರ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
 14. ದನದ ಹಾಲಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಬಾಯಿಹುಣ್ನು ಕಡಿಮೆಯಾಗುತ್ತದೆ ಮತ್ತು ಗಂಟಲು ಒಣಗುವುದು ದೂರವಾಗುತ್ತದೆ.
 15. ಹಾಲಿನ ಸೇವನೆಯಿಂದ ಶರೀರದ ಮಾಂಸ,ಮೂಳೆ ಇತ್ಯಾದಿ ಧಾತುಗಳು ದ್ರುಢವಾಗುತ್ತವೆ.
 16. ಸಂಧುಗಳ ಸವೆತ ಇದ್ದಾಗ ಹಾಲನ್ನು ಸಂಧುಗಳ ಮೇಲೆ ಲೇಪಿಸಿದರೆ ನೋವು ಕಡಿಮೆಯಾಗುತ್ತದೆ ಮತ್ತು ಸಂಧುಗಳು ದ್ರುಢವಾಗಿರಲು ಸಹಕರಿಸುತ್ತದೆ.
 17. ಹಾಲು ಬುದ್ಧಿ ಹಾಗು ಮೇಧಾ ಶಕ್ತಿ ಹಾಗು ವ್ಯಾಧಿ ಕ್ಷಮತ್ವವನ್ನು ಹೆಚ್ಚಿಸುತ್ತದೆ.

 

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು

About the Author

Dr. Ravishankar A G
ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.

Be the first to comment on "ಹಾಲು ಹೇಗೆ ಒಳ್ಳೆಯದು?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*